ಕರಾವಳಿಕೊಡಗು

ಮಡಿಕೇರಿಯ ೭ನೇ ವಿದ್ಯಾರ್ಥಿಯ ಸಾಧನೆ:ಪ್ರಬಂಧ ಮಂಡನೆ,ಬಾಲವಿಜ್ಞಾನಿ ಪ್ರಶಸ್ತಿಗೂ ಆಯ್ಕೆ

ನ್ಯೂಸ್ ನಾಟೌಟ್ : ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಮಿತಿ ಮೀರಿದ್ದು, ಇದಕ್ಕಾಗಿ ಪ್ರತಿಭಟನೆಗಳೇ ನಡೆದಿವೆ. ಪ್ರತಿ ನಿತ್ಯವೂ ಕಾಡಾನೆ ದಾಳಿಯಿಂದ ಬೆಳೆ ಹಾನಿಯಾವುದೇ ಅಥವಾ ಪ್ರಾಣ ಹೋಗುವುದೇ ಎಂದು ಚಿಂತೆಯಲ್ಲಿ ಕಾಲ ಕಳಿಬೇಕಾದ ಪರಿಸ್ಥಿತಿ ಇಲ್ಲಿನ ಜನರದ್ದು. ಕಾಡಾನೆ ಕಾಟ ತಪ್ಪಿಸುವಂತೆ ಆಗ್ರಹಿಸಿ, ಸಾವಿರಾರು ರೈತರು,ಕಾರ್ಮಿಕರು ಹೋರಾಟವನ್ನು ಮಾಡಿದ್ದಾರೆ. ಇದೀಗ ಪುಟ್ಟ ಬಾಲಕನೋರ್ವ ಅಲ್ಲಿನ ಗಂಭೀರ ಸಮಸ್ಯೆಯನ್ನು ಮನಗಂಡು ಪ್ರಬಂಧವನ್ನೇ ಮಂಡಿಸಿದ್ದಾನೆ.ಅದು ಕೂಡ ೭ನೇ ತರಗತಿ ವಿದ್ಯಾರ್ಥಿ.ಜಿಲ್ಲಾ ಮಟ್ಟದ ಬಾಲವಿಜ್ಞಾನಿ ಪ್ರಶಸ್ತಿಗೂ ಆಯ್ಕೆಯಾಗಿದ್ದಾನೆ ಎನ್ನುವುದು ವಿಶೇಷ.

ಹೆಮ್ಮೆ ಪಡಬೇಕಾದ ವಿಚಾರ:

ಕಾಡಾನೆ ಮತ್ತು ಮಾನವ ಸಂಘರ್ಷ ಕುರಿತು ಶಿಕ್ಷಕಿ ಟಿ.ವಿ.ಶೈಲಾ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ ಹುಡುಗ ಹೊಸಕೋಪ್ಟೆರಾಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ. ಹೆಸರು ಬಿ.ಆರ್.ಚೇತನ್‌. ಜಿಲ್ಲಾಮಟ್ಟದ ಬಾಲವಿಜ್ಞಾನಿ ಪ್ರಶಸ್ತಿಗೂ ಆಯ್ಕೆಯಾಗಿದ್ದಾನೆ.ಕಲಬುರಗಿಯಲ್ಲಿ ಜ.16ರಿಂದ 3 ದಿನ ನಡೆಯಲಿರುವ ರಾಜ್ಯಮಟ್ಟದ 30ನೇ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಕೊಡಗು ಜಿಲ್ಲೆಯಿಂದ 8 ಕಿರಿಯ ವಿಜ್ಞಾನಿಗಳು ಆಯ್ಕೆಯಾಗಿದ್ದಾರೆ ಎಂದರೆ ಅಚ್ಚರಿ ಪಡಬೇಕಾದ ವಿಚಾರ.

೮ ಕಿರಿಯ ವಿಜ್ಞಾನಿಗಳು ಆಯ್ಕೆ:

ಕಿರಿಯ ವಿಭಾಗದಲ್ಲಿ ಮಡಿಕೇರಿಯ ಎ.ಎಲ್.ಜಿ.ಕ್ರೆಸೆಂಟ್ ಶಾಲೆಯ ಫಾತಿಮತ್ ಸಿಫಾ ಮತ್ತು ಉಮ್ಮೆ ಹರ್ಮಾನ್, ಹಿರಿಯ ವಿಭಾಗದಲ್ಲೂ ಇದೇ ಶಾಲೆಯ ಕೆ.ಎಂ.ಅನ್ಸಿಫ್ ಮತ್ತು ಲಬೀಬ್ ಅನ್ಸಾರಿ ಮಂಡಿಸಿದ ಪ್ರಬಂಧವು ಆಯ್ಕೆಯಾಗಿದೆ ಎಂಬುದು ಗಮನಾರ್ಹ.ಇದು ಕೊಡಗಿನವರು ಹೆಮ್ಮೆ ಪಡಬೇಕಾದ ವಿಚಾರ ಕೂಡ.ಗ್ರಾಮಾಂತರ ಕಿರಿಯ ವಿಭಾಗದಲ್ಲಿ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಬಿ.ಆರ್.ಚೇತನ್ ಮತ್ತು ಎ.ಅಫ್ರಿನಾ ಹಾಗೂ ಗೌಡಳ್ಳಿಯ ಬಿ.ಜಿ.ಎಸ್.ಶಾಲೆಯ ಬಿ.ಡಿ.ಭವಿಷ್ಯ್ ಮತ್ತು ಡಿ.ಡಿ.ನಿಹಾರಿಕಾ ಮಂಡಿಸಿದ ಪ್ರಬಂಧಗಳು ಆಯ್ಕೆಯಾಗಿವೆ. ಹಿರಿಯ ವಿಭಾಗದಲ್ಲಿ ತೊರೆನೂರು ಸರ್ಕಾರಿ ಪ್ರೌಢಶಾಲೆಯ ನಂದಿತಾ ಮತ್ತು ಆರ್.ವಿಸ್ಮಿತಾ, ಗೌಡಳ್ಳಿ ಬಿ.ಜಿ.ಎಸ್.ಆಂಗ್ಲ ಮಾಧ್ಯಮ ಶಾಲೆಯ ಕೆ.ಎಚ್.ಖುಷಿ ಮತ್ತು ಎಚ್.ಬಿ.ಸುಕೋದಿನಿ, ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ ಜಿ.ಪ್ರಜ್ವಲ್ ಮತ್ತು ಎಚ್.ಎಸ್.ರಾಜೇಶ್ ಮಂಡಿಸಿದ ಪ್ರಬಂಧ ಆಯ್ಕೆಯಾಗಿದೆ

Related posts

ಲವ್ ಜಿಹಾದ್‌ಗೆ ತುತ್ತಾದ ಪುತ್ತೂರಿನ ಹಿಂದೂ ಹುಡುಗಿ

ಸುಳ್ಯ: ಎಲೆಕ್ಟ್ರಿಷಿಯನ್ ಸತ್ಯಣ್ಣನ ಪಾರ್ಥೀವ ಶರೀರ ಹಳೆಗೇಟಿಗೆ ಆಗಮನ, ಶಾಪ್ ಮುಂದೆ ಮೃತದೇಹ ಕಂಡು ಕಣ್ಣೀರಾದ ಬಂಧು ಬಳಗ

ಸುಳ್ಯ:ಫಲಿಸಲಿಲ್ಲ ಚಿಕಿತ್ಸೆ, ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಜ್ಯೋತಿಷಿ ಮೃತ್ಯು