ಕರಾವಳಿ

ನಿದ್ರೆ ಮಂಪರಿನಲ್ಲಿ ಬಾವಿಗೆ ಬಿದ್ದ ವೃದ್ಧ,ಗಂಭೀರ ಗಾಯಗೊಂಡು ಸಾವು

ನ್ಯೂಸ್ ನಾಟೌಟ್ : ನಿದ್ರೆ ಮಂಪರಿನಲ್ಲಿದ್ದ ವೃದ್ಧರೋರ್ವರು ಬಾವಿಗೆ ಬಿದ್ದಿರುವ ಘಟನೆ ನಡೆದಿದೆ. ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ಈ ದುರಂತ ಸಂಭವಿಸಿದ್ದು,ಘಟನೆ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಲ್ಲಾಪು ನಿವಾಸಿ ವಾಲ್ಟರ್ ಮೊಂತೆರೋ (65) ಮೃತರು. .ವಾಲ್ಟರ್ ಎಂಬವರು ತೊಕ್ಕೊಟ್ಟಿನ ಚರ್ಚ್ ಗೆ  ಶನಿವಾರ ಸಂಜೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡು ಮನೆಗೆ ಹಿಂತಿರುಗಿದ್ದರು ಎನ್ನಲಾಗಿದೆ. ರಾತ್ರಿ 7.23 ರ ಹೊತ್ತಿಗೆ ಮನೆಯಂಗಳದ‌ ಬಾವಿಯ ಕಟ್ಟೆಯಲ್ಲಿ  ಕುಳಿತಿದ್ದಾಗ ನಿದ್ರೆ ಮಂಪರಿನಿಂದ ಹಠಾತ್ ಆಗಿ ಬಾವಿಯೊಳಗೆ ಬಿದ್ದಿದ್ದಾರೆ.ಕೂಡಲೇ ಮನೆ ಮಂದಿ ಆಳ ಇಲ್ಲದ ಬಾವಿಗೆ ಏಣಿ ಇಳಿಸಿ ವಾಲ್ಟರ್ ಅವರನ್ನ ಮೇಲಕ್ಕೆತ್ತಿದ್ದರೂ, ತಲೆಗೆ  ಗಂಭೀರವಾಗಿ ಗಾಯವಾದ  ಪರಿಣಾಮ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ ,ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

Related posts

ಕರಾವಳಿಯಲ್ಲಿ ಇಬ್ಬರನ್ನು ಬಲಿ ಪಡೆದ ಧಾರಾಕಾರ ಮಳೆ !, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಪರಿಹಾರ ವಿತರಣೆ

ತುಂಬಾ ಹುಡುಗೀರ ಜತೆ ಮಲಗಿದ್ದೇನೆ: ಮತ್ತೊಮ್ಮೆ ಸದ್ದು ಮಾಡುತ್ತಿರುವ ಕನ್ನಡದ ಖ್ಯಾತ ನಿರ್ದೇಶಕ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೆಸರಿನಲ್ಲಿ ನಕಲಿ ಖಾತೆ..! ಹಣಕ್ಕೆ ಬೇಡಿಕೆ ಇಟ್ಟ ದುಷ್ಕರ್ಮಿಗಳು..!