ಕರಾವಳಿಸುಳ್ಯ

ಮೂವರು ಕ್ರೈಸ್ತ ಧರ್ಮಗುರುಗಳು ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಸುಳ್ಯದ ಚರ್ಚ್ ನಿಂದ ಪುತ್ತೂರಿಗೆ ಹೋಗುತ್ತಿದ್ದಾಗ ಘಟನೆ

ನ್ಯೂಸ್ ನಾಟೌಟ್: ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಸಮೀಪ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತ ಸಂಭವಿಸಿದೆ.ಮೂವರು ಕ್ರೈಸ್ತ ಧರ್ಮಗುರುಗಳು ಪ್ರಯಾಣಿಸುತ್ತಿದ್ದ ಕಾರು ಅಘಘಾತಕ್ಕೀಡಾಗಿ ಒಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸುಳ್ಯದ ಚರ್ಚ್‌ನಲ್ಲಿ ನಿನ್ನೆ ನಡೆದ ವಾರ್ಷಿಕ ಹಬ್ಬದ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದ ಪುತ್ತೂರಿನ ಮಾಯಿದೆ ದೇವುಸ್ ಚರ್ಚ್‌ ಪ್ರಧಾನ ಧರ್ಮಗುರು ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ಕೆವಿನ್ ಲಾರೆನ್ಸ್ ಡಿ.ಸೋಜ ಮತ್ತು ಪುತ್ತೂರು ನಗರದ ಹೊರವಲಯದ ಮರೀಲು ಸೆಕ್ರೇಡ್ ಹಾರ್ಟ್‌ ಚರ್ಚ್‌ ಧರ್ಮಗುರು ವಲೇರಿಯನ್ ಫ್ರ್ಯಾಂಕ್ ಪುತ್ತೂರಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

ಲಾರೆನ್ಸ್ ಮಸ್ಕರೇನ್ಹಸ್ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ಕಳೆದು ಕೊಂಡು ವಲೇರಿಯನ್ ಫ್ರ್ಯಾಂಕ್ ಅವರಿಗೆ ಹೆಚ್ಚು ಗಾಯಗಳಾಗಿವೆ. ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Related posts

ಉಳ್ಳಾಲ: MLC ಬಿ.ಎಂ. ಫಾರೂಕ್ ಒಡೆತನದ ವಾಣಿಜ್ಯ ಕಟ್ಟಡದಿಂದ ಕೆಳಕ್ಕೆ ಬಿದ್ದು ಕೈ – ಕಾಲು ಮುರಿದುಕೊಂಡ ಕೂಲಿ ಕಾರ್ಮಿಕ..!

ದಕ್ಷಿಣ ಕನ್ನಡ: ಲೋಕಸಭಾ ಚುನಾವಣೆ ಹಿನ್ನೆಲೆ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಟ್ಟೆಚ್ಚರ..!, 18 ನಕ್ಸಲ್ ಪೀಡಿತ ಪ್ರದೇಶದಲ್ಲಿ ಬಿಗಿ ಭದ್ರತೆ

ಧರ್ಮಸ್ಥಳದಲ್ಲಿ ತಲೆ ಎತ್ತಲಿದೆ ಮಿನಿ ಏರ್ ಪೋರ್ಟ್