ಕರಾವಳಿಕ್ರೀಡೆ/ಸಿನಿಮಾ

ಅಂಧ ಗಾಯಕಿಗೆ ಒಲಿದು ಬಂತು ಸಿನಿಮಾದಲ್ಲಿ ಹಾಡುವ ಅವಕಾಶ..!ಜಗತ್ತನ್ನೇ ಕಾಣದ ಗಾಯಕಿಗೆ ಅದ್ಭುತ ಅವಕಾಶವನ್ನೇ ಸೃಷ್ಟಿಸಿದ್ರು ಖ್ಯಾತ ನಿರ್ದೇಶಕ..!

200

ನ್ಯೂಸ್ ನಾಟೌಟ್ : ಅಂಧ ಗಾಯಕಿಯ ಕಂಠಕ್ಕೆ ಮನಸೋಲದವರೇ ಇಲ್ಲ.ಈಕೆಯ ಗಾಯನ ಕೇಳಿ ಸ್ವತಃ ಶ್ರೇಯಾ ಘೋಷಾಲ್ ಅವರೇ ಕಣ್ಣೀರಾಗಿದ್ದರು.ಹೌದು,ಸೋನಿ ಟಿವಿಯ ಸಿಂಗಿಂಗ್ ರಿಯಾಲಿಟಿ ಶೋ ‘ಇಂಡಿಯನ್ ಐಡಲ್ 14’ ನಡೆಯುತ್ತಿದ್ದು, ಈ ಗಾಯಕಿಯನ್ನು ನೀವೆಲ್ಲಾ ನೋಡಿರಬಹುದು.ನೋಡಿ ಅಬ್ಬಾ ಎಂತಹ ಕಂಠ ಎಂದು ಕೊಂಡಾಡಿರಬಹುದು. ಇದೀಗ ಈ ಪ್ರತಿಭೆಗೆ ಫೀಲ್ಮ್‌ನಲ್ಲಿ ಹಾಡುವ ಅವಕಾಶ ಒದಗಿ ಬಂದಿದೆ.

ಅಂದ ಹಾಗೆ ಈ ಅಂಧ ಗಾಯಕಿಯ ಹೆಸರು ಮೇನುಕಾ ಪೌಡೆಲ್. ಈಕೆ ಅಂಧೆಯಾಗಿದ್ದರೂ ಗಾಯನದಲ್ಲಿ ಈಕೆಗೆ ಸರಿಸಾಟಿ ಯಾರೂ ಇಲ್ಲ..ಜಡ್ಜಸ್‌ ಸೇರಿದಂತೆ ಕಾರ್ಯಕ್ರಮಕ್ಕೆ ಬಂದ ಅತಿಥಿಗಳ ಮನಗೆದ್ದ ಹುಡುಗಿಗೆ ಇದೀಗ ಉತ್ತಮ ಅವಕಾಶ ಒದಗಿ ಬಂದಿದ್ದು,ಇನ್ಮುಂದೆ ಸಿನಿಮಾದಲ್ಲಿ ಹಾಡಲಿದ್ದಾರೆ.

ಜಗತ್ತೇ ಕಾಣದ ಈ ಗಾಯಕಿಗೆ ಕೆಜಿಎಫ್ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್  ಸಲಾರ್ ಸಿನಿಮಾದಲ್ಲಿ ಹಾಡಲು ಆಫರ್ ನೀಡಿದ್ದಾರೆ. ಕಾರ್ಯಕ್ರಮದ ನಿರೂಪಕ ಹುಸೇನ್ ಕುವಜೆರಾಳ ಈ ಮಾಹಿತಿ ನೀಡಿದ್ದಾರೆ.ದಕ್ಷಿಣದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಮೇನುಕಾ ಅವರ ಧ್ವನಿಯನ್ನು ತುಂಬಾ ಇಷ್ಟಪಟ್ಟಿದ್ದಾರಂತೆ ಹೀಗಾಗಿ ಸಿನಿಮಾದಲ್ಲಿ ಹಿನ್ನೆಲೆ ಸಂಗೀತ ನೀಡಲು ಅವಕಾಶ ನೀಡಿದ್ದಾರೆ ಎಂದು ತಿಳಿದುಬಂದಿದೆ.ಈ ಬಾರಿಯ ಇಂಡಿಯನ್ ಐಡಲ್ 14 ಅನ್ನು ಶ್ರೇಯಾ ಘೋಷಾಲ್ ಮತ್ತು ವಿಶಾಲ್ ದಾದ್ಲಾನಿ ಹೋಸ್ಟ್ ಮಾಡುತ್ತಿದ್ದಾರೆ.

See also  ಮೊಬೈಲ್‌ನಲ್ಲೆಲ್ಲ ಪುತ್ತೂರಿಗೆ ಪುತ್ತಿಲ..! ಪುತ್ತಿಲ ಬೆಂಬಲಿತ ಹಿಂದೂ ಕಾರ್ಯಕರ್ತರ ವೈರಲ್‌ ಕ್ಯಾಂಪೆನ್
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget