ಕ್ರೈಂ

ಮಗನಿಂದಲೇ ಅಪ್ಪನ ಭೀಕರ ಕೊಲೆ! ಡಿಪ್ಲೊಮಾದಲ್ಲಿ ಅನುತ್ತೀರ್ಣನಾಗಿ ಮಾನಸಿಕ ಅಸ್ವಸ್ಥನಾಗಿದ್ದಾತನ ರೋಚಕ ಸ್ಟೋರಿ!

ನ್ಯೂಸ್ ನಾಟೌಟ್: ಗಂಡು ಮಗು ಬೇಕು ಎಂದು ದೇವರಿಗೆ ಹರಿಕೆ ಹೊತ್ತು ಮಗನನ್ನ ಪಡೆದಿದ್ದ ಅಪ್ಪ ಶುಕ್ರವಾರ ಏ.21 ರಂದು ಆ ಮಗನಿಂದಲೇ ತಾನು ಕೊಲೆಯಾದ ದುರ್ಘಟನೆ ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿ ಗ್ರಾಮದಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥ ಮಗನಿಂದ ತಂದೆಯ ಕೊಲೆ ನಡೆದು ಹೋಗಿದ್ದು, ಕಳೆದ ಏಳೆಂಟು ವರ್ಷಗಳಿಂದ ಮಗ ಭರತ್ ಮೇಸ್ತಾ ಮಾನಸಿಕ ಅಸ್ವಸ್ಥಗೊಂಡಿದ್ದ ಮತ್ತು ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ.

ಇತ್ತೀಚೆಗಷ್ಟೇ ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ. ಪೂರ್ಣ ಪ್ರಮಾಣದಲ್ಲಿ ಗುಣಮುಖನಾಗದ ಮಗನನ್ನ, ಮನೆಯಿಂದ ಆಚೆ ಬಿಡದೆ, ಮನೆಯಲ್ಲಿಯೇ ಸಮಯಕ್ಕೆ ಸರಿಯಾಗಿ ಮಾತ್ರೆ, ಔಷಧಿ ತೆಗೆದುಕೊಂಡು ವಿಶ್ರಾಂತಿ ಪಡೆಯಲು ಹೇಳುತ್ತಿದ್ದ ಅಪ್ಪನನ್ನ ಇಂದು ಹರಿತವಾದ ಅಸ್ತ್ರದಿಂದ ತಲೆಗೆ ಹೊಡೆದು ಕೊಂದಿದ್ದಾನೆ ಎಂದು ವರದಿ ತಿಳಿಸಿದೆ.

ಅಂದ ಹಾಗೆ ಮಗನಿಗೆ ತಿಳಿ ಮಾತು ಹೇಳಿದ್ದೆ ತಪ್ಪಾಯಿತಾ. ತನ್ನ ಮಗ ಸಂಪೂರ್ಣ ಗುಣಮುಖನಾಗಿಲ್ಲ. ಹೊರೆಗೆ ಹೋದರೆ ಜನರೊಂದಿಗೆ ಜಗಳ ಮಾಡುತ್ತಾನೆ‌‌. ಎಲ್ಲರೂ ಹುಚ್ಚ ಎಂದು ಅಣಕಿಸುತ್ತಾರೆ. ಇದರಿಂದ ಅವನು ಮತ್ತಷ್ಟು ಕುಗ್ಗಬಹುದು ಎಂದು ತಂದೆ ಕಾಳಜಿಯನ್ನ ಲೆಕ್ಕಿಸದೆ, ಪಾಪಿ ಮಗ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ತಂದೆ ಪಾಂಡುರಂಗ ಮೇಸ್ತಾನನ್ನ ಚಾಕುವಿನಿಂದ ಹಲ್ಲೆ ಮಾಡಿ, ನಂತರ ಗ್ರ್ಯಾಂಡರ್ ಸ್ಟಾಂಡ್‌ನಿಂದ ಭೀಕರವಾಗಿ ತಲೆಗೆ ಹೊಡೆದು ಕೊಂದಿದ್ದಾನೆ.

ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಹೊನ್ನಾವರ ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಭರತ್ ಮೇಸ್ತಾನನ್ನು ವಶಕ್ಕೆ ಪಡೆದಿದ್ದಾರೆ. ಡಿಪ್ಲೊಮಾದಲ್ಲಿ ಕೆಲ ವಿಷಯಗಳು ಉತ್ತೀರ್ಣವಾಗಿಲ್ಲ ಎಂದು ಮನಸ್ಸಿಗೆ ಹಚ್ಚಿಕೊಂಡು ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗಿದೆ.

Related posts

ಕೋರ್ಟ್ ಗೆ ಆರೋಪಿಗಳನ್ನು ಕರೆದೊಯ್ಯುವಾಗ ವಾಹನದ ಇಂಧನ ಖಾಲಿ..! ಆರೋಪಿಗಳನ್ನು ಪರಸ್ಪರ ಹಗ್ಗದಿಂದ ಕಟ್ಟಿ ಗಾಡಿ ತಳ್ಳಿಸಿದ ಅಧಿಕಾರಿ! ಇಲ್ಲಿದೆ ವೈರಲ್ ವಿಡಿಯೋ

40 ವರ್ಷಗಳಲ್ಲಿ ಬರೋಬ್ಬರಿ 12 ಬಾರಿ ಮದುವೆಯಾದ ದಂಪತಿ..! ವಿಧವಾ ಪಿಂಚಣಿಗಾಗಿ ದಂಪತಿಯ ನಾಟಕ..!

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನೆಲ್ಯಾಡಿಯ ನರ್ಸ್ ಸಾವು