ಕೆವಿಜಿ ಕ್ಯಾಂಪಸ್‌ಶಿಕ್ಷಣಸುಳ್ಯ

ಸುಳ್ಯ: NMC ಕಾಲೇಜಿನ ಸಮಾಜ ಕಾರ್ಯ ವಿಭಾಗದ ಹಾಗೂ ಗ್ರಾಮ ಪಂಚಾಯತ್ ಅರಂತೋಡು ಸಹಯೋಗದೊಂದಿಗೆ “ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮ”, ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಂದ ಸದುಪಯೋಗ

ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಮಾಜ ಕಾರ್ಯ ವಿಭಾಗ ಹಾಗೂ ಗ್ರಾಮ ಪಂಚಾಯತ್ ಅರಂತೋಡು ಸಹಭಾಗಿತ್ವದಲ್ಲಿ “ಅಕ್ಷಯ ಸ್ತ್ರೀ ಗೊಂಚಲು” ಎಂಬ ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗೆ “ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮ”ವು ನ೦ 11ರಂದು ಅಮೃತ ಸಭಾಂಗಣ ಅರಂತೋಡು ನಲ್ಲಿ ನಡೆಸಲಾಗಿದೆ .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಆಡ್ತಲೆ ವಹಿಸಿದ್ದರು. ಜಯಪ್ರಕಾಶ್ ಎಂ.ಆರ್ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ನೆಹರೂ ಮೆಮೋರಿಯಲ್ ಕಾಲೇಜಿನ ಅರ್ಥ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ವಿಷ್ಣು ಪ್ರಶಾಂತ್ ಬಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಗ್ರಾಮ ಪಂಚಾಯತ್ ಅರಂತೋಡ್ ನ ಉಪಾಧ್ಯಕ್ಷರಾದ ಭವಾನಿ ಸಿ ಎ, ಅಕ್ಷಯ ಸ್ತ್ರೀ ಶಕ್ತಿ ಗೊಂಚಲು ಅಧ್ಯಕ್ಷರಾದ ಮಣಿಮಾಲ ಹಾಗೂ ಎನ್ ಎಂ ಸಿ ಸುಳ್ಯ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಕೃಪಾ ಎ ಎನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಆಯೋಜಕರಾದ ಮೊಕ್ಷಿತ್ ಎಂ ಕೆ ಮತ್ತು ತಂಡ ಪ್ರಾರ್ಥಿಸಿದರು. ಸಿಂಚನ ಎನ್ ಸಿ ಸ್ವಾಗತಿಸಿ , ಅಕ್ಷಯ್ ಕೆ.ವಂದಿಸಿದರು, ಜ್ಯೋತಿ ಬಿ. ಎಚ್ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅಂತರ್ ಕಾಲೇಜು ಪಿ.ಯು ಫೆಸ್ಟ್ ‘ಎನ್ನೆಂಸಿ ಕಲಾಸಂಗಮ’

ಸುಳ್ಯ: ಕಾಂಗ್ರೆಸ್‌ ಮುಖಂಡ ಎಸ್‌. ಸಂಶುದ್ದೀನ್‌ ಮನೆಗೆ ನುಗ್ಗಿದ ಕಳ್ಳರು; ಚಿನ್ನಾಭರಣ ಕಳವು

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್‌ನಿಂದ ಪಶ್ಚಿಮ ಘಟ್ಟಗಳ ಸಂರಕ್ಷಣೆ ವಿಚಾರಗೋಷ್ಠಿ