ಕರಾವಳಿಕೊಡಗುಸುಳ್ಯ

ಗಗನಕ್ಕೇರಿದ ತರಕಾರಿ ಬೆಲೆ ,ಒಂದು ಕೆ.ಜಿ. ತೊಂಡೆಕಾಯಿಗೆ 900 ರೂ.

233

ನ್ಯೂಸ್ ನಾಟೌಟ್ : ತರಕಾರಿ ಬೆಲೆ ಗಗನಕ್ಕೇರಿದೆ ನಿಜ.ಆದರೆ ಈ ರೇಂಜ್ ಗಾ? ಅಬ್ಬ,ಅಬ್ಬಾಬ್ಬ! ಹೌದು, ಇಲ್ಲೊಂದು ಕಡೆ ಒಂದು ಕೆ.ಜಿ. ತೊಂಡೆ ಕಾಯಿ ಬೆಲೆ 9೦೦ ರೂ., ಇದನ್ನು ಕೊಂಡುಕೊಳ್ಳುವ ಮುಂಚೆ ಆ ಶಾಕ್ ನಿಂದ ಮೊದಲು ಹೊರಬರಬೇಕಿದೆ.

ಭಾರತೀಯ ಆಹಾರಗಳು ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು.ಇತ್ತೀಚೆಗೆ ವಿದೇಶಿಗರು ಕೂಡ ನಮ್ಮ ಆಹಾರ ಪದ್ಧತಿಗಳನ್ನು ಇಷ್ಟ ಪಡುತ್ತಿದ್ದಾರೆ. ಹೀಗಾಗಿ ಈಗ ವಿಶ್ವದೆಲ್ಲೆಡೆ ಚಿರಪರಿಚಿತವಾಗಿದೆ. ಹುಡುಕಾಡುವುದು ಕಷ್ಟಕರವಾದ ಕೆಲಸ ಅಲ್ಲ. ಆದರೆ, ತರಕಾರಿ ಬೆಲೆ ಮಾತ್ರ ಶಾಕ್ ಗೊಳಗಾಗುವಂತೆ ಮಾಡುತ್ತಿವೆ.

ಲಂಡನ್​ನಲ್ಲಿ ವಾಸಿಸುತ್ತಿರುವ ಭಾರತೀಯರೊಬ್ಬರು ಇತ್ತೀಚಿಗೆ ತರಕಾರಿ ಹಾಗೂ ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ಹೋದಾಗ ಬೆಲೆನೋಡಿ ಶಾಕ್​ ಆಗಿದ್ದಾರೆ. ಅದನ್ನ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ಲಂಡನ್​ನ ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೋ, ಬೆಂಡೆಕಾಯಿ, ಹಾಗಲಕಾಯಿ, ಹಸಿ ಮೆಣಸಿನಕಾಯಿ, ತೊಂಡೆಕಾಯಿಯ ಫೋಟೋಗಳನ್ನು ಪೋಸ್ಟ್​ ಮಾಡಿದ್ದಾರೆ. ಇದರಲ್ಲಿ ತೊಂಡೆಕಾಯಿಬೆಲೆ ಸುಮಾರು 8.99 ಪೌಂಡ್ಸ್​ ಎಂದು ನಮೂದಿಸಲಾಗಿದೆ ಅಂದರೆ, ಪ್ರತಿ ಕೆಜಿಗೆ 900 ರೂಪಾಯಿ ಎಂದು ಹೇಳಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಪೋಟೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಡಿದಾದ ತರಕಾರಿಯ ಬೆಲೆಯನ್ನು ಕಂಡು ಶಾಕ್​ ಆಗಿದ್ದು ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

See also  ಮುಸ್ಲಿಂ ಯುವಕನ ಜತೆ ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರಯಾಣಿಸಿದ ಹಿಂದೂ ಯುವತಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget