ನ್ಯೂಸ್ ನಾಟೌಟ್: ಧರ್ಮಸ್ಥಳ ಕಾಡಿನ ಸುತ್ತಮುತ್ತ ಹೂತ್ತಿಡಲಾಗಿದೆ ಅನ್ನುವ ಶವಗಳನ್ನು ಹೊರಗೆತ್ತುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಯಾರದ್ದೂ ಆದೇಶದಂತೆ ನಾನೇ ಹೂತ್ತಿಟ್ಟಿದ್ದೇನೆ ನನಗೀಗ ಪಾಪ ಪ್ರಜ್ಞೆ ಕಾಡಿದೆ ಎಂದು ಹೇಳಿರುವ ಅನಾಮಿಕ ವ್ಯಕ್ತಿ ಭೀಮ ಸೂಚಿಸಿರುವ ಜಾಗಗಳನ್ನು ಎಸ್ಐಟಿ ತನಿಖಾ ತಂಡ ಮಾರ್ಕ್ ಮಾಡಿದೆ.
ಅದರಂತೆ ಇದೀಗ ಅಗೆಯುವ ಮೂಲಕ ಪ್ರಕರಣ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅಗೆದಂತಹ ಜಾಗದಲ್ಲಿ ಭೀಮ ಹೇಳಿರುವಂತೆ ಮೂಳೆ, ತಲೆ ಬುರುಡೆ ಸಿಕ್ಕಿದರೆ ಅದನ್ನು ಎಫ್ ಎಸ್ ಎಲ್ ಗೆ ಕಳುಹಿಸಲಾಗುತ್ತದೆ. ಸಾವಿನ ಸಾಧ್ಯತೆಗಳ ಬಗ್ಗೆ ತನಿಖೆ ನಡೆಯಲಿದೆ.
ಕಳೆದ ಕೆಲವು ದಿನಗಳಿಂದ ನಿಗೂಢವಾಗಿ ಉಳಿದಿರುವ ಹಲವು ಪ್ರಕರಣಗಳು ಈ ಮೂಲಕ ಬೆಳಕಿಗೆ ಬರಲಿದೆಯೇ ಅನ್ನುವುದನ್ನು ಕಾದು ನೋಡಬೇಕಿದೆ.