ಕರಾವಳಿಕ್ರೈಂದೇಶ-ವಿದೇಶವೈರಲ್ ನ್ಯೂಸ್

ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಪೂಜಾ ಶವ ಕಾಡಿನೊಳಗೆ ಪತ್ತೆ..! ಕೊಲೆ ಮಾಡಿ ಬಿಸಾಡಿದ್ಯಾರು..?

235

ನ್ಯೂಸ್‌ ನಾಟೌಟ್‌: ಕಾಣೆಯಾಗಿದ್ದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಶವ ಅರಣ್ಯದೊಳಗೆ ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿದೆ. ಜೂನ್ 30ರಂದು ಕಾಣೆಯಾಗಿದ್ದ ಆಗುಂಬೆಯ ಕುಶಾಲ್ ಎಂಬುವರ ಪುತ್ರಿ ಪೂಜಾ (24) ಮೃತದೇಹ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.

ಪೊಲೀಸರು ತನಿಖೆ ನಡೆಸಿ ಪೂಜಾಳ ಸ್ನೇಹಿತನನನ್ನು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಕತ್ತು ಹಿಸುಕಿ ಕೊಂದು ಬಳಿಕ ಹೊಂಡದಲ್ಲಿ ಶವ ಹಾಕಿದ್ದಾಗಿ ನಾಲೂರಿನ ಮಣಿ ಎಂಬಾತ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಕಳೆದ ಜೂ.30ರಂದು ಮನೆಯಿಂದ ಕೆಲಸಕ್ಕೆ ಹೋಗಿದ್ದ ಪೂಜಾ ಏಕಾಏಕಿ ಕಾಣೆಯಾಗಿದ್ದಳು. ಮನೆಗೆ ವಾಪಸ್ ಬರದ ಹಿನ್ನೆಲೆಯಲ್ಲಿ ಪೂಜಾ ಪೋಷಕರು ಆತಂಕಗೊಂಡು ಎಲ್ಲೆಡೆ ಹುಡುಕಾಟ ನಡೆಸಿ, ಬಳಿಕ ದೂರು ದಾಖಲಿಸಿದ್ದಾರೆ. ತನಿಖೆಗಿಳಿದ ಪೊಲೀಸರಿಗೆ ಪೂಜಾಳ ಶವವು ಪತ್ತೆಯಾಗಿತ್ತು.

ಬಳಿಕ ಆಕೆಯ ಫೋನ್‌ ಕಾಲ್‌ ಲಿಸ್ಟ್‌ ತೆಗೆದು ಮಿಸ್ಸಿಂಗ್‌ ಆದ ಕೊನೆ ದಿನ ಯಾರೆಲ್ಲ ಕರೆ ಮಾಡಿದ್ದರು ಅವರನ್ನೆಲ್ಲ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಹಲವು ವರ್ಷಗಳಿಂದ ಸ್ನೇಹಿತನಾಗಿದ್ದ ಮಣಿಕಂಠ ಎನ್ನುವಾತ ಪೂಜಾಳನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಹಣಕಾಸಿ‌ ವಿಚಾರಕ್ಕೆ ಜಗಳ ನಡೆದು ಕೊಲೆ ಮಾಡಿ ಬಳಿಕ ಆಗುಂಬೆ ಅರಣ್ಯ ಪ್ರದೇಶದಲ್ಲಿ ಬಿಸಾಡಿ ಹೋಗಿದ್ದಾನೆ ಎನ್ನುವ ಅಂಶ ತಿಳಿದುಬಂದಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Click 👇

https://newsnotout.com/2024/07/darshan-kannada-news-evidences-collection-reaches-more-than-200
https://newsnotout.com/2024/07/police-absonded-kannada-news-bsf-in-madyapradesh-kannada-news
https://newsnotout.com/2024/07/kannada-news-fake-doctors-cought-in-bagalakot-ditrict-news-police
https://newsnotout.com/2024/07/laxury-theft-by-rohith-kannada-news-royal-life-kannada-news-gujarat-police
https://newsnotout.com/2024/07/kannada-news-womens-enjoying-pm-avas-yojana-fund-misused-kannada-news
See also  ಬೆಂಗಳೂರಿನ ಖ್ಯಾತ ಹೋಟೆಲ್‌ ಮುಂದೆ ನಿಂತು ಅದೇ ಹೋಟೆಲ್ ನಿಂದ ಝೊಮ್ಯಾಟೊದಲ್ಲಿ ಬೆಣ್ಣೆ ದೋಸೆ ಆರ್ಡರ್‌ ಮಾಡಿದ ಮಹಿಳೆ..! ಏನಿದು ವೈರಲ್ ಪೋಸ್ಟ್..?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget