ಕ್ರೈಂವೈರಲ್ ನ್ಯೂಸ್

ಅಪ್ಪ-ಅಮ್ಮನ ಮೇಲಿನ ಕೋಪಕ್ಕೆ ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ತೆರಳಿದ ಬಾಲಕಿಯರು!ಹೈಸ್ಕೂಲ್ ಹುಡುಗಿಯರ ಕೆಲಸಕ್ಕೆ ಪೋಷಕರ ಪರದಾಟ.!

ನ್ಯೂಸ್ ನಾಟೌಟ್: ಕಾಂಗ್ರೆಸ್‌ ಸರ್ಕಾರ ಘೋಷಿಸಿದ ಉಚಿತ ಬಸ್ ಸೇವೆ ಯೋಜನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೋಷಕರಿಗೆ ಮತ್ತು ಪೊಲೀಸರಿಗೆ ತಲೆ ನೋವು ತಂದಿಟ್ಟಿದೆ. ಚಾಕೊಲೆಟ್ ತಿನ್ನಲು ಹಣ ಕೊಡಲಿಲ್ಲ ಎಂದು 10 ಮತ್ತು 9ನೇ ತರಗತಿ ಓದುತ್ತಿದ್ದ ಇಬ್ಬರು ಬಾಲಕಿಯರು ಮನೆ ಬಿಟ್ಟು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಬ್ಬರು‌ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದರಿಂದ ಪೋಷಕರು ಆತಂಕಗೊಂಡಿದ್ದು, ತಂದೆ ತಾಯಿ ಮೇಲಿನ ಕೋಪಕ್ಕೆ ಹೆಣ್ಣು ಮಕ್ಕಳು ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಚಾಕೊಲೆಟ್ ಕೊಳ್ಳಲು ಹಣ ಕೇಳಿದ್ದಕ್ಕೆ ತಂದೆ ರೇಗಿದ್ದರು. ಇದರಿಂದ ಕೋಪಗೊಂಡ ಇಬ್ಬರು ಪುತ್ರಿಯರು ಬಸ್ ಹತ್ತಿ ಫ್ರೀಯಾಗಿ ಧರ್ಮಸ್ಥಳಕ್ಕೆ ತೆರಳಿದ್ದಾರೆ.
ಈ ವಿಚಾರ ತಿಳಿಯದ ತಂದೆ ತಾಯಿ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯರು ನಾಪತ್ತೆಯಾದ ಎರಡು‌ ದಿನದ ಬಳಿಕ ಅಂದ್ರೆ ಜೂನ್ 18 ರಂದು ಧರ್ಮಸ್ಥಳದಲ್ಲಿ ಪತ್ತೆ ಹಚ್ಚಿದ್ದಾರೆ.

ಸದ್ಯ ಮಕ್ಕಳ ಪತ್ತೆಯಿಂದ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಕೆಲವರಿಗೆ ಅನುಕೂಲವಾದರೆ ಇನ್ನೂ ಕೆಲವರಿಗೆ ಪ್ರಾಣ ಸಂಕಟ ತಂದಿಟ್ಟಿದೆ.

Related posts

215 ಕಿ.ಮೀ. ವೇಗದಲ್ಲಿ ಲಂಬೋರ್ಗಿನಿ ಓಡಿಸಿದ ರೋಹಿತ್ ಶರ್ಮಾ..! ಶಾಕ್ ಕೊಟ್ಟ ಮುಂಬೈ ಪೊಲೀಸರು

ಕೈಗೆ ಕೋಳ ಹಾಕಿಸಿಕೊಂಡಿದ್ದಾಗಲೇ ಪೊಲೀಸರೆದುರು ಸಿಗರೇಟ್ ಸೇದಿ ರೀಲ್ಸ್ ಮಾಡಿದ ರೌಡಿ..! ಪೊಲೀಸರ ಹೆದರಿಕೆ ಇಲ್ಲದ ಈತನ ಮೇಲಿರುವ ಕೇಸ್ ಗಳೆಷ್ಟು ಗೊತ್ತಾ..?

ಒಂದೇ ಕುಟುಂಬದ 5 ಮಂದಿ ಕಾರಿನೊಳಗೆ ಶವವಾಗಿ ಪತ್ತೆ..! ಸಾವಿನ ಹಿಂದಿದೆ ನಿಗೂಢ ಕಾರಣ..!