ಕರಾವಳಿಸುಳ್ಯ

ಧರ್ಮಸ್ಥಳ: ಪುರುಷರನ್ನು ಮೊದಲು ಬಸ್ಸಿಗೆ ಹತ್ತಿಸಿದ್ದಕ್ಕೆ KSRTC ಕಂಡಕ್ಟರ್‌ಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ಮಹಿಳೆಯರು..! ಶಕ್ತಿ ನಾರಿಯರ ಅವಾಜ್‌ಗೆ ಕಂಡಕ್ಟರ್ ಕಕ್ಕಾಬಿಕ್ಕಿ..!

220

ನ್ಯೂಸ್ ನಾಟೌಟ್: ಪುರುಷರನ್ನು ಮೊದಲು ಬಸ್ಸಿಗೆ ಹತ್ತಲು ಕಂಡಕ್ಟರ್ ಅವಕಾಶ ನೀಡಿ ಮಹಿಳೆಯರಿಗೆ ಸೀಟು ಸಿಗದ ಹಾಗೆ ಮಾಡಿದ್ದಾನೆಂದು ಆರೋಪಿಸಿ ಮಹಿಳೆಯರು KSRTC ಕಂಡಕ್ಟರ್‌ಗೆ ಧರ್ಮಸ್ಥಳದ ಬಸ್ ನಿಲ್ದಾಣದಲ್ಲೇ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಸದ್ಯ ಮಹಿಳೆಯರಿಗೆ ಸಿದ್ದರಾಮಯ್ಯ ಸರ್ಕಾರ ಫ್ರೀ ಬಸ್ ಪ್ರಯಾಣದ ಭಾಗ್ಯವನ್ನು ಕಲ್ಪಿಸಿದೆ. ಹೀಗಾಗಿ ಎಲ್ಲ ಕಡೆ ಫುಲ್ ರಶ್‌ ಆಗಿದೆ. ಮಹಿಳೆಯರಂತೂ ತಮ್ಮ ಓಡಾಟವನ್ನು ತುಸು ಹೆಚ್ಚು ಮಾಡಿದಂತೆ ಕಂಡು ಬರುತ್ತಿದ್ದು ಪುರುಷರಿಗೆ ಬಸ್ ನಲ್ಲಿ ಶೇ.50ರಷ್ಟು ಸೀಟು ಕೂಡ ಸಿಗುತ್ತಿಲ್ಲ ಅನ್ನುವ ದೂರುಗಳು ಕೇಳಿ ಬರುತ್ತಿದೆ. ಮಹಿಳೆಯರ ನೂಕು ನುಗ್ಗಲಿಗೆ ಹಲವು ಕಡೆ ಬಸ್ ನ ಡೋರ್‌ಗಳೇ ಮುರಿದು ಬಿದ್ದಿದೆ. ಕೆಲವು ಕಡೆ ಕಂಬಿಗಳು ಕಿತ್ತು ಹೋಗಿವೆ. ಇದೀಗ ಮಹಿಳೆಯರು ತಮ್ಮನ್ನು ಹತ್ತಿಸಿಕೊಳ್ಳದೆ ಕೇವಲ ಪುರುಷರಿಗೆ ಮಾತ್ರ ಬಸ್ ನಲ್ಲಿ ಕಂಡಕ್ಟರ್ ಹೆಚ್ಚಿನ ಅವಕಾಶ ನೀಡಿದ್ದಾರೆ ಎಂದು ಗರಂ ಆಗಿದ್ದಾರೆ. ಬಸ್‌ ನಿಲ್ದಾಣದಲ್ಲೇ ಕಂಡಕ್ಟರ್ ಅನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಸ್ ಧರ್ಮಸ್ಥಳ-ಚಿತ್ರದುರ್ಗ-ಹೊಸಪೇಟೆ ಮಾರ್ಗದ್ದು ಎಂದು ತಿಳಿದು ಬಂದಿದೆ. ಧರ್ಮಸ್ಥಳ ಬಳಿ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ.

See also  ಕರಿಕೆ ಗ್ರಾಮಪಂಚಾಯತ್ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಸಮಾರಂಭ
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget