ರಾಜ್ಯಸಿನಿಮಾ

ಎಲ್ಲರನ್ನೂ ಮದುವೆಗೆ ಕರೆದು ದರ್ಶನ್‌ರನ್ನು ಕರೆದಿಲ್ಲ ಯಾಕೆ? ಸ್ವತಃ ಡಾಲಿ ಧನಂಜಯ್ ಕ್ಲ್ಯಾರಿಟಿ ಕೊಟ್ರು ನೋಡಿ

ನ್ಯೂಸ್‌ ನಾಟೌಟ್‌:ನಟ ಡಾಲಿ ಧನಂಜಯ್ ಸದ್ಯ ಅವರು ಟ್ರೋಲ್ ಆಗುತ್ತಿದ್ದಾರೆ.ಹೌದು,ಅವರು ಮದುವೆಗೆ ಎಲ್ಲರನ್ನೂ ಕರೆದಿದ್ದಾರೆ. ದರ್ಶನ್‌ ಅವರನ್ನ ಯಾಕೆ ಕರೆದಿಲ್ಲ ಅನ್ನೋದೇ ದರ್ಶನ್ ಫ್ಯಾನ್ಸ್‌ಗೆ ಒಂದು ಸಣ್ಣ ಬೇಸರ ಇದೆ.ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಟ್ರೋಲ್ ಆಗುತ್ತಿದೆ.

ದರ್ಶನ್ ‘ರೀಚ್’ ಆಗದೇ ಇರುವಷ್ಟು ದೂರ ಇದ್ದಾರಾ? ಮನೆಗೆ ಹೋಗಿ ಮದುವೆಗೆ ಆಹ್ವಾನಿಸಬಹುದಿತ್ತಲ್ಲ? ಈ ರೀತಿಯ ಪ್ರಶ್ನೆಗಳೂ ಬರ್ತಿವೆ. ಆ ಪ್ರಶ್ನೆ ಬರೋ ಮೊದಲೇ ಡಾಲಿ ಧನಂಜಯ್ ಒಂದಷ್ಟು ಕ್ಲಾರಿಟಿ ಕೊಟ್ಟಿದ್ದಾರೆ.

ಡಾಲಿ ಧನಂಜಯ್ ಇನ್‌ಲ್ಯಾಂಡ್ ಲೆಟರ್ ಮಾಡಿಸಿದ್ದಾರೆ. ಇದು ಇವರದ್ದೇ ಐಡಿಯಾ ಆಗಿದೆ. ಈ ಮೂಲಕ ಡಾಲಿ ಧನಂಜಯ್ ಎಲ್ಲರಿಗೂ ಆಹ್ವಾನಿಸುತ್ತಿದ್ದಾರೆ. ಇದನ್ನ ಕೊಟ್ಟು ನನ್ನ ಮದುವೆಗೆ ಬನ್ನಿ ಅಂತಲೇ ಕೇಳಿಕೊಂಡಿದ್ದಾರೆ. ರಾಜಕರಾಣಿಗಳು, ಸಿನಿಮಾ ಸ್ಟಾರ್‌ಗಳು, ಸಿನಿಮಾ ಸ್ನೇಹಿತರು, ಆಪ್ತರು ಹೀಗೆ ಸಾಕಷ್ಟು ಜನಕ್ಕೆ ಡಾಲಿ ಧನಂಜಯ್ ಮದುವೆ ಆಮಂತ್ರಣ ಕೊಟ್ಟಿದ್ದಾರೆ.ಆದರೆ, ದಾಸ ದರ್ಶನ್ ಅವರನ್ನ ಆಹ್ವಾನ ಮಾಡಿಲ್ಲ. ಅದಕ್ಕೆ ಕಾರಣ ಏನೂ ಅನ್ನೋದನ್ನ ಕೂಡ ಹೇಳಿಕೊಂಡಿದ್ದಾರೆ. ನಿಜ, ಮೊನ್ನೆ ಒಂದು ಪ್ರೆಸ್ ಮೀಟ್ ಮಾಡಿದ್ದರು. ಈ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಉತ್ತರವನ್ನು ಕೊಟ್ಟಿದ್ದರು. ” ದರ್ಶನ್ ಅವರನ್ನ ರೀಚ್ ಅಗೋಕೆ ಆಗ್ಲೇ ಇಲ್ಲ. ಅವರಿಗೂ ಮದುವೆ ಆಮಂತ್ರಣ ಕೊಡಬೇಕು ಅಂತ ಇತ್ತು. ಆದರೆ, ಅದು ಸಾಧ್ಯವಾಗ್ಲಿಲ್ಲ. ಹಾಗಾಗಿಯೇ ಈ ವೇದಿಕೆ ಮೂಲಕ ಅವರನ್ನ ಆಹ್ವಾನಿಸುತ್ತೇನೆ” ಅಂತಲೂ ಹೇಳಿದ್ದರು.ಮಾಧ್ಯಮದ ಮೂಲಕವೇ ಪ್ರೆಸ್ ಮೀಟ್ ಅಲ್ಲಿಯೇ ದರ್ಶನ್‌ ಅವರನ್ನ ಮದುವೆಗೆ ಆಹ್ವಾನಿಸಿದ್ದಾರೆ. ಮದುವೆಗೆ ಬನ್ನಿ ಅಂತಲೂ ಹೇಳಿದ್ದಾರೆ. ಇದೇ ಡಾಲಿ ಧನಂಜಯ್ ಅವರು ಕೊಟ್ಟಿರೋ ಕ್ಲ್ಯಾರಿಟಿ.

Related posts

ಗುರುಪ್ರಸಾದ್ ಸಾವಿನ ಬಗ್ಗೆ ನಟ ಜಗ್ಗೇಶ್ ನೀಡಿದ ಹೇಳಿಕೆ ವಿರುದ್ಧ ಗರಂ ಆದ ಲಾಯರ್ ಜಗದೀಶ್..! ಇಲ್ಲಿದೆ ವೈರಲ್ ವಿಡಿಯೋ

ಅಪ್ಪ-ಅಮ್ಮನ ಜಗಳ ಬಿಡಿಸಲು ಹೋದ ಮಗನಿಗೆ ಚೂರಿ ಇರಿತ..! ಇನ್‌ಫೋಸಿಸ್‌ ಕಂಪನಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್ ಆಗಿದ್ದ ಯಶವಂತ್

ಅನುಮಾನ ಹುಟ್ಟಿಸಿದ ಸೈಫ್ ಅಲಿ ಖಾನ್ ಇನ್‌ ಶ್ಯೂರೆನ್ಸ್‌ ಕ್ಲೇಮ್..! 35.95 ಲಕ್ಷ ಆರೋಗ್ಯ ವಿಮೆ ಕ್ಲೇಮ್ ಮಾಡಿದ ಬಾಲಿವುಡ್ ನಟ..!