ನ್ಯೂಸ್ ನಾಟೌಟ್: ಲಕ್ನೋದ ಚಂದ್ರಿಕಾ ದೇವಿ ಮಂದಿರಕ್ಕೆ ಬಂದಿದ್ದ ಭಕ್ತಾದಿಗಳ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಅಮಾನವೀಯ ಹಲ್ಲೆ ನಡೆದಿದೆ. ಭಕ್ತರ ಮೇಲೆ ದೇವಾಲಯದ ಸಮೀಪದ ವ್ಯಾಪಾರಿಗಳು ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದಾರೆ.
ತಮ್ಮ ಅಂಗಡಿಗಳಲ್ಲಿ ಪ್ರಸಾದ ಖರೀದಿ ಮಾಡಲಿಲ್ಲ ಎಂದು ಭಕ್ತರ ಮೇಲೆ ವ್ಯಾಪಾರಿಗಳು ಗೂಂಡಾಗಿರಿ ಮೆರೆದಿದ್ದಾರೆ ಎನ್ನಲಾಗಿದೆ. ಭಕ್ತರು ಹಾಗೂ ವ್ಯಾಪಾರಿಗಳು ಕೈ, ಕೈ ಮಿಲಾಯಿಸಿದ್ದಾರೆ.
ಲಕ್ನೋದ ಚಂದ್ರಿಕಾ ದೇವಿ ದೇವಸ್ಥಾನಕ್ಕೆ ಭಕ್ತರು ಭೇಟಿ ನೀಡಿದ್ದರು. ಈ ವೇಳೆ ವ್ಯಾಪಾರಿಗಳು ಪ್ರಸಾದ ಖರೀದಿ ಮಾಡಲು ಒತ್ತಾಯಿಸಿದ್ದಾರೆ. ವ್ಯಾಪಾರಿಗಳ ಒತ್ತಡಕ್ಕೆ ಮಣಿಯದ ಭಕ್ತರು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಲಾಟೆಯಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
बीकेटी स्थित चंद्रिका देवी मंदिर पर दर्शन करने आए महिला व पुरुष श्रद्धालुओं को…मेला दुकानदारों ने जमकर पीटा..श्रद्धालु हुए चोटिल..पुलिस कर्मी नदारद..🙄..आए दिन श्रद्धालुओं से की जाती है..बदसलूकी..@LkoCp
मामला रफादफा करने में जुटे..चौकी प्रभारी..@lkopolice
जनहित में उक्त… pic.twitter.com/1oCycg98wE— Vivek Sharma (@Lko_VivekSharma) April 7, 2025
ವಿಡಿಯೋದಲ್ಲಿ 4-5 ಮಂದಿ ವ್ಯಾಪಾರಿಗಳು ಬೆಲ್ಟ್ ಮತ್ತು ಚಪ್ಪಲಿಯಿಂದ ಭಕ್ತರ ಮೇಲೆ ದಾಳಿ ಮಾಡಿದ್ದಾರೆ. ಹಲ್ಲೆ ಮಾಡಿದ ವಿಡಿಯೋ ಹಾಗೂ ಸಿಸಿಟಿವಿ ದೃಶ್ಯವನ್ನು ಆಧರಿಸಿ ಕೇಸ್ ದಾಖಲಿಸಲಾಗಿದೆ. ವಿಡಿಯೋದ ಸುಳಿವು ಆಧರಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಲಿಸುತ್ತಿದ್ದಾಗಲೇ ಎರಡು ತುಂಡಾದ ಎಕ್ಸ್ ಪ್ರೆಸ್ ರೈಲು..! ಪ್ರಯಾಣಿಕರು ಪಾರಾದದ್ದೇಗೆ..?
ಬುಲೆಟ್ ಟ್ರೈನ್ ಯೋಜನೆಯಡಿ ಹಲವು ಉದ್ಯೋಗಾವಕಾಶ, ಇಲ್ಲಿದೆ ಸಂಪೂರ್ಣ ಮಾಹಿತಿ