ಕರಾವಳಿ

ದೇವರಕೊಲ್ಲಿ: ಎರಡು ಕಡೆ ಭೂಕುಸಿತ, ರಸ್ತೆ ಸಂಚಾರಕ್ಕೆ ಅಡ್ಡಿ

585

ನ್ಯೂಸ್ ನಾಟೌಟ್ : ಭಾರಿ ಮಳೆಯಿಂದಾಗಿ ಮಡಿಕೇರಿ ತಾಲೂಕಿನ ದೇವರಕೊಲ್ಲಿ ಗ್ರಾಮದ ಎರಡು ಕಡೆ ಭೂ ಕುಸಿತ ಉಂಟಾಗಿರುವಂತಹ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಹಿನ್ನೆಲೆ ಸಂಪರ್ಕ ಕಡಿತವಾಗಿದ್ದು ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತವಾಗಿತ್ತು. ಇದರಿಂದಾಗಿ ರಸ್ತೆಯ ಎರಡೂ ಕಡೆ ಸಾಲುಗಟ್ಟಿ ವಾಹನಗಳು ನಿಂತಿವೆ. ಗುಡ್ಡ ಜರಿದು ಮಣ್ಣಿನೊಂದಿಗೆ ರಸ್ತೆ ಮೇಲೆ‌ ಮರಗಳು ಬಂದು ಬಿದ್ದಿವೆ. ರಸ್ತೆಯಲ್ಲಿ ಬಿದ್ದಿರುವ ಮರವನ್ನು ಪ್ರಯಾಣಿಕರು ತೆರವುಗೊಳಿಸಿದರು. ನಂತರ ಸಂಚಾರ ಮಾಡಲು ಸಾಧ್ಯವಾಯಿತು ಎಂದು ತಿಳಿದು ಬಂದಿದೆ.

See also  10,000 ಉದ್ಯೋಗ ಕಡಿತಕ್ಕೆ ಗೂಗಲ್ ನಿರ್ಧಾರ, ಉದ್ಯೋಗಿಗಳ ಎದೆಯಲ್ಲಿ ಢವಢವ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget