ಕರಾವಳಿಸುಳ್ಯ

ರಾಸಾಯನಿಕ ಗೊಬ್ಬರದಿಂದ ಹೊರಬನ್ನಿ,ಮುಂದಿನ ಪೀಳಿಗೆಗೂ ಮಣ್ಣಿನ ಫಲವತ್ತತೆ ಕಾಪಾಡಿ…

ನ್ಯೂಸ್ ನಾಟೌಟ್ :ನಾವು ಸೇವಿಸುತ್ತಿರುವ ಆಹಾರ ಆರೋಗ್ಯಕರವೇ?ಭೂಮಿಯೇ ಹದಗೆಟ್ಟ ಮೇಲೆ ನಮ್ಮ ಆಹಾರ ಎಷ್ಟು ಸೇಫ್..?ಹೌದು, ಇಂತಹದೊಂದು ಪ್ರಶ್ನೆ ಮೂಡುವುದು ಸಹಜ.ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ಫಲವತ್ತತೆಯನ್ನು ಕಳೆದು ಕೊಳ್ಳುತ್ತಿದೆ. ಅವೈಜ್ಞಾನಿಕ ಸಾಗುವಳಿಯಿಂದ ಮಣ್ಣಿನ ಆರೋಗ್ಯ ಹಾಳಾಗಿದೆ. ಕೃಷಿ ಜಮೀನಿನ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗಿ ಭೂಮಿ ಬರಡಾಗುತ್ತಿದೆ. 

ಡಾ.ಸಾಯಿಲ್ ಪ್ರಯೋಜಕಾರಿ:

ಇದು ಫಲವತ್ತತೆಯನ್ನು ಕಳೆದುಕೊಂಡಿರುವ  ಮಣ್ಣಿಗೆ ಎಷ್ಟು ಪ್ರಯೋಜನಕಾರಿ? ಡಾ.ಸಾಯಿಲ್ ಹೆಸರೇ ಹೇಳುವಂತೆ ಮಣ್ಣಿಗೆ ಇದು ವೈದ್ಯನಾಗಿ ಸೇವೆ ಮಾಡುತ್ತೆ. ಮಣ್ಣಿನ ಆರೋಗ್ಯ ಮತ್ತು ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಇಂದಿನ ದಿನಗಳಲ್ಲಿ ಮಣ್ಣಿನ ರಾಸಾಯನಿಕ, ಭೌತಿಕ ಮತ್ತು ಜೈವಿಕ ಗುಣಗಳನ್ನು ಸಂರಕ್ಷಿಸುವುದು ಅವಶ್ಯಕ. ರಾಸಾಯನಿಕ ಬದಲಾಗಿ ಸಾವಯವ ಪದ್ಧತಿ ಅನುಸರಿಸಿದರೆ ಜಮೀನು ಸಂರಕ್ಷಿಸಲು ಸಾಧ್ಯ.ರೈತನ ಮಿತ್ರ ಎರೆಹುಳವನ್ನು ಮಣ್ಣಿನಲ್ಲಿ ಹುಡುಕಬೇಕು.ಈ ನಿಟ್ಟಿನಲ್ಲಿ ಡಾ. ಸಾಯಿಲ್, ಮೈಕ್ರೋಬಿ ಅಗ್ರೋಟೆಕ್ ಪ್ರೈ.ಲಿ. ದ್ರವರೂಪದ ಜೈವಿಕ ಗೊಬ್ಬರ ಬಹು ಪ್ರಯೋಜನಕಾರಿ.

ಮಣ್ಣನ್ನು ಉಳಿಸಿ:

ಇದು ಮಣ್ಣಿನಲ್ಲಿ ಇರುವ ಭೌತಿಕ,ರಾಸಾಯನಿಕ,ಜೈವಿಕ ಗುಣಗಳನ್ನು ಮರು ಸೃಷ್ಟಿ ಮಾಡುವಂತೆ ನೋಡಿಕೊಳ್ಳುತ್ತೆ.ಮಣ್ಣಿನ ಸಮತೋಲನವನ್ನು ಮತ್ತೆ ಕಾಪಾಡಿಕೊಳ್ಳುತ್ತೆ. ಮಣ್ಣನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರಲ್ಲು ಇದೆ. ಮಣ್ಣಲ್ಲಿ ಜೀವಂತಿಕೆ ತುಂಬುವ ಡಾ.ಸಾಯಿಲ್ ರೈತರಿಗೆ ರಾಮಬಾಣವಿದ್ದಂತೆ ಎನ್ನುತ್ತಾರೆ ಡಾ.ಸಾಯಿಲ್ ಇದರ ವ್ಯವಸ್ಥಾಪಕರಾದ ಶ್ರೀಕಾಂತ್ ಎಸ್. ಅವರು.

Related posts

ಕೊಡಗು: 2,995 ಕುಟುಂಬಗಳ ಸ್ಥಳಾಂತರಕ್ಕೆ ನೋಟಿಸ್..! 104 ಕಡೆಗಳಲ್ಲಿ ಭೂಕುಸಿತದ ಸಾಧ್ಯತೆ..!

ನ್ಯೂಸ್ ನಾಟೌಟ್ ಬಗ್ಗೆ ಕಿಡಿಗೇಡಿಯಿಂದ ಅಪಪ್ರಚಾರ, ಕಾನೂನು ಕ್ರಮಕ್ಕೆ ಮುಂದಾದ ಸಂಸ್ಥೆ

ಪುತ್ತೂರು: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ, ಗಾಯಾಳು ಆಸ್ಪತ್ರೆಗೆ ದಾಖಲು, ತುರ್ತಾಗಿ ತೆರಳಿ ಆರೋಗ್ಯ ವಿಚಾರಿಸಿದ ಶಾಸಕ ಅಶೋಕ್ ರೈ