ಕ್ರೈಂ

ಭೀಕರ ಅಪಘಾತ, ಮಂಗಳೂರಿನ ದಂತ ವೈದ್ಯೆ ಪುಣೆಯಲ್ಲಿ ಸಾವು

94
Spread the love

ನ್ಯೂಸ್ ನಾಟೌಟ್: ಮಂಗಳೂರು ಮೂಲದ ದಂತ ವೈದ್ಯೆಯೊಬ್ಬರು ಪುಣೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಸೋಮವಾರ (ಸೆ.೧೨ರಂದು) ದುರಂತ ನಡೆದಿದೆ. ಮೃತರನ್ನು ಪುಣೆಯ ಪಿಂಪ್ರಿಯಲ್ಲಿ ದಂತ ವೈದ್ಯೆಯಾಗಿದ್ದ ಜಿಶಾ ಜೋನ್‌ (27) ಎಂದು ಗುರುತಿಸಲಾಗಿದೆ.

ಅವರು ಮೂಲತಃ ಮಂಗಳೂರು ನಗರದ ವೆಲೆನ್ಸಿಯ ನಿವಾಸಿಯಾಗಿದ್ದಾರೆ. ಜಿಶಾ ಅವರು ಮನೆಗೆ ಸ್ಕೂಟರ್‌ನಲ್ಲಿ ಹಿಂದಿರುಗುವಾಗ ಟ್ರಕ್‌ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪುಣೆಯಲ್ಲಿ ಜಿಶಾ ಜೋನ್ ಅವರ ಪತಿ ಉದ್ಯಮಿಯಾಗಿದ್ದರಿಂದ ಜಿಶಾ ಪುಣೆಯಲ್ಲಿಯೇ ನೆಲೆಸಿದ್ದರು.

See also  ಚೈತ್ರಾ ಕುಂದಾಪುರ ಮೇಲೆ ಮತ್ತೊಂದು ಎಫ್‌ಐಆರ್‌! ಉಡುಪಿಯಲ್ಲಿ ಮತ್ತೊಂದು ವಂಚನೆ ಪ್ರಕರಣ ಬಯಲು..! ಏನಿದು ಹೊಸಾ ಕೇಸ್?
  Ad Widget   Ad Widget   Ad Widget