Uncategorized

ರಾತ್ರೋರಾತ್ರಿ 12 ಬೈಕ್ ಗಳು ಬೆಂಕಿಗೆ ಆಹುತಿ..! ಕೆಲಸ ಮುಗಿಸಿ ನೆಲಮಹಡಿಯಲ್ಲಿ ಪಾರ್ಕಿಂಗ್ ಮಾಡಿದ್ದ ಡೆಲಿವರಿ ಬಾಯ್ ಗಳು..!

ನ್ಯೂಸ್ ನಾಟೌಟ್: ನೆಲಮಹಡಿಯಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ಎರಡು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸೇರಿದಂತೆ 12 ಬೈಕ್ ಗಳು ಬೆಂಕಿಯಿಂದ ಸುಟ್ಟು ಭಸ್ಮವಾಗಿರುವ ಘಟನೆ ಭಾನುವಾರ(ಅ.27) ನಡೆದಿದೆ.

ಬೆಂಗಳೂರಿನ ಉಲ್ಲಾಳು ಬಳಿ ಭಾನುವಾರ ಈ ಅವಘಡ ನಡೆದಿದ್ದು, ಡಾಮಿನೋಸ್ ಪಿಜ್ಜಾ ಡೆಲಿವರಿ ಮಾಡಲು ಬಳಸುತ್ತಿದ್ದ ಬೈಕ್ ಗಳು ಬೆಂಕಿಗಾಹುತಿಯಾಗಿವೆ.
ಪಿಜ್ಜಾವನ್ನು ಮನೆ ಮನೆಗೆ ತಲುಪಿಸಲು ಡೆಲಿವರಿ ಬಾಯ್ ಗಳು ಈ ಬೈಕ್ ಗಳನ್ನು ಬಳಸುತ್ತಿದ್ದರು. ಕೆಲಸ ಮುಗಿಸಿದ ಬಳಿಕ ನೆಲಮಹಡಿಯಲ್ಲಿ ನಿಲ್ಲಿಸಲಾಗಿತ್ತು. ರಾತ್ರಿ ವೇಳೆ ಅವುಗಳಿಗೆ ಬೆಂಕಿ ಬಿದ್ದಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ. ಅಲ್ಲದೆ, ಘಟನೆಯಲ್ಲಿ ಜನರೇಟರ್‌ ಗೆ ಹಾನಿಯಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಈ ಅವಘಡಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ತೆಕ್ಕಿಲ್ ಪ್ರತಿಷ್ಠಾನಕ್ಕೆ ರಾಜೀವ್ ಗಾಂಧಿ ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ನಾರಾಯಣ ಸ್ವಾಮಿ ಭೇಟಿ

ನೋಡನೋಡುತ್ತಲೇ ವ್ಯಕ್ತಿಯನ್ನು ಮುದ್ದಾಡಲು ಹೊರಟ ಮೊಸಳೆ..!,ವೈರಲ್ ವಿಡಿಯೋ ನೋಡಿ ನೆಟ್ಟಿಗರು ಶಾಕ್..!ನೀವೂ ವಿಡಿಯೋ ವೀಕ್ಷಿಸಿ..

ಡಿ.8 ರಿಂದ ರಾಜ್ಯಾದ್ಯಂತ ಹಲವು ಕಡೆ ಭಾರೀ ಮಳೆ ಸಾಧ್ಯತೆ