Latestಕ್ರೈಂವಿಡಿಯೋವೈರಲ್ ನ್ಯೂಸ್

ದಿಲ್ಲಿ ಕಾಲ್ತುಳಿತಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ತೆಗೆದುಹಾಕುವಂತೆ ಸಾಮಾಜಿಕ ಜಾಲತಾಣ ‘ಎಕ್ಸ್‌’ಗೆ ರೈಲ್ವೆ ಸಚಿವಾಲಯ ಸೂಚನೆ..! ಕಾರಣವೇನು..?

537

ನ್ಯೂಸ್ ನಾಟೌಟ್: ದಿಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ್ದ ಕಾಲ್ತುಳಿತಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಒಳಗೊಂಡಿರುವ 285 ಲಿಂಕ್‌ ಗಳನ್ನು ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣ ಎಕ್ಸ್‌ ಗೆ ರೈಲ್ವೆ ಸಚಿವಾಲಯ ಸೂಚನೆ ನೀಡಿದೆ.

ಈ ಕುರಿತು ಫೆಬ್ರವರಿ 17ರಂದು ನೋಟಿಸ್ ಕಳುಹಿಸಲಾಗಿದ್ದು, 36 ಗಂಟೆಗಳಲ್ಲಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ʼಇದು ನೈತಿಕ ಮಾನದಂಡಗಳಿಗೆ ಮಾತ್ರ ವಿರುದ್ಧವಾಗಿಲ್ಲ, ಇದು x.comನ ನೀತಿಗೆ ವಿರುದ್ಧವಾಗಿದೆ. ಏಕೆಂದರೆ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವುದರಿಂದ ಅನಗತ್ಯವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ. ಇಂತಹ ವಿಷಯಗಳು ಭಾರತೀಯ ರೈಲ್ವೆಯ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಸಚಿವಾಲಯ ಹೊರಡಿಸಿರುವ ನೋಟಿಸ್‌ನಲ್ಲಿ ತಿಳಿಸಿದೆ.

ಫೆಬ್ರವರಿ 15ರಂದು ದಿಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 18 ಜನರು ಮೃತಪಟ್ಟಿದ್ದರು. ಇದೀಗ ಸೂಕ್ಷ್ಮ ವಿಚಾರ ಎಂದು ಕಾಲ್ತುಳಿತಕ್ಕೆ ಸಂಬಂಧಿಸಿದ ವಿಡಿಯೋವನ್ನು ಪ್ರಮುಖ ಸುದ್ದಿ ಮಾಧ್ಯಮಗಳ ಖಾತೆಗಳು ಸೇರಿದಂತೆ ಇತರ ಖಾತೆಗಳಿಂದ ತೆಗೆದು ಹಾಕುವಂತೆ ಎಕ್ಸ್‌ ಗೆ ರೈಲ್ವೆ ಸಚಿವಾಲಯ ಸೂಚಿಸಿದೆ.

See also  ರೈಲಿನಿಂದ ಇಳಿಯುವಾಗ ಬಿದ್ದರೆ ರೈಲ್ವೆಯೇ ಇಲಾಖೆಯೇ ಹೊಣೆ ಎಂದ ಹೈಕೋರ್ಟ್, ರೈಲ್ವೇ ಇಲಾಖೆಯ ವಾದವೇನು..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget