Latestದೇಶ-ವಿದೇಶರಾಜಕೀಯವೈರಲ್ ನ್ಯೂಸ್

ದೆಹಲಿಯ ಬಿಜೆಪಿ ಸರ್ಕಾರದಿಂದ ಗೃಹಲಕ್ಷ್ಮಿ ಮಾದರಿಯ ಯೋಜನೆ ಘೋಷಣೆ..! ದಿಲ್ಲಿಯ ಮಹಿಳೆಯರಿಗೆ ಪ್ರತೀ ತಿಂಗಳು 2,500 ರೂ..!

946

ನ್ಯೂಸ್‌ ನಾಟೌಟ್: ದೆಹಲಿಯಲ್ಲಿ ಹೊಸದಾಗಿ ಆಯ್ಕೆಯಾದ ಬಿಜೆಪಿ ಸರ್ಕಾರವು 26 ವರ್ಷಗಳ ನಂತರ ದೆಹಲಿ ವಿಧಾನಸಭೆಯಲ್ಲಿ ತನ್ನ ಮೊದಲ ಬಜೆಟ್ ಅನ್ನು ಮಂಗಳವಾರ(ಮಾ.25) ಮಂಡಿಸಿತು.

2025-26 (FY26) ಹಣಕಾಸು ವರ್ಷದ ಬಜೆಟ್ ಅನ್ನು ಮಂಡಿಸಿದ ದೆಹಲಿ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವೆ ರೇಖಾ ಗುಪ್ತಾ, ಅರ್ಹ ಮಹಿಳೆಯರಿಗೆ ತಿಂಗಳಿಗೆ 2,500 ಪಾವತಿಸಲು ಸರ್ಕಾರ 5,100 ಕೋಟಿ ಹಣವನ್ನು ನಿಗದಿಪಡಿಸಿದೆ ಎಂದು ತಿಳಿಸಿದ್ದಾರೆ.

ಒಟ್ಟು 1 ಟ್ರಿಲಿಯನ್ ವೆಚ್ಚದಲ್ಲಿ, ದೆಹಲಿ ಬಜೆಟ್ 2025 ಹಿಂದಿನ ಬಜೆಟ್‌ ಗಿಂತ ಶೇ. 31.5 ರಷ್ಟು ಹೆಚ್ಚಳ ಕಂಡಿದೆ. FY26 ರ ಬಂಡವಾಳ ವೆಚ್ಚವನ್ನು ದ್ವಿಗುಣಗೊಳಿಸಿ 28,000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ 2,144 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ಸಿಎಂ ಗುಪ್ತಾ ಹೇಳಿದ್ದಾರೆ.

ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ದೆಹಲಿಯ ಜನರಿಗೆ ಈಗ 10 ಲಕ್ಷ ರೂ. ವಿಮಾ ರಕ್ಷಣೆ ಸಿಗಲಿದೆ. ಕೇಂದ್ರದ 5 ಲಕ್ಷ ರೂ. ವಿಮಾ ರಕ್ಷಣೆಯ ಜೊತೆಗೆ, ದೆಹಲಿಯ ಜನರಿಗೆ 5 ಲಕ್ಷ ಟಾಪ್-ಅಪ್ ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ದೆಹಲಿ-ಎನ್‌ಸಿಆರ್ ಒಳಗೆ ಸಾರಿಗೆ ಸಂಪರ್ಕವನ್ನು ಸುಧಾರಿಸಲು ದೆಹಲಿ ಸರ್ಕಾರ 1,000 ಕೋಟಿ ರೂ. ಹಂಚಿಕೆ ಮಾಡಿದೆ.

ಇದನ್ನೂ ಓದಿಥೈಲೆಂಡ್ ​ನಲ್ಲಿ ಜರ್ಮನ್​ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮಹಾರಾಷ್ಟ್ರದ ಇಬ್ಬರು ಅರೆಸ್ಟ್..! ಪ್ರವಾಸಕ್ಕೆ ಹೋಗಿದ್ದವರಿಂದ ಕೃತ್ಯ..!

See also  ಸೀಮಂತ ಕಾರ್ಯಕ್ರಮಕ್ಕೆ ಚಿನ್ನದ ಆಭರಣ ಬದಲು ‘ಡ್ರೈ ಫ್ರೂಟ್’ ಆಭರಣ..!ಮಹಿಳೆಯ ಸರಳತೆಗೆ ಫಿದಾ ಆದ ನೆಟ್ಟಿಗರು..!ಡ್ರೈ ಫ್ರೂಟ್‌ ಆಭರಣಗಳಲ್ಲಿಯೂ ಎಷ್ಟು ಮುದ್ದಾಗಿ ಕಾಣ್ಸಿಸುತ್ತಿದ್ದಾರೆ ನೋಡಿ..
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget