ಕರಾವಳಿ

ಹೆತ್ತ ಮಗಳನ್ನೇ ಗುಂಡಿಟ್ಟು ಕೊಂದ ತಂದೆ

ನ್ಯೂಸ್ ನಾಟೌಟ್ : ತನ್ನ ಮಗಳನ್ನೇ ಗುಂಡು ಹಾರಿಸಿ ತಂದೆಯೊಬ್ಬ ಕೊಂದಿರುವ ದಾರುಣ ಘಟನೆ ದೆಹಲಿಯಿಂದ ವರದಿಯಾಗಿದೆ.

ಕೊಲೆ ಬಳಿಕ ಮೃತ ದೇಹವನ್ನು ಬ್ಯಾಗ್ ನಲ್ಲಿ ಹಾಕಿ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಎಸೆದಿದ್ದಾನೆ. ಶವವನ್ನು ಪ್ಯಾಕ್ ಮಾಡಲು ತಾಯಿಯು ಸಾಥ್ ನೀಡಿದ್ದಾರೆ. ಆಯುಷಿ (22) ಈಕೆಗೆ ತಂದೆ 2 ಬಾರಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಬಳಿಕ ಆಕೆಯ ಪೋಷಕರಾದ ತಂದೆ ನಿತೀಶ್ ಹಾಗೂ ತಾಯಿ ಬ್ರಜ್ವಾಲಾ ಮೃತದೇಹವನ್ನು ಮಥುರಾದ ರಾಯಾ ಪೊಲೀಸ್ ಠಾಣೆ ವ್ಯಾಪ್ತಿಯ ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ಎಸೆದಿದ್ದಾರೆ ಎಂಬ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ. ಕಳೆದ ವಾರಗಳ ಹಿಂದೆಯಷ್ಟೆ ಯಮುನಾ ಎಕ್ಸ್ ಪ್ರೆಸ್ ನಲ್ಲಿ ಯುವತಿಯೊರ್ವಳ ಶವ ಪತ್ತೆಯಾಗಿತ್ತು. ಬಳಿಕ ರಾಷ್ಟ್ರ ರಾಜಧಾನಿ ಪೊಲೀಸರು ತನಿಖೆ ನಡೆಸಿ ಕಾರ್ಯ ಯಶಸ್ವಿಯಾಗಿದ್ದಾರೆ. ಈ ಪ್ರಕರಣ ಸಂಬಂಧ ಕೊಲೆಯಾದ ಆಯುಷಿ ಯಾದವ್ ತಂದೆ ಹಾಗೂ ತಾಯಿಯನ್ನು ಬಂಧಿಸಲಾಗಿದ್ದು ಭಾರತೀಯ ದಂಡ ಸಂಹಿತೆಯ ವಿವಿಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಹಂಚಿಕೊಂಡಿರುವ ಎಸ್ಎಸ್ಪಿ ಮಥುರಾ ಮಾರ್ತಾಂಡ್ ಪಿ ಸಿಂಗ್, ಇದೊಂದು ಮರ್ಯಾದಾ ಹತ್ಯೆಯ ಪ್ರಕರಣವಾಗಿದೆ ಎಂದು ತಿಳಿಸಿದ್ದಾರೆ. ಆರೋಪಿಯು ತನ್ನ ಮಗಳು ತನಗೆ ಒಪ್ಪಿಗೆಯಿಲ್ಲದೇ ಇರುವ ವ್ಯಕ್ತಿಯನ್ನು ಇಷ್ಟಪಟ್ಟು ಮದುವೆಯಾಗಿದ್ದಕ್ಕೆ ಕೋಪಗೊಂಡಿದ್ದರು. ಇದೇ ವಿಚಾರಕ್ಕೆ ಮಗಳೊಂದಿಗೆ ಜಗಳ ನಡೆದಿದ್ದ ಕಾರಣ, ಈತ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಬಳಿಕ ಪುತ್ರಿಯ ಶವವನ್ನು ಪ್ಯಾಕ್ ಮಾಡಲು ತಾಯಿ ಕೂಡ ಸಹಕರಿಸಿದ್ದಾಳೆ ಎಂದು ಹೇಳಿದ್ದಾರೆ.

Related posts

ಲೋಕಸಭಾ ಚುನಾವಣೆಗೆ ಟಿಕೆಟ್​ ಕೈತಪ್ಪಿದ ವಿಚಾರ,ಹುಟ್ಟು ಹಬ್ಬದಂದು ಅಚ್ಚರಿಯ ಹೇಳಿಕೆ;ಕಾಂಗ್ರೆಸ್​ ನಾಯಕರು ಸಂಪರ್ಕಿಸಿರೋದು ನಿಜ ಎಂದ ಮಾಜಿ ಮುಖ್ಯ ಮುಂತ್ರಿ ಡಿ.ವಿ.ಎಸ್‌.

ಸಂಪಾಜೆ: ಗೌರಿ ಲಂಕೇಶ್ ಹತ್ಯೆ ಪ್ರಕರಣ, ಸಂಪಾಜೆಯ ನಿವಾಸಿಗೆ ಸುದೀರ್ಘ 6 ವರ್ಷದ ಬಳಿಕ ಜಾಮೀನು

ಸುಳ್ಯದಲ್ಲಿ ಮಲೆಯಾಳಂನ ಹಾಸ್ಯ ನಟ ಜೋಬಿ ಎ.ಎಸ್.,ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ ಅಭಿಮಾನಿಗಳು