Latestಕ್ರೈಂವಿಡಿಯೋವೈರಲ್ ನ್ಯೂಸ್ಸಿನಿಮಾ

ವಿದ್ಯಾ ಬಾಲನ್ ಡೀಪ್‌ ಫೇಕ್ ವಿಡಿಯೋ ವೈರಲ್..! ಈ ಬಗ್ಗೆ ನಟಿ ಹೇಳಿದ್ದೇನು..?

254
Spread the love

ನಟಿ ವಿದ್ಯಾ ಬಾಲನ್ ಬಗ್ಗೆ ಆನ್‌ ಲೈನ್‌ ನಲ್ಲಿ ಹರಿದಾಡುತ್ತಿರುವ ಡೀಪ್‌ ಫೇಕ್ ವಿಡಿಯೋ ಕುರಿತು ಕೃತಕ ಬುದ್ಧಿಮತ್ತೆಯ ದುರ್ಬಳಕೆ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಈ ನಕಲಿ ವಿಡಿಯೋ ಬಗ್ಗೆ ತಮ್ಮ ಫಾಲೋವರ್ಸ್‌ಗಳಿಗೆ ಎಚ್ಚರಿಕೆ ನೀಡಲು ಮತ್ತು ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಮ್ಮ ಇನ್‌ ಸ್ಟಾಗ್ರಾಮ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಡೀಪ್‌ ಫೇಕ್ ವಿಡಿಯೋ ಜೊತೆಗೆ ಹೇಳಿಕೆ ಹಂಚಿಕೊಂಡಿರುವ ನಟಿ, “ನಾನು ಕಾಣಿಸಿಕೊಂಡಿರುವ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್‌ ನಲ್ಲಿ ಹರಿದಾಡುತ್ತಿವೆ. ಆದಾಗ್ಯೂ, ಈ ವಿಡಿಯೋಗಳು AI-ಜನರೇಟೆಡ್ ಮತ್ತು ನಕಲಿ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಈ ವಿಡಿಯೋಗಳನ್ನು ಮಾಡಿ ಹಂಚುವಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಮತ್ತು ಯಾವುದೇ ರೀತಿಯಲ್ಲಿ ಇಂತಹ ವಿಷಯವನ್ನು ನಾನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

View this post on Instagram

 

A post shared by Vidya Balan (@balanvidya)

ಇಂತಹ ವಿಷಯಗಳನ್ನು ಹಂಚಿಕೊಳ್ಳುವ ಮೊದಲು ಎಚ್ಚರಿಕೆ ವಹಿಸುವಂತೆ ಮತ್ತು ಈ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ವಿದ್ಯಾ ಬಾಲನ್ ತಮ್ಮ ಅಭಿಮಾನಿಗಳಿಗೆ ವಿನಂತಿಸಿದ್ದಾರೆ. “ಈ ವಿಡಿಯೋದಲ್ಲಿ ಮಾಡಲಾದ ಯಾವುದೇ ಹೇಳಿಕೆಗಳನ್ನು ನನಗೆ ಹೋಲಿಸಬೇಡಿ, ಏಕೆಂದರೆ ಅದು ನನ್ನ ಅಭಿಪ್ರಾಯಗಳು ಅಥವಾ ಕೆಲಸವನ್ನು ಪ್ರತಿಬಿಂಬಿಸುವುದಿಲ್ಲ. ವಿಡಿಯೋ ಹಂಚಿಕೊಳ್ಳುವ ಮೊದಲು ಮಾಹಿತಿಯನ್ನು ಖಚಿತಪಡಿಸಿಕೊಳ್ಳಿ ಮತ್ತು ಈ ರೀತಿಯ ದಾರಿ ತಪ್ಪಿಸುವ AI-ಜನರೇಟೆಡ್ ವಿಷಯದ ಬಗ್ಗೆ ಜಾಗರೂಕರಾಗಿರಿ ಎಂದು ನಾನು ಎಲ್ಲರನ್ನು ಒತ್ತಾಯಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

See also  ಕಪ್ಪು ಬಣ್ಣದ ಮಗು ಹುಟ್ಟಿದ್ದಕ್ಕೆ 'ಡೈವೋರ್ಸ್'​ ಕೇಳಿದ ಗಂಡ..! ಈ ಬಗ್ಗೆ ಆಕೆ ಹೇಳಿದ್ದೇನು..?
  Ad Widget   Ad Widget   Ad Widget   Ad Widget