ಬೆಂಗಳೂರುರಾಜಕೀಯ

ದೀಪಾವಳಿಗೆ ಮಾಜಿ ಸಿಎಂ ಎಚ್.​ಡಿ. ಕುಮಾರಸ್ವಾಮಿ ಮನೆಗೆ ಬಿಟ್ಟಿ ವಿದ್ಯುತ್‌ ಪಡೆದ್ರಾ..?, ಕಾಂಗ್ರೆಸ್‌ ಆರೋಪಕ್ಕೆ ಎಚ್‌ಡಿಕೆ ಹೇಳಿದ್ದೇನು..?

ನ್ಯೂಸ್‌ ನಾಟೌಟ್‌: ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ. ಹಬ್ಬದ ಪ್ರಯುಕ್ತ ಮಾಜಿ ಸಿಎಂ ಎಚ್.​ಡಿ. ಕುಮಾರಸ್ವಾಮಿ (HD Kumaraswamy) ಅವರ ನಿವಾಸವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಆದರೆ ಎಚ್‌ಡಿಕೆ ಅವರ ಮನೆಗೆ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆದು ದೀಪಾಲಂಕಾರ ಮಾಡಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಇದಕ್ಕೆ ಪೂರಕವಾಗಿರುವ ವಿಡಿಯೋವನ್ನೂ ಕೂಡ ಬಿಡುಗಡೆ ಮಾಡಿದೆ. ಘಟನೆ ಬಗ್ಗೆ ಮಾಜಿ ಸಿಎಂ ಎಚ್‌ಡಿಕೆ ಪ್ರತಿಕ್ರಿಯಿಸಿ ಖಾಸಗಿ ಡೆಕೋರೇಟರ್ ಅಚಾತುರ್ಯಕ್ಕೆ ನನ್ನ ವಿಷಾದವಿದೆ. ಬೆಸ್ಕಾಂ ಅಧಿಕಾರಿಗಳು ಬಂದು ಪರೀಕ್ಷೆ ಮಾಡಿ ನೋಟಿಸ್ ನೀಡಲಿ. ಅದಕ್ಕೆ ದಂಡ ಕಟ್ಟುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಕುಮಾರಸ್ವಾಮಿ, ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ. ಆಗ ನಾನು ಬಿಡದಿಯ ತೋಟದಲ್ಲಿದ್ದೆ. ನಿನ್ನೆ (ನವೆಂಬರ್ 13) ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್ ಬೋರ್ಡ್ ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ ಎಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್‌ ಇದನ್ನೇ ದೊಡ್ಡದು ಮಾಡಿ ಪ್ರಚಾರ ಪಡೆಯುತ್ತಿದೆ. ನಾನೇನು ರಾಜ್ಯದ ಆಸ್ತಿ ಕಬಳಿಸಿಲ್ಲ. ಬೆಸ್ಕಾಂ ಅಧಿಕಾರಿಗಳು ಕೈಗೊಳ್ಳುವ ಕ್ರಮಕ್ಕೆ ನಾನು ಸಿದ್ಧನಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

Related posts

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದಂತೆ ಬಿಜೆಪಿ ಕಚೇರಿ ಸ್ಫೋಟಕ್ಕೆ ಯತ್ನ..! ರಾಷ್ಟ್ರೀಯ ತನಿಖಾ ದಳದಿಂದ ರಹಸ್ಯ ಬಯಲು..!

ನೂತನ ಕುಮಾರಿ ಅವರ ಕೆಲಸವನ್ನು ಕಾಂಗ್ರೆಸ್ ವಜಾ ಮಾಡಿಲ್ಲ,ಹಿಂದಿನ ಸರಕಾರದ ಆದೇಶದಂತೆ ಕೆಲಸಕ್ಕೆ ಕತ್ತರಿ ಬಿದ್ದಿದೆ-ಎಂ.ವೆಂಕಪ್ಪ ಗೌಡ

10 ವರ್ಷದ ವಿಶೇಷ ಚೇತನ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಿನ್ಸಿಪಾಲ್..! ಬೆಂಗಳೂರಲ್ಲಿ ನಡೆದ ಅಮಾನವೀಯ ಕೃತ್ಯ ಬಯಲಾದದ್ದೇ ರೋಚಕ!