ಕರಾವಳಿ

ದೀಪಾವಳಿ, ತುಳಸಿ ಪೂಜೆಗೆ ಪಟಾಕಿ ಹೊಡಿತೀರಾ..? ನೀವು ಈ ಜಾಗಗಳ ಸುತ್ತಮುತ್ತ ವಾಸವಿದ್ದರೆ ಖಂಡಿತ ಪಟಾಕಿ ಹೊಡೆಯುವಂತಿಲ್ಲ..! ಯಾವ ಜಾಗ..? ಇಲ್ಲಿದೆ ಮಾಹಿತಿ

ನ್ಯೂಸ್ ನಾಟೌಟ್: ದೀಪಾವಳಿ ಹತ್ತಿರಕ್ಕೆ ಬರುತ್ತಿದ್ದಂತೆ ಪಟಾಕಿ ಹೊಡೆಯುವ ಖುಷಿಯಲ್ಲಿ ಜನ ಇರ್ತಾರೆ.  ಆದರೆ ಈ ಸಲ ಬೇಕಾಬಿಟ್ಟಿ ಪಟಾಕಿ ಹೊಡೆಯುವಂತಿಲ್ಲ ಎಂಬ ಖಡಕ್ ನಿಯಮ ಜಾರಿಗೆ ತರಲಾಗುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಮನಬಂದಂತೆ ಪಟಾಕಿ ಸಿಡಿಸಿದರೆ ಶಿಕ್ಷೆ ಗ್ಯಾರಂಟಿ ಅನ್ನುವ ಸಂದೇಶ ಹೊರಬಿದ್ದಿದೆ.

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ದೀಪಾವಳಿ, ತುಳಸಿಪೂಜೆ ಮತ್ತು ಕ್ರಿಸ್ಮಸ್ ಹಬ್ಬಗಳ ಸಂಧರ್ಭದಲ್ಲಿ ಪಟಾಕಿಗಳ ಮಾರಾಟ ಮತ್ತು ಬಳಕೆ ನಿಯಂತ್ರಿಸುವ  ಬಗ್ಗೆ ಸರ್ವೋಚ್ಚ ನ್ಯಾಯಾಲಯ ಸಾರ್ವಜನಿಕರಲ್ಲಿ ಆದೇಶ ಮತ್ತು ನಿರ್ದೇಶನ ನೀಡಿದೆ.  ಹಬ್ಬಗಳ ಸಂದರ್ಭದಲ್ಲಿ ಹಸಿರು ಪಟಾಕಿಗಳು ಮಾತ್ರ ಬಳಸಬೇಕು, ಪಟಾಕಿಗಳನ್ನು ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿ, ಮಕ್ಕಳು ಹಾಗೂ ವೃದ್ದರಿಗೆ ತೊಂದರೆಯಾಗದಂತೆ ಬಳಸಬೇಕು. ಪಟಾಕಿ ಹಚ್ಚುವ ವೇಳೆ ಯಾವುದೇ ಸ್ಥಳೀಯ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆ ಸುತ್ತಮುತ್ತಲಿನ ಹಾಗೂ ನಿಷೇಧಿತ ವಲಯದಲ್ಲಿ ಬಳಸುವಂತಿಲ್ಲ ಮತ್ತು ಮಾರಾಟ ಮಾಡುವಂತಿಲ್ಲ.

ಹಸಿರು ಪಟಾಕಿಗಳ ಮೇಲೆ ಮತ್ತು ಪ್ಯಾಕೇಟ್ ಮೇಲೆ ಹಸಿರು ಪಟಾಕಿ ಚಿಹ್ನೆ ಇರುತ್ತದೆ ಹಾಗೂ ಕ್ಯೂಆರ್ ಕೋಡ್ ಸಹ ಇರುತ್ತದೆ, ,ಇವು ಹಸಿರು ಪಟಾಕಿಗಳೆಂದು ಗುರುತಿಸಬಹುದು. ಹಬ್ಬಗಳ ಸಂಧರ್ಭದಲ್ಲಿ ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಹಸಿರು(ಕಡಿಮೆ ಶಬ್ದ ಮಾಡುವ ) ಪಟಾಕಿ, ಸುಡುಮದ್ದು ಸಿಡಿಸುವುದಕ್ಕೆ ಸರ್ವೋಚ್ಚ ನ್ಯಾಯಾಲಯವು ಅನುಮತಿ ನೀಡಿದೆ.  ಉಳಿದ ಸಮಯದಲ್ಲಿ ಪಟಾಕಿ ಸುಡುಮದ್ದುಗಳನ್ನು ಸಿಡಿಸುವುದು ನಿಷೇಧಿಸಲಾಗಿದೆ. ಕಡ್ಡಾಯವಾಗಿ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ಮಹಾನಗರಪಾಲಿಕೆಯ ಉಪ ಆಯುಕ್ತರು(ಕಂದಾಯ) ಪ್ರಕಟಣೆಯಲ್ಲಿ ತಿಳಸಿದ್ದಾರೆ.

Related posts

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಅಧ್ಯಕ್ಷ ಡಾ|ಕೆ.ವಿ.ಚಿದಾನಂದರಿಗೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ 2023 ಪ್ರಧಾನ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿಗೆ ಬಿಗಿ ಭದ್ರತೆಯಲ್ಲಿ ಬಂದ EVM ಮೆಷಿನ್ ಗಳು, ಸುಳ್ಯ ವಿಧಾನ ಸಭಾ ಕ್ಷೇತ್ರದ ಎಲ್ಲ ಮತಗಟ್ಟೆಗೆ EVM ಮೆಷಿನ್ ಕಳುಹಿಸೋಕೆ ಕ್ಷಣಗಣನೆ

ಸುಳ್ಯ:ರಾಜ್ಯ ಮಟ್ಟದ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟ, ಕೆವಿಜಿ ಪಾಲಿಟೆಕ್ನಿಕ್‌ಗೆ ಸಮಗ್ರ ಪ್ರಶಸ್ತಿಯ ಗರಿ..!