ಕರಾವಳಿ

ಹಬ್ಬದ ಊಟ ಮಾಡಿ ಮಲಗಿದವರು ಆಸ್ಪತ್ರೆಯಲ್ಲಿ ಎದ್ದರು..!

ನ್ಯೂಸ್ ನಾಟೌಟ್:  ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬ ರಾತ್ರಿ ಹಬ್ಬದೂಟ ಮಾಡಿ ಮಲಗಿದವರು ಮತ್ತೆ ಆಸ್ಪತ್ರೆಯಲ್ಲಿಯೇ ಎದ್ದಿರುವ ಘಟನೆಯೊಂದು ಮಂಗಳೂರಿನಿಂದ ವರದಿಯಾಗಿದೆ. ಅಷ್ಟಕ್ಕೂ ಇವರು ಅಸ್ವಸ್ಥರಾಗಲು ಕಾರಣ ಹೆಸರು ಬೇಳೆ ಮತ್ತು ಐಸ್ ಕ್ರಿಮ್ ಎಂದು ತಿಳಿದು ಬಂದಿದೆ.

ಹಬ್ಬದ ಸಂಭ್ರಮದಲ್ಲಿದ್ದ ಮಂಗಳೂರಿನ ಜೆಪ್ಪು ಬಪ್ಪಲ್ ನ ಮನೆಯೊಂದರ ಬಾಗಿಲು ಬುಧವಾರ ಬೆಳಗ್ಗೆ ಆದರೂ ತೆರೆದಿರಲಿಲ್ಲ. ರಾತ್ರಿ ಅಷ್ಟು ಚೆನ್ನಾಗಿ ಹಬ್ಬದ ಊಟ ಮಾಡಿ ಕುಣಿದು ಕುಪ್ಪಳಿಸಿದ್ದ ಕುಟುಂಬಕ್ಕೆ ದಿಢೀರ್ ಏನಾಯಿತು? ಅನ್ನುವ ಅನುಮಾನ  ಸಂಬಂಧಿಕರಿಗೆ ಬಂತು. ತದ ನಂತರ ಅವರು ಬಂದು ಬಾಗಿಲು ತೆರೆದರು. ಆಗ ನಾಲ್ವರು ಅಸ್ವಸ್ಥರಾದ ವಿಚಾರ ಬೆಳಕಿಗೆ ಬಂದಿದೆ. ಅಸ್ವಸ್ಥಗೊಂಡವರನ್ನು ಅರವಿಂದ ರಾವ್ (52), ಶ್ರೀಮತಿ ಪ್ರಭಾವತಿ(45), ಸೌರಭ್(20), ಪ್ರತೀಕ್ (18) ವರ್ಷ ಎಂದು ಗುರುತಿಸಲಾಗಿದೆ. ಅಸ್ವಸ್ಥಗೊಂಡವರನ್ನು ತಕ್ಷಣ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥರಾದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

Related posts

ಆಸ್ಪತ್ರೆಗೆ ತೆರಳಿ ಬಿಜೆಪಿ ರಾಜ್ಯಾಧ್ಯಕ್ಷರ ಆರೋಗ್ಯ ವಿಚಾರಿಸಿದ ಸಿಎಂ

ಬಾಲಕನನ್ನೇ ಬಲಿ ಪಡೆಯಿತೇ ಐಸ್ ಕ್ರೀಂ? ಸೇವಿಸಿದ ಬಳಿಕ ಅಸ್ವಸ್ಥಗೊಂಡು ಮೃತ್ಯು

ಭೂಕಂಪಕ್ಕೂ ಮುನ್ನ ಮನೆ ಮೇಲೆ ಕುಸಿದ ಭಾರೀ ಗುಡ್ಡ..!