ಕ್ರೀಡೆ/ಸಿನಿಮಾಕ್ರೈಂರಾಜ್ಯವೈರಲ್ ನ್ಯೂಸ್ಸಿನಿಮಾ

ಅಶ್ವಿನಿ ಪುನೀತ್ ರಾಜ್​ಕುಮಾರ್ ಫೋಟೋ ಬಳಸಿ ಡೀಪ್ ಫೇಕ್ ವಿಡಿಯೋ ಹಂಚಿಕೊಂಡ ವ್ಯಕ್ತಿ..! ಫಿಲ್ಮ್ ಚೇಂಬರ್ ​ಗೆ ದೂರು ನೀಡಿದ ಅಭಿಮಾನಿಗಳು..!

ನ್ಯೂಸ್ ನಾಟೌಟ್: ಕೆಲವು ನಟರ ಅಭಿಮಾನಿಗಳು, ಪ್ರತಿಸ್ಪರ್ಧಿ ನಟರ ಬಗ್ಗೆ ಅವರ ಕುಟುಂಬದ ಬಗ್ಗೆ ತೀರ ಕೀಳು ಮಟ್ಟದ ಕಮೆಂಟ್ ಮಾಡುವುದು, ಟ್ರೋಲ್ ಮಾಡುವುದು ಹೆಚ್ಚಾಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಬಗ್ಗೆ ಸಹ ಕೀಳು ಮಟ್ಟದ ಪದಗಳನ್ನು ಬಳಸಿ ಟ್ರೋಲ್ ಮಾಡಿದ್ದಾರೆ. ಇದೀಗ ಟ್ರೋಲರ್​ಗಳ ವಿರುದ್ಧ ರಾಜ್ ಕುಟುಂಬದ ಅಭಿಮಾನಿಗಳು ಫಿಲಂ ಚೇಂಬರ್​ಗೆ ದೂರು ನೀಡಿದ್ದಾರೆ.

ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರ ಚಿತ್ರ ಬಳಸಿ ಡೀಪ್ ಫೇಕ್ ವಿಡಿಯೋ ಒಂದನ್ನು ವ್ಯಕ್ತಿಯೊಬ್ಬ ಹಂಚಿಕೊಂಡಿದ್ದು, ತೀರ ಕೆಟ್ಟ ಭಾಷೆ ಬಳಸಿ, ತನ್ನ ವಿಕೃತಿ ಮೆರೆದಿದ್ದ ಎನ್ನಲಾಗಿದೆ. ಆ ವಿಡಿಯೋ ಮತ್ತು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ರಾಜ್ ಕುಟುಂಬದ ಅಭಿಮಾನಿಗಳು ಈ ಬಗ್ಗೆ ಫಿಲಂ ಚೇಂಬರ್ ಅಧ್ಯಕ್ಷ ಎನ್​ಎಂ ಸುರೇಶ್, ಸಾರಾ ಗೋವಿಂದುಗೆ ವಿಡಿಯೋ ಹಾಗೂ ಚಿತ್ರಗಳ ಪ್ರತಿ ನೀಡಿ ದೂರು ನೀಡಿದ್ದು, ಫಿಲಂ ಚೇಂಬರ್ ನವರೇ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ನಕಲಿ ಖಾತೆಗಳನ್ನು ಬಳಸಿ ಇಂಥಹಾ ಅಸಭ್ಯ ವಿಡಿಯೋಗಳನ್ನು ಹರಿಬಿಡುತ್ತಿದ್ದು, ಸೋಷಿಯಲ್ ಮೀಡಿಯಾಗೆ ಆಧಾರ್ ಲಿಂಕ್ ಕಡ್ಡಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಫಿಲ್ಮ್ ಚೇಂಬರ್ ​ಗೆ ಮನವಿ ಸಹ ಮಾಡಿದ್ದಾರೆ.

ದೂರು ಸ್ವೀಕರಿಸಿ ಮಾತನಾಡಿರುವ ಅಧ್ಯಕ್ಷ ಎನ್​ಎಂ ಸುರೇಶ್, ‘ಈ ರೀತಿ ಘಟನೆ ಇತ್ತೀಚೆಗೆ ಹೆಚ್ಚಾಗುತ್ತಿದೆ, ಚಿತ್ರರಂಗದಲ್ಲಿ ಎಲ್ಲರೂ ಒಂದು ಕುಟುಂಬ ಇದ್ದ ಹಾಗೆ. ಯಾರೂ ಈ ರೀತಿ ಕೃತ್ಯ ಮಾಡಬಾರದು, ಈ ಬಗ್ಗೆ ಕಮಿಷನರ್, ಸೈಬರ್ ಕ್ರೈಂ ಗೆ ದೂರು ಕೊಡುತ್ತೀವಿ’ ಎಂದು ಭರವಸೆ ನೀಡಿದ್ದಾರೆ. ಇನ್ನು ಸಾರಾ ಗೋವಿಂದು ಮಾತನಾಡಿ, ‘ಕೆಲ ಕಿಡಿಗೇಡಿಗಳು ಈ ರೀತಿ ಕೃತ್ಯ ಮಾಡುತ್ತಿದ್ದಾರೆ. ಇಂತ ಕೆಲಸ ಮಾಡುವವರು ರಣಹೇಡಿಗಳು, ಧೈರ್ಯ ಇದ್ದರೆ ಮುಂದೆ ಬಂದು ಮಾತಾಡಲಿ, ಈ ಬಗ್ಗೆ ಪೊಲೀಸ್ ಕಮಿಷನರ್ ಗೆ ದೂರು ಕೊಡುತ್ತೇವೆ. ರಾಜ್ ಕುಮಾರ್ ಕುಟುಂಬಕ್ಕೆ ಒಂದು ಬೆಲೆಯಿದೆ, ಕರ್ನಾಟಕ ಚಿತ್ರ ರಂಗದ ಗೌರವ ಹಾಳುಮಾಡಬೇಡಿ. ಈ ರೀತಿ ಕೃತ್ಯ ಮಾಡಿದವರ ವಿರುದ್ಧ ಕ್ರಮ ಆಗುತ್ತೆ’ ಎಂದಿದ್ದಾರೆ.

Click

https://newsnotout.com/2024/09/darshan-thugudeepa-women-protest-infront-of-jail-kannada-news-ballary/
https://newsnotout.com/2024/09/darshan-and-others-party-celebration-before-act-photo-revealed/
https://newsnotout.com/2024/09/airplane-parts-are-droped-to-house-kannada-news-control-room/
https://newsnotout.com/2024/09/tulunadu-culture-are-misused-in-maharatra-kanada-news-kantara-effect/
https://newsnotout.com/2024/09/ksrtc-and-school-bus-collision-rayachur-40-students-in-kannada-news/
https://newsnotout.com/2024/09/pattanagere-shed-bengaluru-renukaswami-photo-leaked-kannada-news/
https://newsnotout.com/2024/09/konkana-railway-job-vacancy-kannada-news-karnataka-190-jobs/

Related posts

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ರೋಹಿತ್ ಶರ್ಮ ಮಿಂಚು, ಹಲವು ದಾಖಲೆ ನಿರ್ಮಿಸಿ ಇತಿಹಾಸ ಬರೆದ ಹಿಟ್‌ಮ್ಯಾನ್..!

ಶಾಲಾ ಬಾಲಕಿಗೆ ತಿಂಡಿ-ಜ್ಯೂಸ್ ಕೊಡಿಸಿ ಕಾಡಿಗೆ ಕರೆದೊಯ್ದು ಕಿರಾತಕ! ಮೂರು ದಿನಗಳ ಬಳಿಕ ಶವ ಪತ್ತೆ!

50ರ ವಿವಾಹಿತನ ಜೊತೆ 19ರ ವಿದ್ಯಾರ್ಥಿನಿ ನಾಪತ್ತೆ..! 4 ದಿನಗಳ ಬಳಿಕ ಇಬ್ಬರ ಮೃತದೇಹಗಳು ಕೆರೆಯಲ್ಲಿ ಪತ್ತೆ..! ಇಲ್ಲಿದೆ ಸಂಪೂರ್ಣ ಮಾಹಿತಿ