ಬೆಂಗಳೂರು

ಸಿಗರೇಟ್ ಸೇದುವಾಗ 33ನೇ ಮಹಡಿಯಿಂದ ಬಿದ್ದು ಟೆಕ್ಕಿ ಕೊನೆಯುಸಿರು..!ಏನಿದು ಘಟನೆ?

157

ನ್ಯೂಸ್ ನಾಟೌಟ್ : 33ನೇ ಮಹಡಿ ಮೇಲೆ ನಿಂತು  ಸಿಗರೇಟ್ ಸೇದುವ ವೇಳೆ ದೊಡ್ಡ ದುರಂತವೊಂದು ಸಂಭವಿಸಿದೆ. 27 ವರ್ಷದ ಟೆಕ್ಕಿಯೊಬ್ಬ ಬಾಲ್ಕನಿಯಿಂದ ಬಿದ್ದು ದಾರುಣ ಅಂತ್ಯ ಕಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.ಮೃತನನ್ನು ದಿಪಾಂಶು ಶರ್ಮಾ ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಕೆಆರ್ ಪುರಂ ಬಳಿಯ ಕೊಡಿಗೇಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ದಿಪಾಂಶು ಶರ್ಮಾ, ಇಬ್ಬರು ಯುವತಿಯರು ಹಾಗೂ ಓರ್ವ ಸ್ನೇಹಿತ ಸೇರಿ ಪಾರ್ಟಿ ಮಾಡಿದ್ದರು. ಪಾರ್ಟಿ ವೇಳೆ ಕಂಠಪೂರ್ತಿ ಕುಡಿದು ಗಾಂಜಾ ಸೇವನೆ ಮಾಡಿರುವ ಅನುಮಾನ  ವ್ಯಕ್ತವಾಗಿದೆ.

33ನೇ ಮಹಡಿಯ ಬಾಲ್ಕನಿಯಿಂದ ಯುವಕ ಬಿದ್ದಿದ್ದಾನೆ ಎಂದು ಹೇಳಲಾಗುತ್ತಿದೆ. ಮೃತ ಟೆಕ್ಕಿಯು ಆರ್ಮಿ ಸಿಬ್ಬಂದಿಯ ಮಗನಾಗಿದ್ದು, ಉತ್ತರ ಪ್ರದೇಶ ಮೂಲದವನಾಗಿದ್ದಾನೆ. ಪಿಜಿಯಲ್ಲಿ ವಾಸವಾಗಿದ್ದು ಮೊನ್ನೆ ರಾತ್ರಿ ಸ್ನೇಹಿತರ ಮನೆಯಲ್ಲಿ ಪಾರ್ಟಿಗೆಂದು ಹೋಗಿದ್ದ ಎಂದು ತಿಳಿದು ಬಂದಿದೆ.

See also  ಬೆಂಗಳೂರಿನ ದೇಗುಲಗಳಲ್ಲಿ ಹೊಸ ವಸ್ತ್ರಸಂಹಿತೆ..! ತುಂಡು ಬಟ್ಟೆ ಧರಿಸಿದ್ರೆ ಪ್ರವೇಶ ನಿಷಿದ್ಧ! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget