ಕ್ರೈಂ

ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿದ್ದ ಮಹಿಳೆ ಶವ ಪತ್ತೆ

ಸುಳ್ಯ: ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿದ್ದ ಮಹಿಳೆ ಶವ ಪಯಸ್ವಿನಿ ನದಿಯಲ್ಲಿ ಪತ್ತೆಯಾದ ಘಟನೆ ಪೆರಾಜೆ ಕಲ್ಚೆರ್ಪೆ ಯಿಂದ ವರದಿಯಾಗಿದೆ. ಸಣ್ಣಮನೆಯ ಮಾಧವರವರ ಪತ್ನಿ ಮೀನಾಕ್ಷಿ ಯವರು ಸೆ.11 ರಂದು ಸಂಜೆ ಅರಂತೋಡಿನ ಮಾಡದಕಾನ ಹೊಳೆಗೆ ಬಟ್ಟೆ ಒಗೆಯಲೆಂದು ಹೋದವರು ಮರಳಿ ಮನೆಗೆ ಬಾರದೇ ಇದ್ದುದರಿಂದ ಅಂದು ರಾತ್ರಿಯಿಂದ ಅರಂತೋಡು ಗ್ರಾಮಸ್ಥರು ಹುಡುಕಿದರೂ ಪತ್ತೆಯಾಗಲಿಲ್ಲ. ಮರುದಿನ ಸುಳ್ಯ ಅಗ್ನಿ ಶಾಮಕದಳದವರು ಮತ್ತು ಊರವರು ಹುಡುಕಲು ಪ್ರಾರಂಭಿಸಿದರೂ ಸಂಜೆಯವರಗೆ ಮಹಿಳೆಯ ಶವ ಪತ್ತೆಯಾಗಲಿಲ್ಲ .ಸಮಾರು ನಾಲ್ಕು ದಿನದಿಂದ ಅಗ್ನಿಶಾಮಕ ದಳ ದವರೊಂದಿಗೆ ಇಂದು ಪೈಚಾರ್ ಮುಳುಗು ತಜ್ಞರ ತಂಡ ಬೆಳಿಗ್ಗೆ ಯಿಂದ ಹುಡುಕುತ್ತಿದ್ದರು .ಇಂದು ಮಧ್ಯಾಹ್ನ ಪೆರಾಜೆ ಬಳಿ ಶವ ಪತ್ತೆಯಾಯಿತು .

Related posts

ಪುಟ್ಟ ಬಾಲಕರ ದೇಹವನ್ನು ಉಪ್ಪಿನಲ್ಲಿ ಹೂತಿಟ್ಟದ್ದೇಕೆ ಹೆತ್ತವರು..? ನೀರಿನ ಹೊಂಡದಲ್ಲಿ ಬಿದ್ದ ಮಕ್ಕಳು ಮತ್ತೆ ಬದುಕಿ ಬಂದ್ರಾ..? ಪೊಲೀಸರು ಹೇಳಿದ್ದೇನು?

ತಾಯಿಯನ್ನು ರಕ್ಷಿಸಲು ಬಂದ ಮಗನಿಗೂ ವಿದ್ಯುತ್ ಸ್ಪರ್ಶ! ಸ್ಥಳದಲ್ಲೇ ಕೊನೆಯುಸಿರೆಳೆದ ಎರಡು ಜೀವಗಳು!

ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಶಾಕ್‌ ಕೊಟ್ಟ ನೀಚರು..! ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೆ ಬಂದವರು ರಾಕ್ಷಸರಂತೆ ವರ್ತಿಸಿದ್ದೇಕೆ..?