ನ್ಯೂಸ್ ನಾಟೌಟ್ : ಮಿರತ್ ನ ದೌರಾಲಾ ಪ್ರದೇಶದ ಸಮೌಲಿ ಗ್ರಾಮದ ಮನೆಯೊಂದರಲ್ಲಿ ಭಾನುವಾರ (ಮೇ.1) 52 ಹಾವುಗಳನ್ನು ಕಂಡು ಜನರು ಬೆಚ್ಚಿ ಬಿದ್ದರು. ಒಂದರ ಮೇಲೊಂದರಂತೆ ಮಣ್ಣೊಳಗಿಂದ ಹೊರಬಂದ ಎಲ್ಲ ಹಾವುಗಳನ್ನೂ ಜನರು ಕೊಂದು ಹಾಕಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಡಿಎಫ್ ಒ ಮತ್ತಿತರ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.
ಭಾನುವಾರ ಸಂಜೆ ಸಮೌಲಿ ಗ್ರಾಮದ ಮಹಫೂಜ್ ಎಂಬವರ ಮನೆಯಲ್ಲಿ ವ್ಯಕ್ತಿಯೊಬ್ಬ ಯಾವುದೋ ಕೆಲಸದ ನಿಮಿತ್ತ ಬಂದು ನಿಂತಿದ್ದು, ಈ ವೇಳೆ ಎರಡು ಹಾವು ಕಾಣಿಸಿಕೊಂಡಿದ್ದವು. ತಕ್ಷಣ ಮನೆ ಮಾಲೀಕರಾದ ಮಹಫೂಜ್ ಎಂಬವರಿಗೆ ತಿಳಿಸಿದ್ದಾರೆ. ಬಡಿಗೆ ತೆಗೆದುಕೊಂಡು ಬಂದ ಮಹಫೂಜ್, ಎರಡೂ ಹಾವುಗಳನ್ನು ಕೊಂದಿದ್ದಾರೆ. ಸ್ವಲ್ಪ ಸಮಯದ ನಂತರ ಮತ್ತೊಂದು ಹಾವು ಕಾಣಿಸಿಕೊಂಡಿದ್ದು, ಅದನ್ನೂ ಕೊಂದಿದ್ದಾರೆ.
ಅದೇ ಸ್ಥಳದಿಂದ ಒಂದರ ನಂತರ ಮತ್ತೊಂದರಂತೆ ಹಾವುಗಳ ರಾಶಿಯೇ ಹೊರಬಂದಿವೆ. ಹಾವುಗಳು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದನ್ನು ಕಂಡ ಮಹಫೂಜ್, ಸ್ಥಳೀಯರನ್ನು ಕೂಗಿ ಕರೆದಿದ್ದಾರೆ. ಹಾವುಗಳ ರಾಶಿ ಕಂಡ ಜನ ಅಚ್ಚರಿ ವ್ಯಕ್ತಪಡಿಸಿದ್ದಲ್ಲದೇ, ನಾ ಮುಂದು ತಾ ಮುಂದು ಎಂಬಂತೆ ಎಲ್ಲ ಹಾವುಗಳನ್ನೂ ಕೊಂದು ಹಾಕಿದ್ದಾರೆ. ಮೊಬೈಲ್ ನಲ್ಲಿ ಈ ವಿಡಿಯೋ ಸೆರೆಯಾಗಿದ್ದು, ಯಾರೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ಬಂದ ಡಿಎಫ್ ಒ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
“ಈವರೆಗೆ ಸುಮಾರು 52 ಹಾವುಗಳು ಮಣ್ಣೊಳಗಿಂದ ಹೊರಬಂದಿದ್ದು, ಎಲ್ಲ ಹಾವುಗಳನ್ನೂ ಕೊಲ್ಲಲಾಗಿದೆ. ಈ ಪ್ರಮಾಣದ ಹಾವುಗಳು ಅಲ್ಲಿಂದ ಹೇಗೆ ಬಂದವೋ ಗೊತ್ತಿಲ್ಲ. ಹಾವುಗಳ ರಾಶಿ ಕಂಡು ನಮಗೆ ಭಯವಾಯಿತು. ತಕ್ಷಣ ಎಲ್ಲರನ್ನೂ ಕರೆದೆ. ಬಂದವರು ಕೊಂದು ಹಾಕಿದರು. ಕೊಂದ ಹಾವುಗಳನ್ನು ಮಣ್ಣಿನಡಿ ಹೂಳಲಾಗಿದೆ. ಹಾವುಗಳು ತುಂಬಾ ದೊಡ್ಡದಾಗಿರಲಿಲ್ಲ. ಅವುಗಳ ಉದ್ದ ಸುಮಾರು ಒಂದೂವರೆ ಅಡಿ ಇತ್ತು” ಎಂದು ಮಹಫೂಜ್ ನಡೆದ ಘಟನೆಯನ್ನು ವ್ಯಕ್ತಿಯೊಬ್ಬ ತಿಳಿಸಿದ್ದಾನೆ.
मेरठ के समौली गांव में एक भाईजान के घेर मे एक दो नहीं पूरे 52 सांप निकले। सभी सांप (चेकर्ड कीलबैक वाटर स्नैक) प्रजाति के प्रतीत हो रहें थे जो जहरीले नहीं होते। इसके बावजूद भाईजान ने सभी 52 सांपों को लाठी से पीट पीट कर मार दिया। pic.twitter.com/PSUVD1J4yt
— shalu agrawal (@shaluagrawal3) June 2, 2025
ಇಂತಹ ಪರಿಸ್ಥಿತಿಯಲ್ಲಿ ಭಯಭೀತರಾಗದಂತೆ ಹಾಗೂ ಸೂಕ್ತ ಕ್ರಮಗಳನ್ನು ಸಕಾಲದಲ್ಲಿ ತೆಗೆದುಕೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.