ರಾಜಕೀಯವೈರಲ್ ನ್ಯೂಸ್

ರಾಮ ಮಂದಿರಕ್ಕೆ ನಾನು 10ಲಕ್ಷ ನೀಡಿದ್ದೇನೆ ಆದ್ರೆ ಆಮಂತ್ರಣ ನೀಡಿಲ್ಲವೆಂದ ಮಾಜಿ ಡಿಸಿಎಂ! ಮಾಜಿ ಬಿಜೆಪಿ ಮುಖಂಡನ ಆರೋಪಗಳೇನು?

244

ನ್ಯೂಸ್ ನಾಟೌಟ್: ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಾನು 10ಲಕ್ಷ ನೀಡಿದ್ದೇನೆ. ನನಗೆ ಇನ್ನೂ ಆಹ್ವಾನ ನೀಡಿಲ್ಲ ಎಂದಿದ್ದಾರೆ.

ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹ ಮಾಡುವಾಗ ಎಲ್ಲರೂ ನೆನಪಾದರು. ಈಗ ರಾಮ ಮಂದಿರ ಸಿದ್ಧವಾದ ಮೇಲೆ ಯಾರೂ ನೆನಪಿಗೆ ಬರುವುದಿಲ್ಲ.

ನಾನು ಕೂಡಾ ರಾಮ ಮಂದಿರ (Ram Mandir) ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ಕೊಟ್ಟಿದ್ದೇನೆ. ಸ್ಥಳೀಯ ಆರ್‌ಎಸ್‌ಎಸ್‌ ನಾಯಕರು ಹಣ ತೆಗೆದುಕೊಂಡು ಹೋಗಿದ್ದರು. ಆದರೆ, ಈಗ ಯಾವುದಕ್ಕೂ ಆಹ್ವಾನ ನೀಡಿಲ್ಲ. ಬಿಜೆಪಿಯಲ್ಲಿ ಇತ್ತೀಚೆಗೆ ಒನ್ ಮ್ಯಾನ್ ಆರ್ಮಿ ರೀತಿ ಆಗಿದೆ ಎಂದು ಮಾಜಿ ಡಿಸಿಎಂ, ಕಾಂಗ್ರೆಸ್‌ ಮುಖಂಡ ಲಕ್ಷ್ಮಣ ಸವದಿ ಆರೋಪಿಸಿದ್ದಾರೆ.

ವಿಕಾಸಸೌಧಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ರಾಮ ಮಂದಿರಕ್ಕಾಗಿ ಬಿಜೆಪಿ ಹಿರಿಯ ನಾಯಕ ಲಾಲ್‌ ಕೃಷ್ಣ ಆಡ್ವಾಣಿ ಅವರು ರಥಯಾತ್ರೆ ಮಾಡಿದ್ದರು. ಆದರೆ, ಅವರೇ ಈಗ ರಾಮ ಮಂದಿರ ಉದ್ಘಾಟನೆಗೆ ಬರಬಾರದು ಅಂತ ಸಂದೇಶ ಕೊಡೋದು ಎಷ್ಟು ಸರಿ? ರಾಮ ಮಂದಿರ ಆಗೋಕೆ ಆಡ್ವಾಣಿ ಕಾರಣ. ಈಗ ಅವರನ್ನೇ ಬರಬಾರದು ಎಂದು ಹೇಳುವ ಬಿಜೆಪಿಯವರಿಗೆ ಎಲ್ಲಿ ನೈತಿಕತೆ ಇದೆ? ಎಂದು ಪ್ರಶ್ನೆ ಮಾಡಿದರು ಎನ್ನಲಾಗಿದೆ.

https://newsnotout.com/2024/01/nursery-and-school-leave-in-up/
See also  ಗರ್ಭಗುಡಿ ಪ್ರವೇಶಿಸಿದ ಮಹಿಳೆಯನ್ನು ಎಳೆದು ಹೊರ ಹಾಕಿದ್ದೇಕೆ ಸಿಬ್ಬಂದಿ..! ರಾಜವಂಶಸ್ಥೆಯನ್ನು ಬಂಧಿಸಿದ್ದೇಕೆ ಪೊಲೀಸರು? ಅಷ್ಟಕ್ಕೂ ಮಧ್ಯರಾತ್ರಿ ನಡೆದದ್ದಾದರೂ ಏನು? ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget