ನ್ಯೂಸ್ ನಾಟೌಟ್: ದೇಶಾದ್ಯಂತ ಸೋಮವಾರ ಈದ್ (Eid 2025) ಆಚರಿಸಲಾಗಿತ್ತು. ಇದೇ ವೇಳೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ 71 ವರ್ಷದ ಮಹಿಳೆಯೊಬ್ಬರು ‘ನಮಾಜ್’ (Namaz) ಮಾಡಿದ್ದರು.
ಈಗಾಗಲೇ ಉತ್ತರ ಪ್ರದೇಶ ಸರ್ಕಾರ ರಸ್ತೆಗಳು, ಫುಟ್ಪಾತ್ ನಲ್ಲಿ ನಮಾಜ್ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಆದರೆ, ಮುನ್ನಿ ಎಂದು ಗುರುತಿಸಲಾದ ವೃದ್ಧೆ ಹಮೀರ್ ಪುರದ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ನಮಾಜ್ ಮಾಡಿದರು. ಹೀಗಾಗಿ ಅವರ ಮೇಲೆ ಕೇಸ್ ದಾಖಲಿಸಲಾಗಿದೆ ಮತ್ತು ಆ ವೇಳೆ ಕರ್ತವ್ಯದಲ್ಲಿದ್ದ ಸೆಕ್ಯುರಿಟಿಯನ್ನು ಅಮಾನತ್ತುಗೊಳಿಸಲಾಗಿದೆ.
Thread 🧵
Video of a woman offering “namaz” in the collectorate premises in Hamirpur, UP, went viral a few days back. Soon after the video, as expected FIR was filed against the woman. pic.twitter.com/xx04RTRUZZ— Mohammed Zubair (@zoo_bear) April 3, 2025
ಸರ್ಕಾರಿ ಸ್ಥಳದಲ್ಲಿ ನಮಾಜ್ ಮಾಡುತ್ತಿರುವ ಮಹಿಳೆಯ ವಿಡಿಯೋ ಆನ್ ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಗುಲಾಬಿ ಸಲ್ವಾರ್ ಮತ್ತು ತಲೆ ಮತ್ತು ತೋಳುಗಳನ್ನು ಮುಚ್ಚುವ ಉದ್ದನೆಯ ಸ್ಕಾರ್ಫ್ ಧರಿಸಿ, ಅವರು ನೆಲದ ಮೇಲೆ ಕುಳಿತು ನಮಾಜ್ ಮಾಡಿದ್ದಾರೆ.