ನ್ಯೂಸ್ ನಾಟೌಟ್: ಅಪ್ಪ – ಅಮ್ಮನಿಗೆ ಕೆಲಸದ ಒತ್ತಡ. ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಮಗುವನ್ನು ಡೇ ಕೇರ್ ನಲ್ಲಿ ಬಿಟ್ಟು ಹೋಗುತ್ತಾರೆ. ಹಾಗೆ ಬಿಟ್ಟು ಹೋದ 15 ತಿಂಗಳ ವರ್ಷದ ಮಗುವನ್ನು ಅಲ್ಲಿನ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಸದ್ಯ ಆಕೆಯ ಕ್ರೌರ್ಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು ಆಕೆ ಪೊಲೀಸರ ಅತಿಥಿಯಾಗಿದ್ದಾಳೆ. ಅಂದ ಹಾಗೆ ಈ ಘಟನೆ ನಡೆದಿದ್ದು ನೋಯ್ಡಾದ ಸೆಕ್ಟರ್ 137 ರಲ್ಲಿರುವ ಡೇ ಕೇರ್ ಒಂದರಲ್ಲಿ, ದಂಪತಿಗಳು ತಮ್ಮ 15 ತಿಂಗಳ ಮಗುವನ್ನು ಸೇರಿಸಿದ್ದಾರೆ. ಆದರೆ ಕೆಲ ದಿನಗಳ ಬಳಿಕ ಮಗುವಿನ ಮೈಮೇಲೆ ಗಾಯದ ಕಲೆಗಳು ಕಾಣಿಸಿಕೊಂಡಿದೆ ಇದರಿಂದ ಗಾಬರಿಗೊಂಡ ಪೋಷಕರು ಡೇ ಕೇರ್ ಸಿಬ್ಬಂದಿಯಲ್ಲಿ ವಿಚಾರಿಸಿದ್ದಾರೆ.
https://x.com/RimjhimJethani1/status/1954755398403059824
ಆದರೆ ಆಕೆ ಸಮರ್ಪಕ ಉತ್ತರ ನೀಡದೆ ಪೋಷಕರ ಮೇಲೆಯೇ ದರ್ಪದಿಂದ ಉತ್ತರಿಸಿದ್ದಾಳೆ, ಇದರಿಂದ ಸಿಟ್ಟಿಗೆದ್ದ ಪೋಷಕರು ಡೇ ಕೇರ್ ನಡೆಸುತ್ತಿದ್ದ ಅಧಿಕಾರಿಗಳಿಗೆ ದೂರು ನೀಡಿ ಅಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದು ಈ ವೇಳೆ ಪೋಷಕರು ಆಘಾತಕಾರಿ ದೃಶ್ಯಗಳು ಕಂಡು ಬೆಚ್ಚಿ ಬಿದ್ದಿದ್ದಾರೆ. ದೃಶ್ಯ ಕಂಡು ಬೆಚ್ಚಿ ಬಿದ್ದರು ಡೇ ಕೇರ್ ಕೊಠಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಸಿಬ್ಬಂದಿ ಅಳುತ್ತಿರುವ ಮಗುವನ್ನು ಎತ್ತಿಕೊಂಡು ಮೊದಲು ಸಮಾಧಾನಿಸುತ್ತಿರುವುದು ಕಂಡುಬಂದಿದೆ ಆ ಬಳಿಕ ಮಗು ಅಳು ನಿಲ್ಲಿಸದೇ ಇದ್ದಾಗ ಮಗುವಿನ ಕಾಲಿಗೆ ಕೈಯಿಂದ ಚಿವುಟುವುದು, ಕೈಗೆ ಬಾಯಿಯಿಂದ ಕಚ್ಚುವುದು, ಜೊತೆಗೆ ಮಗುವಿನ ತಲೆಯನ್ನು ಗೋಡೆಗೆ ಡಿಕ್ಕಿ ಹೊಡೆಯುವುದು ಅಷ್ಟು ಮಾತ್ರವಲ್ಲದೆ ಮಗುವನ್ನು ಮೇಲಿನಿಂದ ನೆಲಕ್ಕೆ ಬೀಳಿಸುವ ಮೂಲಕ ಮಗುವಿನ ಮೇಲೆ ಕ್ರೌರ್ಯ ಮೆರೆಯುತ್ತಿರುವುದು ಕಂಡು ಬಂದಿದೆ. ಘಟನೆಗೆ ಸಂಬಂಧಿಸಿ ಮಗುವಿನ ಪೋಷಕರು ಡೇ ಕೇರ್ ಸಿಬ್ಬಂದಿ ವಿರುದ್ಧ ದೂರು ನೀಡಿದ್ದು ದೂರಿನ ಆಧಾರದ ಮೇಲೆ ಸಿಬ್ಬಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.