ಕರಾವಳಿ

ಮಗಳನ್ನೇ ‘ಗರ್ಭವತಿ’ ಮಾಡಿದ ಪುರೋಹಿತ ಮಲತಂದೆ..!

ನ್ಯೂಸ್ ನಾಟೌಟ್: ವಿವಾಹಿತೆಯನ್ನು ಮದುವೆಯಾಗಿ ಆಕೆಯ ಮಗಳ ಮೇಲೆ ನಿರಂತರ ಅತ್ಯಚಾರ ನಡೆಸಿ ಗರ್ಭವತಿಯನ್ನಾಗಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.

ಮಲತಂದೆ ತುಂಬೆ ರಾಮ ನಿವಾಸಿ ವೆಂಕಟೇಶ ಕಾರಂತ ಎಂಬಾತ ನೀಚ ಕೃತ್ಯ ಎಸಗಿದವ ಎಂದು ತಿಳಿದು ಬಂದಿದೆ. ತುಂಬೆಯಲ್ಲಿ ಪುರೋಹಿತನಾಗಿ ಕೆಲಸ ಮಾಡುತಿದ್ದ ಈತ ಮಗಳ ಮೇಲೆ ಕಳೆದ 4 ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ ಎಂಬ ಮಾಹಿತಿ ದೊರಕಿದೆ. ಬಾಲಕಿಯ ತಂದೆ ಅಪಘಾತದಲ್ಲಿ ಮರಣ ಹೊಂದಿದ ನಂತರ ಆಕೆಯ ತಾಯಿ ಎರಡನೇ ಮದುವೆಯಾಗಿದ್ದರು. ಹಾಗಾಗೀ ಬಾಲಕಿ, ತಾಯಿ ಹಾಗೂ ಮಲತಂದೆ ಜೊತೆಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು. ಅತ್ಯಾಚಾರ ವಿಷಯ ತಿಳಿದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Related posts

ಪಿಎಸ್ಐ ನೇಮಕಾತಿ ಅಕ್ರಮ: ಸಿಐಡಿಯಿಂದ ಭರ್ಜರಿ ಎಡಿಜಿಪಿ ಭೇಟೆ

ಸುಳ್ಯದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಪ್ರತಿಭಟನೆ:ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿ‍ಷೇಧ ಭರವಸೆಗೆ ಆಕ್ರೋಶ

ಬ್ಯಾಂಕಿಂಗ್ ಉದ್ಯೋಗ ನಿರೀಕ್ಷಿಸುವವರಿಗೆ ಇಲ್ಲಿದೆ ಗುಡ್ ನ್ಯೂಸ್