ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಡೇಟಿಂಗ್ ಆ್ಯಪ್ ಮೂಲಕ ತಾನು ವಿದೇಶಿ ಮಾಡೆಲ್ ಎಂದು ಹೇಳಿ ಬರೊಬ್ಬರಿ 700 ಯುವತಿಯರಿಗೆ ವಂಚನೆ..! ಸಾಮಾಜಿಕ ಜಾಲತಾಣದಲ್ಲಿ ಬ್ರೆಜಿಲ್ ಮೂಲದ ಮಾಡೆಲ್ ಓರ್ವನ ಫೋಟೋ ಬಳಕೆ..!

219

ನ್ಯೂಸ್‌ ನಾಟೌಟ್‌: ಯುವಕನೋರ್ವ ತಾನೊಬ್ಬ ವಿದೇಶಿ ಮಾಡೆಲ್ ಎಂದು ಹೇಳಿಕೊಂಡು ಬರೋಬ್ಬರಿ 700ಕ್ಕೂ ಹೆಚ್ಚು ಯುವತಿಯರು ಮತ್ತು ಮಹಿಳೆಯರಿಗೆ ವಂಚಿಸಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.

ಪೂರ್ವ ದೆಹಲಿಯ ನಿವಾಸಿ 23 ವರ್ಷದ ತುಷಾರ್ ಸಿಂಗ್ ಬಿಷ್ತ್ ಎಂಬ ಯುವಕ ತನ್ನನ್ನು ತಾನು ವಿದೇಶಿ ಮಾಡೆಲ್ ಎಂದು ಹೇಳಿಕೊಂಡು ಭಾರತದ ಬರೊಬ್ಬರಿ 700ಕ್ಕೂ ಅಧಿಕ ಮಹಿಳೆಯರು ಮತ್ತು ಯುವತಿಯರಿಗೆ ವಂಚಿಸಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ ಈತ ಖ್ಯಾತ ಡೇಟಿಂಗ್ ಅಪ್ಲಿಕೇಶನ್‌ ಗಳು ಮತ್ತು ವರ್ಚುವಲ್ ಮೊಬೈಲ್ ಸಂಖ್ಯೆಗಳ ಸಹಾಯದಿಂದ 700ಕ್ಕೂ ಅಧಿಕ ಹುಡುಗಿಯರು ಮತ್ತು ಮಹಿಳೆಯರನ್ನು ಬಲೆಗೆ ಬೀಳಿಸಿಕೊಂಡು ಅವರಿಗೆ ವಂಚಿಸಿದ್ದಾನೆ ಎನ್ನಲಾಗಿದೆ.
ಆರೋಪಿಯು ತಾನು ವಿದೇಶಿ ಫ್ರೀಲಾನ್ಸ್ ಮಾಡೆಲ್ ಎಂದು ಬರೆದುಕೊಂಡು ನಕಲಿ ಐಡಿ ಸೃಷ್ಟಿಸಿಕೊಂಡಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿಕೊಂಡು ಅದಕ್ಕೆ ಬ್ರೆಜಿಲ್ ಮೂಲದ ಮಾಡೆಲ್ ಓರ್ವನ ಫೋಟೋಗಳನ್ನು ಪ್ರೊಫೈಲ್ ಫೋಟೋವಾಗಿ ಹಾಕಿ ಹುಡುಗಿಯರು ಮತ್ತು ಯುವಕಿಯರನ್ನು ವಂಚಿಸುತ್ತಿದ್ದ. ಮೊದಲು ಸಾಮಾಜಿಕ ಜಾಲತಾಣಗಳು ಮತ್ತು ಡೇಟಿಂಗ್ ಆ್ಯಪ್ ಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರ ಸ್ನೇಹ ಬೆಳೆಸುತ್ತಿದ್ದ. ತಾನು ಪ್ರಾಜೆಕ್ಟ್‌ ಗಾಗಿ ಭಾರತಕ್ಕೆ ಬಂದಿದ್ದೇನೆ ಎನ್ನುತ್ತಿದ್ದ.

ಶೀಘ್ರದಲ್ಲೇ ಸ್ವದೇಶಕ್ಕೆ ಮರಳುತ್ತೇನೆ. ನೀವು ಸುಂದರವಾಗಿದ್ದೀರಿ.. ನಿಮ್ಮನ್ನು ಮದುವೆಯಾಗುತ್ತೇನೆ ಎಂದು ಹೇಳಿ ಈತ ಕ್ರಮೇಣ ಅವರೊಂದಿಗೆ ಆತ್ಮೀಯ ಸಲುಗೆ ಬೆಳೆಸಿಕೊಂಡು ಅವರಿಂದ ಅವರ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ತನಗೆ ಕಳುಹಿಸುವಂತೆ ಕೇಳುತ್ತಿದ್ದ. ಆತನನ್ನು ನಂಬಿದ ಯುವತಿಯರು ಮತ್ತು ಮಹಿಳೆಯರು ಆತನಿಗೆ ವಿಡಿಯೋ ಮತ್ತು ಫೋಟೋ ಕಳುಹಿಸಿದರೆ ಅದನ್ನೇ ಇಟ್ಟುಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಅವರಿಂದ ಸಾಧ್ಯವಾದಷ್ಟೂ ಹಣ ಪೀಕುತ್ತಿದ್ದ ಎನ್ನಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಈ ಆರೋಪಿಯು ವರ್ಚುವಲ್ ಅಂತರಾಷ್ಟ್ರೀಯ ಮೊಬೈಲ್ ಸಂಖ್ಯೆಯನ್ನು ಸಹ ಪಡೆದುಕೊಂಡಿದ್ದು, ಅದನ್ನು ಬಳಸಿಕೊಂಡು ಅವರು ಸ್ನ್ಯಾಪ್‌ ಚಾಟ್ ಮತ್ತು ಇತರ ಅಪ್ಲಿಕೇಶನ್‌ ಗಳಲ್ಲಿ ನಕಲಿ ಪ್ರೊಫೈಲ್‌ಗಳನ್ನು ರಚಿಸಿ ಯುವತಿಯರು ಮತ್ತು ಮಹಿಳೆಯರ ಸ್ನೇಹ ಬೆಳೆಸಿ ವಂಚಿಸುತ್ತಿದ್ದ. ಈಗ್ಗೆ ಡಿಸೆಂಬರ್ 13, 2024 ರಂದು ಪಶ್ಚಿಮ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ದೆಹಲಿ ವಿಶ್ವವಿದ್ಯಾಲಯದ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಈತನನ್ನು ಈಗ ಬಂಧಿಸಿದ್ದಾರೆ.

Click

https://newsnotout.com/2025/01/20-scale-hight-form-kannada-news-mla-break-down-kannada-news-s/
https://newsnotout.com/2025/01/auto-driver-kannada-news-women-issue-2-days-later-man-arrrested/
https://newsnotout.com/2025/01/doctor-misbehavoiur-kannada-news-viral-pak/
https://newsnotout.com/2025/01/dysp-misbehaviour-kannada-news-viral-news-d/
https://newsnotout.com/2025/01/china-and-india-health-issue-take-care-health-department/
https://newsnotout.com/2025/01/centralized-pension-scheme-kannada-news-viral-news/
https://newsnotout.com/2025/01/enforcement-directorate-scam-kannada-news-vitla-v/
See also  ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ ಗೆ ಗುದ್ದಿದ ಬೈಕ್..! ಬೈಕ್ ಸವಾರ ಸ್ಥಳದಲ್ಲೇ ಸಾವು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget