ನ್ಯೂಸ್ ನಾಟೌಟ್: ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾ ಜೈಲಿನಲ್ಲಿ ಇಡಲಾಗಿದೆ.
ದರ್ಶನ್ ಆರಂಭದಲ್ಲಿ ಇಲ್ಲೇ ಇದ್ದರು. ಅವರಿಗೆ ಐಷಾರಾಮಿ ಸವಲತ್ತು ಒದಗಿಸಲಾಯಿತು. ಇದರ ಫೋಟೋಗಳು ಕೂಡ ವೈರಲ್ ಆದವು. ಈ ಪ್ರಕರಣದಲ್ಲಿ ಕೇಸ್ ಕೂಡ ದಾಖಲಾಗಿದೆ. ಈ ವಿಚಾರಗಳನ್ನು ಗಮನಿಸಿದ್ದ ಸುಪ್ರೀಂಕೋರ್ಟ್ ದರ್ಶನ್ಗೆ ಯಾವುದೇ ಸವಲತ್ತು ಸಿಗದಂತೆ ನೋಡಿಕೊಳ್ಳಿ ಎಂದು ಹೇಳಿದೆ.
ಈ ಬಾರಿ ಜೈಲಿನ ಮ್ಯಾನ್ಯುಯಲ್ ಪ್ರಕಾರವೇ ಅಧಿಕಾರಿಗಳು ದರ್ಶನ್ನ ನಡೆಸಿಕೊಳ್ಳುತ್ತಿದ್ದಾರೆ. ಕಟ್ಟುನಿಟ್ಟಾಗಿ ಅವರಿಗೆ ಜೈಲು ಊಟವನ್ನೇ ನೀಡಬೇಕಿದೆ. ಮನೆಯಿಂದ ಯಾವುದೇ ಊಟವನ್ನು ತರುವಂತಿಲ್ಲ. ಜೈಲಿನ ಮೆನುವಿನಂತೆ ಊಟ-ತಿಂಡಿ ನೀಡಲಾಗುತ್ತಿದೆ. ಕಳೆದ ಬಾರಿ ಮನೆ ಊಟದ ವ್ಯವಸ್ಥೆ ಇತ್ತು. ಆದರೆ, ಈ ಬಾರಿ ಅದಕ್ಕೆ ಬ್ರೇಕ್ ಬಿದ್ದಿದೆ. ಸದ್ಯ ಬೆಂಗಳೂರಿನಲ್ಲಿ ಮಳೆಯ ವಾತಾವರಣ ಇದೆ. ಹೀಗಾಗಿ ಹವಾಮಾನ ತಂಪಾಗಿದೆ. ಈ ವೇಳೆ ಹೊದ್ದುಕೊಳ್ಳಲು ಒಂದು ಬೆಡ್ಶೀಟ್ ಸಾಕಾಗೋದಿಲ್ಲ. ಹೀಗಾಗಿ, ದರ್ಶನ್ ಎರಡು ಬೆಡ್ಶೀಟ್ ಕೇಳಿದ್ದಾರೆ. ಆದರೆ, ಜೈಲಿನ ಮ್ಯಾನ್ಯುಯಲ್ ಪ್ರಕಾರ ಒಂದೇ ಬೆಡ್ ಶೀಟ್ ನೀಡಲಾಗಿದೆ. ನಂತರ ಮರು ಮಾತಾಡದೇ ಅವರು ಒಂದೇ ಬೆಡ್ಶೀಟ್ ಪಡೆದು ಹೋಗಿದ್ದಾರೆ.