Uncategorized

ತೆರೆ ಮೇಲೆ ಅಬ್ಬರಿಸಿದ ದರ್ಶನ್‌ ಅಭಿನಯದ ಕನ್ನಡದ ‘ಕಾಟೇರಾ’..!100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸಲ್ಲೇ ಧೂಳೆಬ್ಬಿಸಿದ ಚಿತ್ರ

ನ್ಯೂಸ್ ನಾಟೌಟ್: ಇಡೀ ವಿಶ್ವವೇ ಕನ್ನಡ ಫಿಲ್ಮ್ ಇಂಡಸ್ಟ್ರೀಯತ್ತ ನೋಡುವಂತೆ ಮಾಡಿದ ಸಿನಿಮಾ ಅಂದ್ರೆ ಅದು ಕೆಜಿಎಫ್ ಸಿನಿಮಾ, ಬಳಿಕ ಕಾಂತಾರ ಚಿತ್ರ ಕೂಡ ಯಶಸ್ವಿ ಪ್ರದರ್ಶನವನ್ನೇ ಕಂಡಿತ್ತು.ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಕೂಡ ಭಾರಿ ಸದ್ದು ಮಾಡುತ್ತಿದೆ. ಹೌದು, ರಿಲೀಸ್ ಆದ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ.

ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವುದಕ್ಕೆ ದರ್ಶನ್ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ. ತರುಣ್ ಸುಧೀರ್ ನಿರ್ದೇಶಿಸಿರುವ ‘ಕಾಟೇರ’ ಇದೀಗ ರಾಜ್ಯದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ದಿನದಿಂದಲೂ ಕಾಟೇರ ಬಾಕ್ಸ್ ಆಫೀಸ್‌ನಲ್ಲಿ ಮುನ್ನುಗ್ಗುತ್ತಲೇ ಸಾಗಿದ್ದು, ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ.ಈ ಹಿನ್ನಲೆಯಲ್ಲಿ ಚಿತ್ರತಂಡ ಭಾರಿ ಸಂಭ್ರಮವನ್ನು ವ್ಯಕ್ತ ಪಡಿಸುತ್ತದೆ.

ಡಿಸೆಂಬರ್ 29ರಂದು ಚಿತ್ರ ರಾಜ್ಯದಾದ್ಯಂತ ತೆರೆಕಂಡಿದ್ದು,ಚಿತ್ರ ಬಿಡುಗಡೆಯಾದ ಮೊದಲನೇ ದಿನ ಕಾಟೇರ 19.79 ಕೋಟಿ ರೂ. ಗಳಿಸಿತ್ತು. ಎರಡನೇ ದಿನ 17.35 ಕೋಟಿ ರೂ. ಗಳಿಸಿತ್ತು. ಮೂರನೇ ದಿನಕ್ಕೆ ಬರೋಬ್ಬರಿ 20.94 ಕೋಟಿ ರೂ. ಸಂಗ್ರಹಿಸಿದೆ. ನಾಲ್ಕನೇ ದಿನ 18.26 ಕೋಟಿ ರೂ. ಗಳಿಸಿತ್ತು. ಆರನೇ ದಿನಕ್ಕೆ 9.78 ಕೋಟಿ ರೂ. ಗಳಿಸುವ ಮೂಲಕ ಚಿತ್ರವು ಒಟ್ಟು 95.36 ಕೋಟಿ ರೂ. ಸಂಗ್ರಹಿಸಿತ್ತು.  ಇದೀಗ ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲೇ ಬರೋಬ್ಬರಿ 104.58 ಕೋಟಿ ರೂ. ಗಳಿಸುವ ಮೂಲಕ ಕಾಟೇರ ಚಿತ್ರ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. 

ಚಿತ್ರದಲ್ಲಿ ಖ್ಯಾತ ನಟಿ ಮಾಲಾ ಶ್ರೀ ಮಗಳು ಆರಾಧನಾ ರಾಮ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು,ಹಿರಿಯ ನಟಿ ಶೃತಿ ಸೇರಿದಂತೆ ಹಿರಿಯ ನಟರಾದ ಬಿರಾದಾರ್, ಜಗಪತಿ ಬಾಬು, ಕುಮಾರ್​ ಗೋವಿಂದ್, ಮಾಸ್ಟರ್ ರೋಹಿತ್ ಮತ್ತು ಡ್ಯಾನಿಶ್ ಅಖ್ತರ್ ಸೈಫಿ ನಟಿಸಿದ್ದಾರೆ. ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದು, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ, ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. 

Related posts

ಮಸೀದಿಯಲ್ಲಿ ಶ್ರೀರಾಮನ ಮೂರ್ತಿಯನ್ನಿಟ್ಟು ಪೂಜಿಸಿದ್ರಾ ಮುಸ್ಲಿಮರು..? ಮಸೀದಿಯ ಸುತ್ತಲೂ ಕೇಸರಿ, ಹಸಿರು ಧ್ವಜಗಳಿಂದ ಅಲಂಕಾರ

ಕಲಾವಿದರು, ಸಾಹಿತಿಗಳ ದತ್ತಾಂಶ ಸಂಗ್ರಹಕ್ಕೆ ಅರ್ಜಿ ಆಹ್ವಾನ

ದರ್ಶನ್‌ ನೋಡಲು ಬಳ್ಳಾರಿ ಕಾರಾಗೃಹಕ್ಕೆ ಬಂದ ವಿಜಯಲಕ್ಷ್ಮಿ, ಮಗ ಮತ್ತು ವಕೀಲರ ಜೊತೆ ದರ್ಶನ್ ಭೇಟಿ