ಕ್ರೈಂವೈರಲ್ ನ್ಯೂಸ್ಸಿನಿಮಾ

ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಿಎಂ ಸಿದ್ದರಾಮಯ್ಯ ಸೊಸೆ ಜೊತೆ ಪಾರ್ಟಿಯಲ್ಲಿ ಭಾಗಿ..! ಇಷ್ಟು ದಿನ ಪತಿಗಾಗಿ ದೇಗುಲ ಸುತ್ತುತ್ತಿದ್ದ ವಿಜಯಲಕ್ಷ್ಮಿ ಈಗ ಮೋಜು-ಮಸ್ತಿ..?

256

ನ್ಯೂಸ್‌ ನಾಟೌಟ್‌: ನಟ ದರ್ಶನ್‌ ತೂಗುದೀಪ ಬಂಧನವಾಗಿ ಮೂರು ತಿಂಗಳಾಗುತ್ತಾ ಬಂತು. 3991 ಪುಟಗಳ ಚಾರ್ಚ್ ಶೀಟ್‌ ಕೂಡ ಸಲ್ಲಿಕೆಯಾಗಿದೆ. ದರ್ಶನ್ ಜೈಲು ಸೇರಿದ ಬಳಿಕ ಕೇವಲ ದೇವಾಲಯ ಮತ್ತು ಜೈಲು ಭೇಟಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಪತ್ನಿ ವಿಜಯಲಕ್ಷ್ಮೀ ಈಗ ಸ್ನೇಹಿತರ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಸಂಭ್ರಮಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಪ್ರಕರಣದ ಬಳಿಕ ಯಾವುದೇ ಸಮಾರಂಭಗಳಲ್ಲಿ ಕಾಣಿಸಿಕೊಳ್ಳದ ವಿಜಯಲಕ್ಷ್ಮೀ ತಮ್ಮ ಆತ್ಮೀಯ ಸ್ನೇಹಿತೆ ಶ್ರುತಿ ರಮೇಶ್‌ ಕುಮಾರ್‌ ಜನ್ಮದಿನದ ಸಂಭ್ರಮದಲ್ಲಿ ಖುಷಿಯಿಂದಲೇ ಭಾಗಿಯಾಗಿದ್ದಾರೆ.

ಈ ಅದ್ದೂರಿ ಬರ್ತಡೇ ಪಾರ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೊಸೆ ಭಾಗವಹಿಸಿದ್ದಾರೆ. ಹೆಚ್ಚಾಗಿ ಯಾವುದೇ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳದ ಸಿದ್ದರಾಮಯ್ಯ ಅವರ ಪುತ್ರ, ದಿವಂಗತ ರಾಕೇಶ್ ಅವರ ಪತ್ನಿ ಸ್ಮಿತಾ ರಾಕೇಶ್ ಈಗ ಬರ್ತಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವುದು ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಸೊಸೆ ಸ್ಮಿತಾ ಅವರ ಜೊತೆಗಿರುವ ಫೋಟೋವನ್ನು ಸ್ನೇಹಿತೆ ಶ್ರುತಿ ರಮೇಶ್‌ ಕುಮಾರ್‌ ಹಂಚಿಕೊಂಡಿದ್ದು, ಇದೇ ಫೋಟೋದಲ್ಲಿ ವಿಜಯಲಕ್ಷ್ಮಿ ಕೂಡ ಇದ್ದಾರೆ. ಇದು ಹಲವರಲ್ಲಿ ಕುತೂಹಲ ಮೂಡಿಸಿದೆ ಮತ್ತು ದರ್ಶನ್ ಜೈಲಿನಲ್ಲಿರುವಾಗ ಪತ್ನಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.

Click

https://newsnotout.com/2024/09/hindu-muslim-blood-donation-issue-by-doctor-kannada-news/
https://newsnotout.com/2024/09/govt-school-kannada-news-drunk-by-girls-inside-the-school-video-viral/
https://newsnotout.com/2024/09/darshan-thugudeepa-charge-sheet-kannada-news-highcourt-kannada-news/
https://newsnotout.com/2024/09/kananda-news-viral-news-video-cctv-fixed-on-the-doubter-head/
See also  ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಕಳ್ಳಸಾಗಣೆಯಾದ್ರೆ ಆಸ್ಪತ್ರೆಗಳ ಪರವಾನಿಗೆ ಅಮಾನತ್ತುಗೊಳಿಸಲು ಸುಪ್ರಿಂ ಕೋರ್ಟ್ ಆದೇಶ, ಮಾರ್ಗಸೂಚಿ ಬಿಡುಗಡೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget