ಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್ಸಿನಿಮಾ

ನಟ ದರ್ಶನ್‌ ಗೆ ಆಗಸ್ಟ್‌ 14ರ ವರೆಗೆ ಜೈಲೇ ಗತಿ..! ಅಧಿಕಾರಿಗಳು ಸಲ್ಲಿಸಿದ ರಿಮ್ಯಾಂಡ್ ಅರ್ಜಿಯಲ್ಲಿ ಏನಿತ್ತು..?

235

ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ಸ್ಯಾಂಡಲ್‌ವುಡ್‌ ನಟ ದರ್ಶನ್‌ಗೆ ಮತ್ತೆ ಜೈಲೇ ಗತಿಯಾಗಿದೆ. ಮತ್ತೊಮ್ಮೆ ಅವರನ್ನು ಆಗಸ್ಟ್‌ 14ರವರೆಗೆ ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. (darshan)

ಕೊಲೆ ಕೇಸ್‌ನಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಎಲ್ಲಾ ಆರೋಪಿಗಳನ್ನು 24 ಎಸಿಎಂಎಂ ಕೋರ್ಟ್‌ಗೆ ಜೈಲು ಸಿಬ್ಬಂದಿ ಹಾಜರುಪಡಿಸಿದ್ದರು. ಈ ವೇಳೆ ಜಡ್ಜ್‌ ಎಲ್ಲಾ ಆರೋಪಿಗಳ ಹೆಸರನ್ನು ಕೂಗಿ ಹೇಳಿದ್ದಾರೆ. ಹೆಸರು ಕೂಗುತ್ತಿದ್ದಂತೆ ಆರೋಪಿಗಳು ಕೈ ಎತ್ತಿ ಹಾಜರಿ ಹೇಳಿದ್ದಾರೆ. ಆ ಬಳಿಕ ಎಲ್ಲರನ್ನೂ ಆಗಸ್ಟ್‌ 14ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡುವ ಆದೇಶವನ್ನು ಜಡ್ಜ್‌ ವಿಶ್ವನಾಥ ಸಿ.ಗೌಡರ್ ಆದೇಶ ಹೊರಡಿಸಿದ್ದಾರೆ.

ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದರೆ ಕೇಸಿಗೆ ತೊಂದರೆಯಾಗಲಿದೆ. ಸಾಕ್ಷಿದಾರರು ಆರೋಪಿಗಳ ಐಡೆಂಟಿಫಿಕೇಷನ್ ಪೆರೇಡ್ ತಡೆಯುವ ಸಾಧ್ಯತೆಯೂ ಇದೆ. ಗುರುತು ಹಚ್ಚದಂತೆ ತಡೆದು ಸಾಕ್ಷಿಗಳಿಗೆ ಬೆದರಿಕೆ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಅದಲ್ಲದೆ, ತಾಂತ್ರಿಕ ಸಾಕ್ಷಿಗಳ ಪರಿಶೀಲನೆ ವೇಳೆ ಎಲ್ಲಾ ಆರೋಪಿಗಳ ಪಾತ್ರ ದೃಢವಾಗಿದೆ. ಇನ್ನೂ ಹಲವಾರು ತಾಂತ್ರಿಕ & ವೈಜ್ಞಾನಿಕ ಸಾಕ್ಷಿ ಪರಿಶೀಲನೆ ನಡೆಯುತ್ತಿದೆ. ಕೆಲವನ್ನು ತಜ್ಞರ ಪರಿಶೀಲನೆಗೆ ಕಳುಹಿಸಿದ್ದು ಅದರ ವರದಿಗಳು ಬರಬೇಕಿದೆ. ಸೀಜ್ ಆಗಿರುವ ಸಿಡಿಆರ್ ಡಿವಿಆರ್ ಡಾಟಾ ರಿಟ್ರಿವ್ ನಡೆಯುತ್ತಿದೆ. ಈ ಡೇಟಾ ಪಡೆದು ಆರೋಪಿಗಳ ವಿಚಾರಣೆ ನಡೆಸೋದು ಬಾಕಿ ಇದೆ. ನೇರವಾಗಿ ಭಾಗಿಯಾದ ಆರೋಪಿಗಳ ಸಾಕ್ಷಿ ಸಂಗ್ರಹ ಕೂಡ ಬಾಕಿ ಇದೆ ಎಂದು ಕೋರ್ಟ್‌ಗೆ ತಿಳಿಸಲಾಗಿದೆ. ಅದರೊಂದಿಗೆ ಕೊಲೆ ಕೃತ್ಯದ ಮುಂಚೆ, ಬಳಿಕ ಅನೇಕರ ಸಂಪರ್ಕ ಇನ್ನೂ ಲಭ್ಯವಿದೆ ಇನ್ನೂ ಅನೇಕ ಸಾಕ್ಷಿ ಲಭ್ಯವಿದ್ದು 164 ಹೇಳಿಕೆ ದಾಖಲಿಸಬೇಕಿದೆ ಎಂದು ಎಸ್.ಐ.ಟಿ ಅಧಿಕಾರಿಗಳು ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

Click

https://newsnotout.com/2024/08/village-of-wayanad-kannada-news-flood-viral-videos-kananda-news/
https://newsnotout.com/2024/08/shiradi-ghant-landslide-kannada-news-vehicles-viral-news/
https://newsnotout.com/2024/08/cyclinder-lpg-kannada-news-price-hike-kannada-news-viral-mews/
https://newsnotout.com/2024/08/court-and-custody-darshan-and-gang-viral-news/
https://newsnotout.com/2024/08/wayanad-landslide-kannadanews-santhosh-lad-to-kerala/

See also  ಮಡಿಕೇರಿ: ರಾತ್ರೋರಾತ್ರಿ 15ರ ಬಾಲಕಿಯ ತಲೆ ಕಡಿದು ರುಂಡದೊಂದಿಗೆ ಆರೋಪಿ ಪರಾರಿ..! ದೇಹದ ಭಾಗಗಳಿಗಾಗಿ ಹುಡುಕಾಟ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget