ಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದು ಮಾಡುವಂತೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಪೊಲೀಸರು..! ದರ್ಶನ್ ಗೆ ಮತ್ತೆ ಬಂಧನ ಭೀತಿ..!

243

ನ್ಯೂಸ್ ನಾಟೌಟ್: ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದ ನಟ ದರ್ಶನ್ ಮತ್ತು ಗ್ಯಾಂಗ್ ಗೆ ಇತ್ತೀಚೆಗೆ ಹೈಕೋರ್ಟ್​ ಜಾಮೀನು ನೀಡಿತ್ತು. ದರ್ಶನ್ ​ಗೆ ನೀಡಿರುವ ಬೇಲ್​ ರದ್ದು ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ.

ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಒಟ್ಟು 7 ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕೋರಿ ಪೊಲೀಸರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮುಂದಿನ ವಾರ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಪರಪ್ಪನ ಅಗ್ರಹಾರದಲ್ಲಿ ಜೈಲಿನ ನಿಯಮಗಳನ್ನು ಗಾಳಿಗೆ ತೂರಿದ್ದು ಬಹಿರಂಗ ಆದ ಬಳಿಕ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಕಳಿಸಲಾಗಿತ್ತು. ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇದ್ದಾಗ ದರ್ಶನ್​ಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿತ್ತು. ನಡೆದಾಡಲು ಕೂಡ ಅವರು ಕಷ್ಟಪಡುತ್ತಿದ್ದರು. ಕೂಡಲೇ ಶಸ್ತ್ರ ಚಿಕಿತ್ಸೆಯ ಅಗತ್ಯ ಇದೆ ಎಂದು ವೈದ್ಯರು ಸೂಚನೆ ನೀಡಿದ್ದರು. ಆ ವರದಿಯನ್ನು ಪರಿಗಣಿಸಿ ಮಧ್ಯಂತರ ಜಾಮೀನು ನೀಡಲಾಯಿತು. ಮಧ್ಯಂತರ ಜಾಮೀನು ಅವಧಿ ಮುಗಿಯುತ್ತಿದ್ದಂತೆಯೇ ದರ್ಶನ್​ಗೆ ರೆಗ್ಯುಲರ್​ ಬೇಲ್​ ಸಿಕ್ಕಿತ್ತು.ಈಗ ಮತ್ತೆ ಜೈಲು ಸೇರುವ ಆತಂಕ ದರ್ಶನ್ ಗೆ ಹೆಚ್ಚಾಗಿದೆ. ಸುಪ್ರೀಂ ಕೋರ್ಟ್​ ನೀಡಲಿರುವ ತೀರ್ಪಿನ ಆಧಾರದ ಮೇಲೆ ದರ್ಶನ್ ಹಾಗೂ ಇತರೆ ಆರೋಪಿಗಳ ಭವಿಷ್ಯ ನಿರ್ಧಾರ ಆಗಲಿದೆ.

Click

https://newsnotout.com/2025/01/instagram-love-by-16-and-10-year-old-childs-news-s/
https://newsnotout.com/2025/01/bengaluru-8-month-old-baby-got-influenced-by-hmpv-viral-bengaluru/
https://newsnotout.com/2025/01/kannada-news-new-year-gift-police-investigation-kannada-news-d/
https://newsnotout.com/2025/01/vishal-get-well-soon-messeges-from-fans-kannada-news-s/
See also  ಮಂಗಳೂರು: ಹಿಂದೂ ಯುವತಿಯನ್ನು ಅಪಹರಿಸಿ ಲವ್ ಜಿಹಾದ್ ..!, 'ಎರಡು ಮದುವೆಯಾಗಿರುವ ನಟೋರಿಯಸ್ ನಿಂದ ಮಗಳನ್ನು ರಕ್ಷಿಸಿ' ಎಂದು ಕಣ್ಣೀರಿಡುತ್ತಿರುವ ತಂದೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget