Latestಕ್ರೈಂಬೆಂಗಳೂರುಸಿನಿಮಾ

ಮತ್ತೊಂದು ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿಗೆ ನೋಟಿಸ್..! ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ದರ್ಶನ್ ವಿರುದ್ಧ ಪ್ರಕರಣ..!

368

ನ್ಯೂಸ್ ನಾಟೌಟ್: ದಾಸನಿಗೆ ಇದೀಗ ನಟನಿಗೆ ಹಳೆಯ ಕೇಸ್​​ಗೆ ಸಂಬಂಧಿಸಿ ನೋಟಿಸ್ ನೀಡಲಾಗಿದೆ. ಮೈಸೂರಿನ ತಮ್ಮ ಫಾರಂ ಹೌಸ್ ನಲ್ಲಿ ವಿದೇಶಿ ಬಾತು ಕೋಳಿ ಸಾಕಿದ್ದ ಕೇಸ್ ​ಗೆ ಸಂಬಂಧಿಸಿ ಈಗ ನಟನಿಗೆ ಫ್ರೆಶ್ ನೋಟಿಸ್ ನೀಡಲಾಗಿದೆ.

ತಿ.‌ನರಸೀಪುರ ನ್ಯಾಯಾಲಯದಿಂದ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಗೆ ಸಮನ್ಸ್ ಜಾರಿಯಾಗಿದೆ. ವಿಚಾರಣೆಗೆ ಹಾಜರಾಗಲು ಸಮಸ್ಸ್ ಜಾರಿ ಮಾಡಿರೋ ನ್ಯಾಯಾಲಯ ʼಬಾರ್‌ ಹೆಡೆಡ್‌ ಗೂಸ್‌ʼ ಎಂಬ 4 ವಿಶಿಷ್ಟ ಪ್ರಭೇದದ ಬಾತುಕೋಳಿಗಳನ್ನು ಕಾನೂನು ಬಾಹಿರವಾಗಿ ಸಾಕಿದ್ದ ದರ್ಶನ್ ವಿರುದ್ಧ ವಿಚಾರಣೆಗೆ ಬರುವಂತೆ ನೋಟಿಸ್​​ನಲ್ಲಿ ತಿಳಿಸಿದೆ.

ಕೆಂಪಯ್ಯನ ಹುಂಡಿಯ ನಟ ದರ್ಶನ್ ತೋಟದ ಮೇಲೆ ದಾಳಿ ಮಾಡಿದ್ದ ಅರಣ್ಯಾಧಿಕಾರಿಗಳು ಈ ವೇಳೆ ವಿದೇಶಿ ಪ್ರಭೇದದ ಬಾತು ಕೋಳಿ ವಶಕ್ಕೆ ಪಡೆದಿದ್ದರು. ಬಾರ್‌ ಹೆಡೆಡ್‌ ಗೂಸ್‌ ಹೆಚ್ಚಾಗಿ ಮಧ್ಯ ಏಷ್ಯಾ ಪ್ರದೇಶದ್ದಾಗಿದ್ದು, ವಲಸೆ ಅವು ಬಂದಿದ್ದವು. ಇವುಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧ. ಮತ್ತು ಇವು ಅಳಿವಿನಂಚಿನ ಪಕ್ಷಿಯಾಗಿದೆ.

ಈ ಹಿಂದೆ ನಟ ಬಾತುಕೊಳಿಗಳನ್ನ ಸ್ನೇಹಿತರು ನೀಡಿದ್ದರು ಎಂದು ಸ್ಪಷ್ಟನೆ ನೀಡಿದ್ದರು. ನಟ ದರ್ಶನ್ ವಿರುದ್ಧ ನಿಷೇಧಿತ ವನ್ಯ ಪಕ್ಷಿಗಳ ಸಾಕಣೆಗಾಗಿ ಪ್ರಕರಣ ದಾಖಲಾಗಿತ್ತು. ಇದೀಗ ನ್ಯಾಯಾಲಯ ವಿಚಾರಣೆಗೆ ಬರುವಂತೆ ನಟನಿಗೆ ಮತ್ತು ಪತ್ನಿಗೆ ಸಮನ್ಸ್ ನೀಡಿದೆ.

ಚಲಿಸುತ್ತಿದ್ದ ಬಸ್ಸಿನ ಕಿಟಕಿಗೆ ಹತ್ತಿ ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ..! ಇಲ್ಲಿದೆ ವಿಡಿಯೋ

 

See also  14 ವರ್ಷದ ಬಾಲಕಿಯಿಂದ ಸುಳ್ಳು ಲೈಂಗಿಕ ಕಿರುಕುಳದ ಕಥೆ! ಮನಃಶಾಸ್ತ್ರಜ್ಞರಿಂದ ಬಯಲಾಯ್ತು ರಹಸ್ಯ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget