ಕ್ರೈಂರಾಜ್ಯವೈರಲ್ ನ್ಯೂಸ್ಸಿನಿಮಾ

ಕೊಲೆ ಆರೋಪಿ ದರ್ಶನ್‌ ಇರುವ ಸೆಲ್ ಗೆ ಟಿವಿ ಅಳವಡಿಸಿದ ಅಧಿಕಾರಿಗಳು..! ದರ್ಶನ್ ಕೇಳಿದ ಆ ಮೂರು ಬೇಡಿಕೆಗಳನ್ನು ಈಡೇರಿಸಿದ ಪೊಲೀಸರು..!

268

ನ್ಯೂಸ್ ನಾಟೌಟ್: ಆರೋಪಿ ನಟ ದರ್ಶನ್‌ ಗೆ (Darshan) ಕೆಲ ದಿನಗಳ ಹಿಂದೆ ಕೇಳಿದ್ದ ಟಿವಿ ಟಿವಿಯನ್ನು ಜೈಲಿನ ಸೆಲ್ ನೊಳಗೆ ಅಳವಡಿಸಿದ್ದಾರೆ. ಈ ಮೂಲಕ ಸತತ ಮೂರನೇ ಬಾರಿಗೆ ದರ್ಶನ್ ಅವರ ಬೇಡಿಕೆಯನ್ನು ಜೈಲಧಿಕಾರಿಗಳು ಈಡೇರಿಸಿದ್ದಾರೆ.

ಕಳೆದ ಐದು ದಿನಗಳ ಹಿಂದೆ ಟಿವಿಗೆ ಆರೋಪಿ ದರ್ಶನ್ ಬೇಡಿಕೆ ಇಟ್ಟಿದ್ದರು. ಐದು ದಿನಗಳ ಬಳಿಕ ಇಂದು(ಸೆ.7) ಬೆಳಗ್ಗೆ ದರ್ಶನ್ ಇರುವ ಸೆಲ್‌ಗೆ ಟಿವಿ ಅಳವಡಿಸಲಾಗಿದೆ.
ಜಾರ್ಜ್‌ಶೀಟ್‌ ಸಲ್ಲಿಕೆ ಸೇರಿದಂತೆ ಹೊರ ಜಗತ್ತಿನ ವಿಷಯ ತಿಳಿದುಕೊಳ್ಳವ ಕುತೂಹಲ ಇರುವ ಹಿನ್ನೆಲೆ, ಕಳೆದ ಮಂಗಳವಾರ ಟಿವಿ ನೀಡಬೇಕೆಂದು ದರ್ಶನ್ ಮನವಿ ಮಾಡಿದ್ದರು. ಜೈಲು ನಿಯಮದ ಪ್ರಕಾರ ಟಿವಿ ನೀಡಬಹುದು. ಅದರೆ ಟಿವಿ ರಿಪೇರಿ ಇದ್ದ ಹಿನ್ನೆಲೆ ಈವರೆಗೂ ನೀಡಿರಲಿಲ್ಲ. ಆದರೆ, ಇಂದು ದರ್ಶನ್ ಇರುವ ಸೆಲ್‌ಗೆ ಟಿವಿ ನೀಡಲಾಗಿದೆ.

ಹೈಯರ್ ಕಂಪನಿಯ 32 ಇಂಚಿನ ಟಿವಿಯನ್ನು ದರ್ಶನ್ ಇರುವ ಸೆಲ್‌ಗೆ ನೀಡಲಾಗಿದೆ. ಸದ್ಯ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದರ್ಶನ್ ಕೇಳಿದ್ದ ಮೂರು ಬೇಡಿಕೆಗಳು ಈಡೇರಿದಂತಾಗಿದೆ. ಸರ್ಜಿಕಲ್ ಚೇರ್ ಮೊದಲನೆಯದ್ದು. ಫೋನ್ ಕಾಲ್ ಮಾತನಾಡೋಕೆ ಅವಕಾಶ ಕೇಳಿದ್ದು ಎರಡನೆಯದ್ದು. ಇದೀಗ ಟಿವಿ ನೀಡುವ ಮೂಲಕ ದರ್ಶನ್ ಮೂರು ಬೇಡಿಕೆ ಈಡೇರಿಸಲಾಗಿದೆ.

https://newsnotout.com/2024/09/doctors-priscription-kannada-news-kannada-news-medicine/
See also  ಹಿಂದೂ ವಿವಾಹ ನಂತರ ಮತಾಂತರವಾದ್ರೆ ಮದುವೆ ಅಸಿಂಧು ಆಗುತ್ತದೆಯೇ? ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಪತಿ ಜೀವನಾಂಶ ಪಾವತಿಸಬೇಕೆ? ಕೋರ್ಟ್ ಹೇಳಿದ್ದೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget