ಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್ಸಿನಿಮಾ

ಬೇಲ್ ಮೇಲೆ ಹೊರಬಂದಿರುವ ನಟ ದರ್ಶನ್ ವಿರುದ್ಧ ದೂರು ದಾಖಲಿಸಿದ ಲಾಯರ್ ಜಗದೀಶ್..! ಕೋಡಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ನೀಡಿರುವ ದೂರಿನಲ್ಲೇನಿದೆ..?

257

ನ್ಯೂಸ್ ನಾಟೌಟ್: ಜೈಲು ಸೇರಿದ್ದ ನಟ ದರ್ಶನ್‌ ಗೆ ಬೆನ್ನು ನೋವು ಹಿನ್ನೆಲೆ ಚಿಕಿತ್ಸೆಗೆಂದು ಹೈಕೋರ್ಟ್‌ ಮಂಧ್ಯಂತರ ಜಾಮೀನು ನೀಡಿದೆ. ಇದರ ಬೆನ್ನಲ್ಲೇ ಇದೀಗ ಬಿಗ್‌ಬಾಸ್‌ ಕನ್ನಡ ಸೀಸನ್‌ 11ನಿಂದ ಹೊರಬಿದ್ದ ಲಾಯರ್‌ ಕೆ.ಎನ್‌.ಜಗದೀಶ್‌ ನಟ ದರ್ಶನ್‌ ವಿರುದ್ಧ ಕೋಡಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.

ಕೋರ್ಟ್‌ ಆದೇಶದ ಮೇರೆಗೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ ದರ್ಶನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಬಿಗ್‌ಬಾಸ್‌ ರಿಯಾಲಿಟಿ ಶೋಗೆ ತೆರಳಿ ಅವಾಚ್ಯ ಶಬ್ಧ ಬಳಸಿದ ಆರೋಪದ ಮೇಲೆ ವಾಪಸ್‌ ಆಗಿದ್ದ ಲಾಯರ್‌ ಜಗದೀಶ್‌ ಮಂಗಳವಾರ (ನವೆಂಬರ್‌ 05) ಕೋಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದರ್ಶನ್‌ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರು ಪ್ರತಿಯಲ್ಲಿ ಲಾಯರ್‌ ಜಗದೀಶ್‌ “ನಾನು ದರ್ಶನ್ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದೇ ಎಂದು ದರ್ಶನ್ ಅಭಿಮಾನಿಗಳು ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಅವರ ಅಭಿಮಾನಿಗಳಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಕಳೆದ 2 ದಿನಗಳಲ್ಲಿ ಬರೋಬ್ಬರಿ 1,000ಕ್ಕೂ ಹೆಚ್ಚು ಬಾರಿ ಬೆದರಿಕೆ ಕರೆಗಳು ಬಂದಿವೆ. ದರ್ಶನ್ ಅಭಿಮಾನಿ ರಿಷಿ ಎನ್ನುವ ವ್ಯಕ್ತಿಯೇ ನನಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಇದೆಲ್ಲದಕ್ಕೂ ಜಾಮೀನಿನ ಮೇಲೆ ಹೊರ ಬಂದು ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್ ಸೂಚನೆ ಕೊಟ್ಟಿದ್ದಾರೆಂದು” ಆರೋಪ ಮಾಡಿದ್ದಾರೆ.

ನಟ ದರ್ಶನ್‌ ನೆಟ್‌ವರ್ಕ್ ತುಂಬಾ ದೊಡ್ಡದಿದೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ತನಗೆ ಹಾಗೂ ತನ್ನ ಕುಟುಂಬಕ್ಕೆ ರಕ್ಷಣೆ ಕೊಡಬೇಕು. ನಟ ದರ್ಶನ್ ಹಾಗೂ ರಿಷಿ ಇಬ್ಬರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಲಾಯರ್‌ ಕೆ.ಎನ್‌.ಜಗದೀಶ್ ದೂರಿನಲ್ಲಿ ಮನವಿ ಮಾಡಿದ್ದಾರೆ.

Click

https://newsnotout.com/2024/11/ritain-bengaluru-kannada-news-viral-news-radhavendra/
https://newsnotout.com/2024/11/sowthadka-mahaganapathi-temple-kannada-news-viral-news/
https://newsnotout.com/2024/11/kannada-news-salman-khan-kannada-news-viral-news-5-crore-karnataka/
https://newsnotout.com/2024/11/court-kannada-news-yash-and-radhika-pandith/
https://newsnotout.com/2024/11/kannada-news-viral-video-uncle-madya-pradesh/
See also  ಅವೈಜ್ಞಾನಿಕವಾಗಿ ವಾಹನ ಸವಾರರನ್ನು ತಡೆಯಬೇಡಿ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ ಗೃಹಸಚಿವ..! ಅಧಿಕಾರಿಗಳ ಜೊತೆ ಜಿ ಪರಮೇಶ್ವರ್ ಸಭೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget