ಕ್ರೈಂರಾಜ್ಯವೈರಲ್ ನ್ಯೂಸ್ಸಿನಿಮಾ

ದರ್ಶನ್ ಜಾಮೀನಿಗೆ ಶ್ಯೂರಿಟಿ ಹಾಕಿದ ನಟ ಧನ್ವೀರ್‌..! ಕೋರ್ಟ್ ದರ್ಶನ್ ಗೆ ವಿಧಿಸಿದ ಷರತ್ತುಗಳೇನು..?

258

ನ್ಯೂಸ್ ನಾಟೌಟ್: ದರ್ಶನ್ ​ಗೆ ಮಧ್ಯಂತರ ಜಾಮೀನು ಮಂಜೂರಾಗುತ್ತಿದ್ದಂತೆ ಇಂದೇ ಬಿಡುಗಡೆಯ ಪ್ರಕ್ರಿಯೆ ಮುಗಿಸಿ ದರ್ಶನ್ ​ನನ್ನು ಕರೆದುಕೊಂಡು ಬರಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ನಟ ಧನ್ವೀರ್ ಇದೀಗ ದರ್ಶನ್​ ಜಾಮೀನಿಗೆ ಶ್ಯೂರಿಟಿ ನೀಡಿದ್ದಾರೆ ಎನ್ನಲಾಗಿದೆ.

ಶ್ಯೂರಿಟಿ ಪೂರೈಸಲು ನಟ ಧನ್ವಿರ್‌ ಆಗಮಿಸಿದ್ದಾರೆ. ವಕೀಲ ಸುನೀಲ್ ಜೊತೆ ನಟ ಧನ್ವಿರ್ ಆಗಮಿಸಿದ್ದರು. ಹೈಕೋರ್ಟ್ ಆದೇಶ ಪ್ರತಿ, ದಾಖಲೆಗಳ ಜೊತೆ ವಕೀಲರು ಆಗಮಿಸಿದ್ದಾರೆ. ಬಹುತೇಕ ಇಂದೇ ಜೈಲಿನಿಂದ ದರ್ಶನ್ ರಿಲೀಸ್ ಆಗುತ್ತಾರೆ ಎನ್ನಲಾಗಿದೆ. ಧನ್ವೀರ್ ಜೊತೆಗೆ ದರ್ಶನ್ ಸಹೋದರ ದಿನಕರ್‌ ಕೂಡ ಕೋರ್ಟ್ ಗೆ ಹಾಜರಾಗಿದ್ದಾರೆ ಮತ್ತು ದರ್ಶನ್ ಪಾಸ್ ಪೋರ್ಟ್‌ ಅನ್ನು ದಿನಕರ್‌ ಕೋರ್ಟ್‌ಗೆ ತಂದಿದ್ದಾರೆ. ಇಮೇಲ್ ಮೂಲಕ ಬಳ್ಳಾರಿ ಜೈಲಿಗೆ ಆದೇಶ ಪ್ರತಿ ರವಾನಿಸಲು ನ್ಯಾಯಾಧೀಶ ಜೈಶಂಕರ್ ಸೂಚನೆ ನೀಡಿದ್ದಾರೆ.

ಬೇರೆ ದೇಶಗಳಿಗೆ ತೆರಳದಂತೆ ಪಾಸ್ ಪೋರ್ಟ್ ಅನ್ನು ಕೋರ್ಟ್ ವಶಪಡಿಸಿಕೊಂಡಿದೆ. ದರ್ಶನ್ ಬೆಂಗಳೂರು ಬಿಟ್ಟು ಹೋಗುವಂತಿಲ್ಲ. ಟ್ರಯಲ್ ನಡೆಸುವ ಕೋರ್ಟ್ ವ್ಯಾಪ್ತಿಯಲ್ಲಿಯೇ ಚಿಕಿತ್ಸೆ ನಡೆಲಿದೆ. ದರ್ಶನ್ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡುವಂತಿಲ್ಲ. ಸಾಮಾಜಿಕ ಜಾಲತಾಣದಲ್ಲೂ ಪ್ರತಿಕ್ರಿಯೆ ನೀಡುವಂತಿಲ್ಲ. ಮಧ್ಯಂತರ ಜಾಮೀನು ಮುಗಿದ ಬಳಿಕ ಕೋರ್ಟ್ ಮುಂದೆ ಹಾಜರಾಗಬೇಕು. ಮಧ್ಯಂತರ ಜಾಮೀನಿನ ಅವಧಿಯಲ್ಲಿ ಕೋರ್ಟ್ ವ್ಯಾಪ್ತಿ ಬಿಟ್ಟು ಹೋಗುವಂತಿಲ್ಲ. ದರ್ಶನ್ ಗೆ ಇನ್ನೂ ಕೆಲ ಷರತ್ತುಗಳನ್ನು ಹೈಕೋರ್ಟ್‌ ವಿಧಿಸಿದೆ.

Click

https://newsnotout.com/2024/10/darshan-thugudeepa-got-bail-kannada-news-viral-news-d/
https://newsnotout.com/2024/10/house-car-issue-cctv-putage-viral-news-madyapradesh/
https://newsnotout.com/2024/10/social-media-kananda-news-7-people-arrested-viral-news-s/
https://newsnotout.com/2024/10/yash-acting-kannada-cinema-toxic-tree-cutting-eshwar-kandre-allegation/
https://newsnotout.com/2024/10/goa-and-karnataka-police-join-operation-kannada-news-v-thief/
See also  ಹಾರಾಟದ ವೇಳೆ ಆಗಸದಲ್ಲಿ ಅಲುಗಾಡಿದ ವಿಮಾನ, ಕಿರುಚಿದ ಪ್ರಯಾಣಿಕರು..! ಅಷ್ಟಕ್ಕೂ ಅಲ್ಲೇನಾಯ್ತು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget