ಕ್ರೈಂವೈರಲ್ ನ್ಯೂಸ್ಸಿನಿಮಾ

ಅಂಬರೀಶ್ ಇದ್ದಿದ್ದರೆ ದರ್ಶನ್‌ ನ ಕಪಾಳಕ್ಕೆ ಹೊಡೆದು ಕೇಳುತ್ತಿದ್ದರು ಎಂದ ನಿರ್ದೇಶಕ..! ಇಲ್ಲಿದೆ ಸಂಪೂರ್ಣ ಮಾಹಿತಿ

222

ನ್ಯೂಸ್‌ ನಾಟೌಟ್‌: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಕುರಿತು ನಿರ್ಮಾಪಕ ಮತ್ತು ನಿರ್ದೇಶಕ ಓಂ ಪ್ರಕಾಶ್ ರಾವ್ ಪ್ರತಿಕ್ರಿಯಿಸಿದ್ದಾರೆ. ಸಣ್ಣ ವಿಷಯಕ್ಕೆ ಹೀಗೆಲ್ಲ ಮಾಡಿಕೊಂಡದ್ದು ಬೇಸರದ ಸಂಗತಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು, ಅಂಬರೀಶ್ ಇರುತ್ತಿದ್ದರೆ ದರ್ಶನ್ ಕಪಾಳಕ್ಕೆ ಬಾರಿಸಿ ಕೇಳುತ್ತಿದ್ದರು ಎಂದಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಸ್ಯಾಂಡಲ್‌ವುಡ್‌ನಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇಷ್ಟು ಸಣ್ಣ ವಿಷಯಕ್ಕೆ ಅವರು ಕೊಲೆ ಮಾಡುವ ನಿರ್ಧಾರ ಮಾಡಬಾರದಿತ್ತು. ಈಗ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಅವರಿಗೆ ಇದೆಲ್ಲ ಬೇಕಿರಲಿಲ್ಲ ಎಂದು ಹೇಳಿದ್ದಾರೆ. ನಟ ದಿ.ಅಂಬರೀಶ್ ಅವರಿಗೆ ನಟ ದರ್ಶನ್ ತುಂಬಾ ಗೌರವ ಕೊಡುತ್ತಿದ್ದರು.

ಅವರ ಈ ವೇಳೆ ಇದ್ದಿದ್ದರೆ ದರ್ಶನ್ ಕರೆದು ಕಪಾಳಕ್ಕೆ ಹೊಡೆಯುತ್ತಿದ್ದರು. ಇದು ತಪ್ಪು, ಹೀಗೆ ಮಾಡುವುದು ಸರಿಯಲ್ಲ ಎಂದು ಬುದ್ಧಿ ಹೇಳುತ್ತಿದ್ದರು. ಸುಮಲತಾ ಅವರು ಸಹ ದರ್ಶನ್ ಪ್ರಕರಣದಿಂದ ನೊಂದಿರುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು. ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ನಡೆದ ಹಿಂಸಾ ಪ್ರಯೋಗ ತುಂಬಾ ತಪ್ಪು ಎಂದು ಅವರು ಖಂಡಿಸಿದರು. ಇದನ್ನು ಯಾರೇ ಮಾಡಿರಲಿ, ಅವರಿಗೆಲ್ಲ ಕಾನೂನಿನಡಿ ಶಿಕ್ಷೆ ಆಗಬೇಕು. ನಮ್ಮ ಕರ್ನಾಟಕ ಪೊಲೀಸರು ವಿಚಾರಣೆ ಮಾಡಿರುವ ರೀತಿ, ತನಿಖೆ ನಡೆದಿರುವ ಹಾದಿ ಶ್ಲಾಘನೀಯ ಎಂದರು.

Click 👇

https://newsnotout.com/2024/06/kodagu-theft-issue-from-putture-travellers-kannada-news
See also  ಪುತ್ತೂರು: ಅತ್ಯಾಚಾರ ಪ್ರಕರಣದ ತನಿಖೆ ಮತ್ತು ವಿಚಾರಣೆಗೆ ಹೈಕೋರ್ಟ್‌ ತಡೆಯಾಜ್ಞೆ..! ಅರುಣ್‌ ಕುಮಾರ್‌ ಪುತ್ತಿಲಗೆ ತಾತ್ಕಾಲಿಕ ರಿಲೀಫ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget