ಕ್ರೈಂವೈರಲ್ ನ್ಯೂಸ್ಸಿನಿಮಾ

ಇಂದು(ಸೆ.23) ದರ್ಶನ್ ಜಾಮೀನು ಅರ್ಜಿ ವಿಚಾರಣೆ..! ಮತ್ತೆ ಜೈಲು ಬದಲಾವಣೆ..?

227

ನ್ಯೂಸ್ ನಾಟೌಟ್: ಆರೋಪಿ ದರ್ಶನ್‌ ಗೆ ಇಂದು(ಸೆ.23) ಮಹತ್ವದ ದಿನವಾಗಿದ್ದು, ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಲಿದೆ.

ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ 26 ದಿನಗಳಿಂದ ಕಾಲ ಕಳೆಯುತ್ತಿದ್ದಾರೆ. ಜಾಮೀನಿಗೆ ಅರ್ಜಿ ಹಾಕಿರೋ ಆರೋಪಿ ದರ್ಶನ್‌ಗೆ ಇಂದು ಮಹತ್ವದ ದಿನವಾಗಿದೆ. ಶನಿವಾರ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದ ದರ್ಶನ್ ಪರ ವಕೀಲರು ತುರ್ತಾಗಿ ವಿಚಾರಣೆ ಮಾಡುವಂತೆ ಮನವಿ ಮಾಡಿದ್ದರು. ಸೋಮವಾರಕ್ಕೆ ಜಾಮೀನು ಅರ್ಜಿ ಮುಂದೂಡಲಾಗಿತ್ತು. ಹೀಗಾಗಿ ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಜಾಮೀನು ಅರ್ಜಿ ವಿಚಾರವಾಗಿ ಜೈಲು ಸಿಬ್ಬಂದಿಯಿಂದ ಪದೇ ಪದೇ ಮಾಹಿತಿ ಪಡೆಯುತ್ತಿದ್ದಾರೆ. ಇದೇ ಕಾರಣಕ್ಕೆ ಇಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ವಕೀಲರು ಜೈಲಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಬೆನ್ನು ನೋವಿನ ಸಮಸ್ಯೆ ಇದ್ದರೂ ಒಂದು ಪ್ಲಾಸ್ಟಿಕ್ ಚೇರ್ ಸಿಗುತ್ತಿಲ್ಲ. ದಿಂಬು, ಬೆಡ್ ಕೂಡ ಜೈಲು ಅಧಿಕಾರಿಗಳು ಕೊಡುತ್ತಿಲ್ಲ ಎಂದು ದರ್ಶನ್ ದೂರಿದ್ದಾರೆ. ಒಂದು ವೇಳೆ ಜಾಮೀನು ಸಿಗದೇ ಇದ್ದರೆ ಮುಂದೆ ಜೈಲು ಬದಲಾವಣೆಯ ಬಗ್ಗೆಯೂ ಮಹತ್ವದ ಚರ್ಚೆ ನಡೆಯುವ ಸಾಧ್ಯತೆಯಿದೆ.

See also  ಸುಳ್ಯ: ಕುರುಂಜಿ ಭಾಗ್ ಬಳಿ ಯುವಕರ ಚಕಮಕಿ, ಇತ್ತಂಡಗಳಿಗೆ ಸುಮೋಟೋ ಬಿಸಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget