ಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್ಸಿನಿಮಾ

ಜೈಲಿನೊಳಗಿರೋ ನಟ ದರ್ಶನ್‌ ಗೆ ವಕೀಲರೊಬ್ಬರಿಂದ ರಹಸ್ಯ ಪತ್ರ..! ಅಪರಿಚಿತ ವ್ಯಕ್ತಿಯಿಂದ ನಟನ ಸೆಲ್ ಗೆ ಪುಸ್ತಕ ಪಾರ್ಸೆಲ್..!

245

ನ್ಯೂಸ್ ನಾಟೌಟ್: ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿ ಬಂಧಿಯಾಗಿರುವ ನಟ ದರ್ಶನ್‌ ಹೆಸರಿಗೆ, ಭಾನುವಾರ ವಕೀಲರೊಬ್ಬರಿಂದ ಪ್ರಕರಣದ ಕುರಿತ ಪತ್ರವೊಂದು ಜೈಲಿಗೆ ಬಂದಿದೆ ಎನ್ನಲಾಗಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ನಟ ದರ್ಶನ್‌ಗೆ ವಿಶೇಷ ಸೌಲಭ್ಯ ಒದಗಿಸಿದ ಆರೋಪದ ಹಿನ್ನೆಲೆ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಇಲ್ಲಿನ ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಬಂಧಿಯಾಗಿರುವ ನಟ ದರ್ಶನ್‌ಗೆ ನಿತ್ಯ ಕಾಲ ಕಳೆಯಲು ಸದ್ಯ ಪುಸ್ತಕಗಳೇ ಆಸರೆಯಾಗಿವೆ.
ಇದರೊಂದಿಗೆ ಟಿವಿಗಾಗಿ ವಾರದಿಂದ ಜೈಲಾಧಿಕಾರಿಗಳಿಗೆ ನಿತ್ಯ ಪ್ರಶ್ನೆ ಮಾಡುತ್ತಿದ್ದು, ಟಿವಿ ದುರಸ್ತಿ ಹಿನ್ನೆಲೆ ಸೆಲ್‌ಗೆ ಅಳವಡಿಸಲು ಜೈಲಾಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಇದಲ್ಲದೆ, ಇತ್ತೀಚೆಗೆ ದರ್ಶನ್‌ ಅವರ ಪತ್ನಿ ಹಾಗೂ ವಕೀಲರು ಜೈಲಿಗೆ ಭೇಟಿ ನೀಡಿ ಪ್ರಕರಣದ ಕುರಿತು ಚರ್ಚೆ ನಡೆಸಿದ್ದರು. ಈಗ ವಕೀಲರೊಬ್ಬರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರವೊಂದು ಜೈಲಿಗೆ ಬಂದಿದ್ದು, ಪತ್ರದಲ್ಲಿ ಏನಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲ.

ಈಗ ಅಪರಿಚಿತ ವ್ಯಕ್ತಿಯಿಂದ ಜೈಲಿನಲ್ಲಿರುವ ದರ್ಶನ್‌ ಹೆಸರಿನಲ್ಲಿ’ಹನುಮ ನಾಮ’ ಮತ್ತು ‘ಕಥೆ ಪುಸ್ತಕ’ ಪಾರ್ಸೆಲ್‌ ಬಂದಿದೆ. ಪುಸ್ತಕದೊಂದಿಗೆ ಚೀಟಿಯೊಂದರಲ್ಲಿ, ”ಸರ್ವ ಸಂಕಷ್ಟಕ್ಕೆ ಹನುಮಂತನೇ ಪರಿಹಾರ, ಹನುಮನ ಆಶೀರ್ವಾದ ನಿಮ್ಮ ಮೇಲಿದೆ, ಪುಸ್ತಕ ಓದಿರಿ… ಸಂಕಟ ಬಂದಾಗ ಹನುಮನಾಮ ಸ್ಮರಣೆ ಮಾಡಿ ಒಳ್ಳೆಯದಾಗುತ್ತದೆ,” ಎಂದು ಬರೆಯಲಾಗಿದೆ ಎನ್ನಲಾಗಿದೆ.

Click

https://newsnotout.com/2024/09/mangaluru-masjid-issue-vhp-protest-in-bc-road-kannada-news/
See also  ವಿಟ್ಲ: ಈ.ಡಿ. ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯ ಮನೆ ದರೋಡೆ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ..! ಕೇರಳದ ಪೊಲೀಸ್ ಅಧಿಕಾರಿ ಅರೆಸ್ಟ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget