ಕ್ರೈಂವೈರಲ್ ನ್ಯೂಸ್ಸಿನಿಮಾ

Darshan Thoogudeepa Case: ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳನ್ನು ಪಟ್ಟಣಗೆರೆ ಶೆಡ್ ಗೆ ಕರೆದೊಯ್ದ ಪೊಲೀಸರು..! ಸ್ಥಳ ಮಹಜರು ವೇಳೆ ದರ್ಶನ್ ಬಳಿ ಬಂದು ಕಣ್ಣೀರಿಟ್ಟ ಪವಿತ್ರ ಗೌಡ..!

255

ನ್ಯೂಸ್ ನಾಟೌಟ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ, ಪವಿತ್ರಾಗೌಡ ಸೇರಿದಂತೆ ಎಲ್ಲಾ 13 ಆರೋಪಿಗಳನ್ನು ಪಟ್ಟನಗೆರೆಯ ಶೆಡ್ ಗೆ ಕರೆದೊಯ್ದಿರುವ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಚಿತ್ರದುರ್ಗದಿಂದ ಅಪಹರಿಸಿಕೊಂಡು ಬಂದಿದ್ದ ರೇಣುಕಾಸ್ವಾಮಿಯನ್ನು ಇದೇ ಶೆಡ್ ಗೆ ಕರೆದೊಯ್ದು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದರು ಎನ್ನಲಾಗಿದೆ.

ಹೀಗಾಗಿ ಅಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲು ಎಫ್ಎಸ್ಎಲ್ ತಂಡ ಹಾಗೂ ಪೊಲೀಸರು ಮುಂದಾಗಿದ್ದಾರೆ. ಸ್ಥಳ ಮಹಜರು ಮಾಡುತ್ತಿದ್ದ ವೇಳೆ ಶೆಡ್ ನ ಗೇಟ್ ಬಳಿ ದರ್ಶನ್ ಮತ್ತು ಪವಿತ್ರ ಗೌಡ ಹತ್ತಿರ ಬಂದು ನಿಂತಿದ್ದರು, ಈ ವೇಳೆ ಪವಿತ್ರ ಕಣ್ಣೀರಿಟ್ಟ ದೃಶ್ಯ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿವೆ.

ಇತ್ತೀಚೆಗಷ್ಟೇ ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾಗೌಡ, ನಿಖಿಲ್, ವಿನಯ್, ಕಾರ್ತಿಕ್ ಮತ್ತು ರಾಘವೇಂದ್ರ ಸೇರಿದಂತೆ 13 ಆರೋಪಿಗಳನ್ನು ಮಂಗಳವಾರ (ಜೂ.11) ಬಂಧಿಸಲಾಗಿದ್ದು ನಿನ್ನೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆರೋಪಿಗಳನ್ನು7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣಗೆರೆಯ ಶೆಡ್ ನಲ್ಲಿ ಹತ್ಯೆ ಮಾಡಿದ ಬಳಿಕ ಆರೋಪಿಗಳ ಪೈಕಿ ನಾಲ್ವರು ಶವವನ್ನು ಸುಮನಹಳ್ಳಿಯ ಬಳಿ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಪಟ್ಟಣಗೆರೆ ಶೆಡ್ ಸ್ಥಳ ಮಹಜರಿಗೂ ಮುನ್ನ ಆರೋಪಿಗಳನ್ನು ಶವ ಎಸೆದ ಜಾಗದಲ್ಲಿ ಸ್ಥಳ ಮಹಜರು ನಡೆಸಿದ್ದರು ಎನ್ನಲಾಗಿದೆ.

Click 👇

https://newsnotout.com/2024/06/darshan-case-they-demands-a-lot-under-police-custody
https://newsnotout.com/2024/06/fir-on-darshan-forest-department-kannada-news
https://newsnotout.com/2024/06/anupam-agarwal-reacts-on-mangaluru-vijayothsava-issue
https://newsnotout.com/2024/06/darshan-pavithra-gowda-kannada-issue-renuka-swami-message
https://newsnotout.com/2024/06/vijaya-lakshmi-darshan-insta-unfollowed-by-wife
See also  ದರ್ಶನ್ ಪ್ರಕರಣ: ಕೈದಿ ನಂ.6106 ಸ್ಟಿಕ್ಕರ್ ಹಾಕಿಸಿದವರಿಗೆ ಕಾನೂನು ಕಂಟಕ..! ಪೊಲೀಸ್ ಇಲಾಖೆ ನೀಡಿದ ಎಚ್ಚರಿಕೆ ಏನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget