ಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

ದರ್ಶನ್ ​ಗೆ ಶಸ್ತ್ರಚಿಕಿತ್ಸೆಯ ಅಗತ್ಯ ಇದೆ ಎಂದ ವೈದ್ಯರು..! ಜೈಲಿನಲ್ಲಿ ಪೊಲೀಸರಿಗೆ ತಲೆನೋವಾದ ದರ್ಶನ್ ಬೆನ್ನುನೋವು..!

ನ್ಯೂಸ್ ನಾಟೌಟ್: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜೈಲು ಸೇರಿ ನಾಲ್ಕು ತಿಂಗಳಾಗಿವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗಲೇ ತಮಗೆ ಬೆನ್ನು ಮತ್ತು ಕೈ ನೋವು ಇರುವ ಕಾರಣ ವಿಶೇಷ ಬೆಡ್​ ಬೇಕೆಂದು, ಮನೆ ಊಟ ಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ ಅದನ್ನು ನೀಡಲಾಗಿರಲಿಲ್ಲ. ನ್ಯಾಯಾಲಯದ ಹೋರಾಟವೂ ವ್ಯರ್ಥವೇ ಆಗಿತ್ತು. ಆ ಬಳಿಕ ಬಳ್ಳಾರಿ ಜೈಲು ಸೇರಿರುವ ದರ್ಶನ್​ಗೆ ಬೆನ್ನು ನೋವು ಹೆಚ್ಚಾಗಿದೆ. ಆದರೆ ದರ್ಶನ್​ ಬೆನ್ನು ನೋವು ಕಾರಾಗೃಹ ಸಿಬ್ಬಂದಿಗೆ ತಲೆನೋವಾಗಿ ಕಾಡುತ್ತಿದೆ.

ದರ್ಶನ್​ಗೆ ಬೆನ್ನು ನೋವು ಹೆಚ್ಚಾಗಿದ್ದು, ಕಾರಾಗೃಹದ ವೈದ್ಯರು ವೀಕ್ಷಿಸಿ ಪೇಯಿನ್ ಕಿಲ್ಲರ್ ನೀಡಿದ್ದಾರೆ. ಅದಾದ ಬಳಿಕ ಹೊರಗಿನಿಂದ ವೈದ್ಯರನ್ನು ಕರೆಸಿ ತೋರಿಸಲಾಗಿದೆ. ವೈದ್ಯರು ಎಂಆರ್​ಐ ಮತ್ತು ಇತರೆ ಕೆಲ ಸ್ಕ್ಯಾನ್​ಗೆ ಸಲಹೆ ನೀಡಿದ್ದಾರೆ. ಆದರೆ ದರ್ಶನ್ ತಾವು ಯಾವುದೇ ಸ್ಕ್ಯಾನ್​ಗೆ ಒಳಗಾಗುವುದಿಲ್ಲ ಎಂದು ಹಠ ಹಿಡಿದಿದ್ದಾರೆ ಎನ್ನಲಾಗಿದೆ. ನಾನು ಚಿಕಿತ್ಸೆ ಪಡೆದುಕೊಂಡರೆ ಅದು ಬೆಂಗಳೂರಿನಲ್ಲೇ ಎಂದು ಪಟ್ಟು ಹಿಡಿದಿದ್ದಾರೆ. ಇದು ಪೊಲೀಸರಿಗೆ ತಲೆ ನೋವಾಗಿದೆ.

ದರ್ಶನ್ ಅನ್ನು ಬಳ್ಳಾರಿಯ ಬೀಮ್ಸ್ ಆಸ್ಪತ್ರೆ ವೈದ್ಯರು ಪರೀಕ್ಷಿಸಿ ಸಿಟಿ ಸ್ಕ್ಯಾನ್ ಮತ್ತು ಎಂಆರ್​ಐ ಸ್ಕ್ಯಾನ್​ಗೆ ಸೂಚನೆ ನೀಡಿದ್ದಾರೆ. ಅಲ್ಲದೆ ದರ್ಶನ್​ಗೆ ಶಸ್ತ್ರಚಿಕಿತ್ಸೆಯ ಅಗತ್ಯ ಇದೆ ಎಂದು ಸಹ ಹೇಳಿದ್ದಾರೆ ಎನ್ನಲಾಗಿದೆ. ವೈದ್ಯರ ಸಲಹೆಯಂತೆ ಬಳ್ಳಾರಿಯಲ್ಲಿಯೇ ಸಿಟಿ ಸ್ಕ್ಯಾನ್ ಮತ್ತು ಎಂಆರ್​ಐ ಸ್ಕ್ಯಾನ್​ ಮಾಡಲು ಪೊಲೀಸರು ಮುಂದಾಗಿದ್ದಾರೆ. ಆದರೆ ದರ್ಶನ್ ಇದನ್ನು ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ನಾನು ಬಳ್ಳಾರಿಯಲ್ಲಿ ಚಿಕಿತ್ಸೆಯಾಗಲಿ ಅಥವಾ ಇನ್ಯಾವುದೇ ಸ್ಕ್ಯಾನ್ ಆಗಲಿ ಮಾಡಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಇನ್ನು ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಇತ್ತೀಚೆಗಷ್ಟೆ ಮುಗಿದಿದ್ದು, ಸೋಮವಾರದಂದು ಜಾಮೀನು ಅರ್ಜಿಯ ತೀರ್ಪು ಹೊರಬೀಳಲಿದೆ. ಜಾಮೀನಿನಲ್ಲಿ ಹೊರಬಂದ ಬಳಿಕವೇ ಚಿಕಿತ್ಸೆ ಪಡೆದುಕೊಳ್ಳಲು ನಿರ್ಧರಿಸಿರುವಂತಿದೆ ಎಂದು ವರದಿ ತಿಳಿಸಿದೆ.

Click

https://newsnotout.com/2024/10/rathan-tata-benjamin-netanyahu-kannada-news/
https://newsnotout.com/2024/10/baby-the-inspector-adopted-the-baby-found-in-the-bush/
https://newsnotout.com/2024/10/sanjay-datt-in-kateel-durgaparameshwari-temple/
https://newsnotout.com/2024/10/vijayadashami-kannada-news-bjp-leader-distributed-sowrd-to-girls/
https://newsnotout.com/2024/10/9-year-old-girl-nomore-kannada-news-deva-guli/
https://newsnotout.com/2024/10/mangaluru-passport-issue-bangla-man-arrested-link-with-udupi/
https://newsnotout.com/2024/10/durga-pooje-navaratri-kannada-news-ladies-misbehaviour/
https://newsnotout.com/2024/10/bigboss-kannada-news-police-case-on-organiser-kannada-news/

Related posts

ಮಂತ್ರಾಲಯದಲ್ಲಿ ಭಾರೀ ಮಳೆಗೆ ಮಠದ ಅಂಗಳದಲ್ಲೇ ಮಲಗಿದ ಭಕ್ತರು..! ರಾಯರು ಸಶರೀರರಾಗಿ ವೃಂದಾವನಸ್ಥರಾದ ಪೂರ್ವಾರಾಧನೆಗೆ ಸೇರಿದ ಜನ

ಬ್ರಹ್ಮೋಸ್ ಏರೋಸ್ಪೇಸ್ ಇಂಜಿನಿಯರ್ ನಿಂದ ಪಾಕ್ ಪರ ಬೇಹುಗಾರಿಕೆ..! ಜೀವಾವಧಿ ಶಿಕ್ಷೆಗೆ ಆದೇಶಿಸಿದ ಕೋರ್ಟ್

ಮೆಟ್ರೊ ಬ್ರಿಡ್ಜ್ ಕೆಳಗೆ ಇಬ್ಬರು ಹುಡುಗಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಬಾಲಕ..! ಶಾಲಾ ಸಮವಸ್ತ್ರದಲ್ಲಿ ನಡೆಯಿತು ರಾಸಲೀಲೆ! ಇಲ್ಲಿದೆ ವೈರಲ್ ವಿಡಿಯೋ