ದೇಶ-ವಿದೇಶಬೆಂಗಳೂರುರಾಜ್ಯವೈರಲ್ ನ್ಯೂಸ್ಸಿನಿಮಾ

ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ..! ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಲು ಮುಂದಾದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್..!

ನ್ಯೂಸ್‌ ನಾಟೌಟ್ : ಇತ್ತೀಚೆಗೆ ದರ್ಶನ್​ ಬೇಲ್​ ಪಡೆಯಲು ಅರ್ಜಿ ಸಲ್ಲಿಸಿದ್ದರು. ಇಂದು(ಸೆ.23) ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ ಎನ್ನಲಾಗಿತ್ತು, ಆದರೆ ಅದು ಸಾಧ್ಯವಾಗಿಲ್ಲ. ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್​ 27ಕ್ಕೆ ಮುಂದೂಡಲಾಗಿದೆ.

ದರ್ಶನ್ ಬಳ್ಳಾರಿ ಜೈಲಿನಲ್ಲಿ ವಿಚಾರಾಧೀನ ಕೈದಿಯಾಗಿ ದಿನಗಳೆಯುತ್ತಿದ್ದು, ಎ1 ಪವಿತ್ರಾ ಗೌಡ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಸೆಪ್ಟೆಂಬರ್​ 25ಕ್ಕೆ ಮುಂದೂಡಿಕೆ ಆಗಿದೆ ಎಂದು ವರದಿ ತಿಳಿಸಿದೆ.

ದರ್ಶನ್ ಮತ್ತು ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಎಸ್​ಪಿಪಿ ಪ್ರಸನ್ನ ಕುಮಾರ್ ಕಾಲಾವಕಾಶ ಕೋರಿದ್ದಾರೆ. ಅದಕ್ಕೆ ನ್ಯಾಯಾಲಯ ಅವಕಾಶ ನೀಡಿದೆ. ವಿಚಾರಣೆಯನ್ನು ಮುಂದೂಡಿ 57ನೇ ಸಿಸಿಹೆಚ್ ನ್ಯಾಯಾಲಯದ ಜಡ್ಜ್ ಜೈಶಂಕರ್ ಆದೇಶ ನೀಡಿದ್ದಾರೆ. ಯಾವಾಗ ಜಾಮೀನು ಸಿಗತ್ತೋ ಎಂಬ ಚಿಂತೆಯಲ್ಲೇ ದರ್ಶನ್​, ಪವಿತ್ರಾ ಗೌಡ ಹಾಗೂ ಇನ್ನಿತರ ಆರೋಪಿಗಳು ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ.

Click

https://newsnotout.com/2024/09/renukaswamy-case-bail-sanctioned-to-16-accused-kannada-news/
https://newsnotout.com/2024/09/darshan-thugudeepa-kannada-news-actor-bail-appeal-in-court-kannada/
https://newsnotout.com/2024/09/6-year-old-baby-trapped-by-man-saved-by-monkey-kannada-news/

Related posts

ಏಕಾಏಕಿ ಎರಗಿದ ಕೋಲೆಬಸವ..! ಪವಾಡಸದೃಶವಾಗಿ ಬದುಕುಳಿದ ಬೈಕ್ ಸವಾರ..! ಇಲ್ಲಿದೆ ವೈರಲ್ ವಿಡಿಯೋ

ಮಿಲಿಟರಿ ಕಾರ್ಯಾಚರಣೆಯ ವೇಳೆ ಯೋಧರನ್ನು ಅಪಹರಿಸಿದ ಉಗ್ರರು..! ಓರ್ವ ಯೋಧನ ಮೃತದೇಹ ಪತ್ತೆ..!

ಅವಘಡದಲ್ಲಿ ಕಳೆದುಕೊಂಡ ಪುತ್ರನನ್ನು ಸಮಾರಂಭದಲ್ಲಿ ಕಂಡು ಭಾವುಕರಾದ ಹೆತ್ತವರು..! ಸಹೋದರನಿಗಾಗಿ ಸಹೋದರಿ ಮಾಡಿದ ಮನಕಲಕುವ ಘಟನೆ