ಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್ಸಿನಿಮಾ

Darshan Thoogudeepa: ಕೊಲೆ ಪ್ರಕರಣ: 7 ದಿನ ನಟ ದರ್ಶನ್ ಪೊಲೀಸ್ ಕಸ್ಟಡಿಗೆ, ನ್ಯಾಯಾಧೀಶರೆದುರು ಕಣ್ಣೀರು ಹಾಕಿದ ‘ಡಿಬಾಸ್’..!

249

ನ್ಯೂಸ್ ನಾಟೌಟ್: ಸಾಮಾನ್ಯ ವ್ಯಕ್ತಿಯೊಬ್ಬನ ಕೊಲೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಖ್ಯಾತ ಸಿನಿಮಾ ನಟ ದರ್ಶನ್ ಅವರನ್ನು ನ್ಯಾಯಾಲಯ ಮುಂದಿನ ಏಳು ದಿನಗಳ ತನಕ ಪೊಲೀಸ್ ಕಸ್ಟಡಿಗೆ ನೀಡಿದೆ. ಇಂದು ಸಂಜೆ (ಜೂ.11) ನ್ಯಾಯಾಲಯಕ್ಕೆ ದರ್ಶನ್ ಮತ್ತು ಟೀಂ ಅನ್ನು ಹಾಜರುಪಡಿಸಲಾಗುತ್ತದೆ. ಈ ವೇಳೆ ವಿಚಾರಣೆಯನ್ನು ನ್ಯಾಯಾಧೀಶರು ನಡೆಸುತ್ತಾರೆ.

ಪೊಲೀಸರಿಂದ ನಿಮಗೆ ಏನಾದರೂ ತೊಂದರೆ ಆಯಿತೇ..? ಎಂದು ಮೊದಲಿಗೆ ಕೇಳಿದ್ದಾರೆ. ಬಳಿಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ದರ್ಶನ್ ಕೈಕಟ್ಟಿ ನ್ಯಾಯಾಧೀಶರ ಎದುರು ನಿಂತಿದ್ದರು. ಮಾತ್ರವಲ್ಲ ಕಣ್ಣೀರು ಹಾಕಿದರು. ಇದಾದ ಬಳಿಕ ನ್ಯಾಯಾಲಯ ತನ್ನ ಆದೇಶವನ್ನು ಪ್ರಕಟಿಸುತ್ತೆ, ಮುಂದಿನ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಸೂಚಿಸುತ್ತೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಪೂರ್ಣ ಸತ್ಯಾಸತ್ಯತೆ ತಿಳಿದು ಬರಬೇಕು. ಇದಕ್ಕೆ ಸಮಗ್ರ ತನಿಖೆಯ ಅವಶ್ಯಕತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯ ಪಡುತ್ತದೆ. ಮಾತ್ರವಲ್ಲ ನಟ ದರ್ಶನ್ ಪ್ರಭಾವಿಯಾಗಿದ್ದು ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ ಎಂದು ಇದೇ ವೇಳೆ ನ್ಯಾಯಾಲಯ ತಿಳಿಸಿದೆ. ಸದ್ಯ ದರ್ಶನ್ ವಿರುದ್ಧ ಕಿಡ್ಯ್ಯಾಪ್ , ಕೊಲೆ , ಸಾಕ್ಷಿ ನಾಶದ ಪ್ರಕರಣ ದಾಖಲಾಗಿದೆ. ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ ದರ್ಶನ್ ಎ2 ಆರೋಪಿಯಾಗಿದ್ದಾರೆ.

Click 👇

https://newsnotout.com/2024/06/mangaluru-daiva-temple-kannada-news-n
https://newsnotout.com/2024/06/lawyer-kannada-news-darshan-thoogudeepa-to-court
https://newsnotout.com/2024/06/challenging-star-darshan-arrested-in-process
https://newsnotout.com/2024/06/bike-father-sister-and-son-conflict-kannada-news
See also  ದುಬಾರಿ ಮೀನು ಕಳ್ಳರ ಕೈ ಸೇರಿದ್ದೇಗೆ..? ಬರೋಬ್ಬರಿ 4.5 ಕೋಟಿ ರೂ. ಮೌಲ್ಯದ ಆ ಮೀನು ಯಾವುದು..? ಇಲ್ಲಿದೆ ರೋಚಕ ಸ್ಟೋರಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget