ಕ್ರೈಂದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

Darshan Thoogudeepa: ದರ್ಶನ್‌ ಬಗ್ಗೆ ಕೋಡಿಮಠ ಶ್ರೀಗಳಿಂದ ಸ್ಪೋಟಕ ಭವಿಷ್ಯ..! ಇಲ್ಲಿದೆ ಸಂಪೂರ್ಣ ಮಾಹಿತಿ

254

ನ್ಯೂಸ್ ನಾಟೌಟ್ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ದರ್ಶನ್‌ ಈಗ ಮತ್ತೆ 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಹೊಸ ಹೊಸ ಆರೋಪಗಳು ದರ್ಶನ್ ವಿರುದ್ಧ ಕೇಳಿಬರುತ್ತಿವೆ. ಇದರ ಜೊತೆ ದರ್ಶನ್ ಬಗ್ಗೆಯೂ ಮಾಧ್ಯಮದವರು ಕೇಳಿದ್ದಕ್ಕೆ ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ. ದೇಶದಲ್ಲಿ ಕ್ರೋಧಿ ನಾಮ ಸಂವತ್ಸರ ಇದೆ. ಈ ವರ್ಷ ಶುಭಗಳಿಗಿಂತ ಅಶುಭಗಳೇ ಹೆಚ್ಚಾಗಿ ನಡೆಯುತ್ತವೆ. ಜಲಕಂಟಕ, ಅಗ್ನಿಕಂಟಕ ಮತ್ತು ವಾಯು ಕಂಟಕಗಳು ಹೆಚ್ಚುತ್ತವೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಭಾರಿ ಮಳೆಯಾಗುವ ಬಗ್ಗೆ ಕೂಡ ಕೋಡಿಮಠ ಶ್ರೀಗಳು ಮುನ್ಸೂಚನೆ ಕೊಟ್ಟಿದ್ದು, ಅತಿವೃಷ್ಠಿಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯಂದಿರೇ ಗುರುಗಳಾಗುತ್ತಾರೆ. ಹೆಣ್ಣು ಮಕ್ಕಳ ಪ್ರಾಬಲ್ಯ ಹೆಚ್ಚುತ್ತದೆ, ಇದರಿಂದ ಒಳ್ಳೆಯದು ಆಗಬಹುದು, ಕೆಟ್ಟದ್ದೂ ಆಗಬಹುದು ಎಂದಿದ್ದಾರೆ.ಭಯದಿಂದ ಸುಮ್ಮನಿದ್ದ ಅನೇಕರು ಈಗ ದರ್ಶನ್ ಮಾಡಿರುವ ಕೃತ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ.

ದರ್ಶನ್ ಬಗ್ಗೆ ಕೋಡಿಮಠ ಶ್ರೀಗಳು ಹೇಳಿಕೆ ನೀಡಿದ್ದು, ಕೋಪದ ಕೈಗೆ ಬುದ್ದಿ ಕೊಟ್ಟರೆ ಈ ರೀತಿ ಅವಘಡಗಳು ನಡೆಯುತ್ತವೆ ಎಂದಿದ್ದಾರೆ. ಕರೆಯದೇ ಬರುವವನು ಕೋಪ, ಬರೆಯದೇ ಓದುವವನು ಕಣ್ಣು, ಬರಿಗಾಲಿನಲ್ಲಿ ನಡೆಯುವವನು ಕನಸು ಎಂದು ನಿರ್ಮಾಪಕ ಉಮಾಪತಿ ಬಳಿ ಸ್ವಾಮೀಜಿ ಹೇಳಿದ್ದಾರೆ. ಕೋಪದ ಕೈಗೆ ಬುದ್ದಿ ಕೊಡದೇ ಇದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದಿದ್ದಾರೆ.

See also  ಮಾಜಿ ವಕ್ಫ್ ಸಚಿವೆಯ ಮಗನ ಆಸ್ತಿಗೂ ಈಗ ವಕ್ಫ್ ಕಂಟಕ..! ಬಿಜೆಪಿ ಶಾಸಕಿಯ ಕುಟುಂಬಕ್ಕೆ ಶಾಕ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget